ಇಂಡಿಗೋ ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಯತ್ನಿಸಿದ ವಿದ್ಯಾರ್ಥಿ; ಕೇಸ್ ದಾಖಲು

ಕಳೆದ ಸೋಮವಾರ ರಾತ್ರಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದ ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಆರೋಪ ಮೇಲೆ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ವಿರುದ್ಧ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಂಡಿಗೋ ವಿಮಾನ
ಇಂಡಿಗೋ ವಿಮಾನTNIE

ಬೆಂಗಳೂರು: ಕಳೆದ ಸೋಮವಾರ ರಾತ್ರಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದ ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಆರೋಪ ಮೇಲೆ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ವಿರುದ್ಧ ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಂಡಿಗೋ ಸಂಸ್ಧೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು ವಿದ್ಯಾರ್ಥಿ ಕೌಶಿಕ್ ಕರಣ್ ನನ್ನು ಇಂದು ಬಂಧಿಸಿದ್ದು ನಂತರ ಪೊಲೀಸರು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಏಪ್ರಿಲ್ 29ರಂದು 6ಇ-6314 ವಿಮಾನ ಕೋಲ್ಕತ್ತಾದಿಂದ ರಾತ್ರಿ 8.15ಕ್ಕೆ ಟೇಕಾಫ್ ಆಗಿದ್ದು, ರಾತ್ರಿ 10.30ರ ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ತಲುಪಬೇಕಿತ್ತು. ಇನ್ನು ಕರಣ್ ಸೀಟ್ ನಂ. 18E ನಲ್ಲಿ ಕುಳಿತಿದ್ದನು. ತನ್ನ ಪಕ್ಕದಲ್ಲಿದ್ದ ಸೀಟ್ ನಂ. 18F ನಲ್ಲಿ ತುರ್ತು ನಿರ್ಗಮನ ದ್ವಾರವಿತ್ತು. ವಿಮಾನವು ಬೆಂಗಳೂರು ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ತುರ್ತು ಬಾಗಿಲಿನ ಸ್ಟಾರ್‌ಬೋರ್ಡ್ ಬದಿಯಿಂದ ಹ್ಯಾಂಡಲ್‌ನಲ್ಲಿರುವ ಫ್ಲಾಪ್ ಕವರ್ ಅನ್ನು ಕರಣ್ ತೆಗೆದುಹಾಕಿದ್ದಾನೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮೂಲಗಳು ತಿಳಿಸಿವೆ.

ಇಂಡಿಗೋ ವಿಮಾನ
ಇಂಧನ ಖಾಲಿಯಾಗುವ ಒಂದೆರಡು ನಿಮಿಷ ಮುಂಚೆ ವಿಮಾನ ಲ್ಯಾಂಡಿಂಗ್! ದೆಹಲಿ ಪೊಲೀಸ್ ಅಧಿಕಾರಿ ಆರೋಪ; ಇಂಡಿಗೋ ಹೇಳಿದ್ದು ಹೀಗೆ..

ವಿಮಾನದ ಪೈಲಟ್ ಕರಣ್ ನನ್ನು ಅಶಿಸ್ತಿನ ಪ್ರಯಾಣಿಕ ಘೋಷಿಸಿದರು. ನಂತರ ವಿಮಾನ ಬೆಂಗಳೂರಿಗೆ ಬಂದಿಳಿದ ನಂತರ ಇಂಡಿಗೋ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್ಗೆ ಆತನನ್ನು ಹಸ್ತಾಂತರಿಸಿದನು. ಇನ್ನು ಏರ್‌ಲೈನ್ಸ್ ಸಿಬ್ಬಂದಿ ನಿನ್ನೆ ಮಧ್ಯರಾತ್ರಿ 12.33ಕ್ಕೆ ಕೆಐಎ ಪೊಲೀಸರಿಗೆ ಹಸ್ತಾಂತರಿಸಿದರು. ಇಂಡಿಗೋ ಸಿಬ್ಬಂದಿ ಮೊಹಮ್ಮದ್ ಉಮರ್ ಮಂಗಳವಾರ ಮಧ್ಯಾಹ್ನ ಕೆಐಎಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು IPC 1860 ರ ಸೆಕ್ಷನ್ 336ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅದು ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯವಾಗಿದ್ದು ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ಇದು ಮೂರು ತಿಂಗಳ ಜೈಲು ಶಿಕ್ಷೆ ಅಥವಾ ರೂ 250 ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು 2022ರ ಡಿಸೆಂಬರ್ 10ರಂದು ಚೆನ್ನೈಗೆ ತೆರಳುತ್ತಿದ್ದಾಗ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದಿದ್ದು ಭಾರೀ ಸುದ್ದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com