ತೆರಿಗೆ ವಂಚನೆ ಆರೋಪ: ಬೆಂಗಳೂರು ರೇಸ್​ ಕೋರ್ಸ್​ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ

ಬೆಂಗಳೂರು ಟರ್ಫ್ ಕ್ಲಬ್​ (ರೇಸ್​ ಕೋರ್ಸ್​)ನಲ್ಲಿ ಸೂಕ್ತ ದಾಖಲೆ ಮತ್ತು ರಿಜಿಸ್ಟರ್ ನಿರ್ವಹಿಸದೆ ಅನಧಿಕೃತವಾಗಿ ಕುದುರೆ ಪಂದ್ಯಗಳಿಗೆ ಬೆಟ್ಟಿಂಗ್ ಆಯೋಜಿಸಿ ಪಂಟರ್​ಗಳಿಂದ ಹಣ ಸಂಗ್ರಹಿಸಿ ಜಿಎಸ್ ಟಿ ಮತ್ತು ಟಿಡಿಎಸ್ ಕಟ್ಟದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್​ (ರೇಸ್​ ಕೋರ್ಸ್​)ನಲ್ಲಿ ಸೂಕ್ತ ದಾಖಲೆ ಮತ್ತು ರಿಜಿಸ್ಟರ್ ನಿರ್ವಹಿಸದೆ ಅನಧಿಕೃತವಾಗಿ ಕುದುರೆ ಪಂದ್ಯಗಳಿಗೆ ಬೆಟ್ಟಿಂಗ್ ಆಯೋಜಿಸಿ ಪಂಟರ್​ಗಳಿಂದ ಹಣ ಸಂಗ್ರಹಿಸಿಜಿಎಸ್ ಟಿ ಮತ್ತು ಟಿಡಿಎಸ್ ಕಟ್ಟದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಸೂರ್ಯ ಮತ್ತು ಇತರ 25 ಬುಕ್ಕಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ, ಆರೋಪಿಗಳ ವಿರುದ ಗಂಭೀರ ಆಪಾದನೆಗಳಿವೆ, ಅವರು ಸಂಗ್ರಹಿಸಿದ ಕೋಟಿಗಟ್ಟಲೆ ಹಣವನ್ನು ಜಿಎಸ್ಟಿ ಮತ್ತು ಟಿಡಿಎಸ್ ಪಾವತಿ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಅರ್ಜಿದಾರರು ಮಾಡಿದ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದರು.

ಅರ್ಜಿದಾರರು ಕೋಟ್ಯಂತರ ರೂ.ಗಳ ಅವ್ಯವಹಾರ ಮಾಡಿದ್ದಾರೆ ಎಂಬ ಅಂಶ ತನಿಖೆ ಸಂದರ್ಭದಲ್ಲಿ ಬಹಿರಂಗವಾಗಿದೆ. ಇದು ಅತ್ಯಂತ ಗಂಭೀರ ಸ್ವರೂಪದ ಆರೋಪವಾಗಿದೆ. ಜಿಎಸ್​ಟಿ ಮತ್ತು ಟಿಡಿಎಸ್​ ಮೊತ್ತ ಪಾವತಿಗೆ ಸಂಗ್ರಹಿಸಿರುವ ಕೊಟ್ಯಂತರ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಕರಣದ ಆರೋಪ ಸಂಬಂಧ ದಾಖಲಾಗಿರುವ ಎಫ್​ಐಆರ್​ ಸಾಬೀತುಪಡಿಸುವ ಉದ್ದೇಶದಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪವನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳು ಸಂಗ್ರಹ ಮಾಡಬೇಕಾಗಿದ್ದು, ಅದಕ್ಕೆ ಮುಕ್ತ ಅವಕಾಶ ನೀಡಿ ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸುವುದಕ್ಕೆ ಅವಕಾಶ ನೀಡದಿದ್ದಲ್ಲಿ ಆರೋಪಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು ಎಂದು ನ್ಯಾಯಪೀಠ ತಿಳಿಸಿದೆ.

ಕರ್ನಾಟಕ ಹೈಕೋರ್ಟ್
ರೇಸ್ ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ದಾಳಿ; 3.47 ಕೋಟಿ ರೂಪಾಯಿ ವಶ!

ಕರ್ನಾಟಕ ಪೊಲೀಸ್ ಕಾಯ್ದೆ, 1963ರ ಕರ್ನಾಟಕ ರೇಸ್ ಬೆಟ್ಟಿಂಗ್ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರುದಾಖಲಿಸಿದ್ದ ಅಪರಾಧದ ಕಾನೂನುಬದ್ಧತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಅವರು 21 ಪಂಟರ್‌ಗಳ ಹೇಳಿಕೆಯಲ್ಲಿ ಬುಕ್ಕಿಗಳು ಬೆಟ್ಟಿಂಗ್ ಮೊತ್ತವನ್ನು ಸಂಗ್ರಹಿಸುವಾಗ ಶೇ 25 ರ ದರದಲ್ಲಿ ಜಿಎಸ್‌ಟಿ ಸಂಗ್ರಹಿಸಿದ್ದಾರೆ ಮತ್ತು ಯಾವುದೇ ರಸೀದಿ ನೀಡಿಲ್ಲ ಎಂದು ವಾದಿಸಿದರು. ಗೆಲ್ಲುವ ಬೆಟ್ಟಿಂಗ್‌ದಾರರ ಯಾವುದೇ ದಾಖಲೆಯನ್ನು ನಿರ್ವಹಿಸದ ಬುಕ್ಕಿಗಳು ಶೇ. 30 ರಷ್ಟು ಟಿಡಿಎಸ್ ಮೊತ್ತವನ್ನೂ ಸಂಗ್ರಹಿಸಿದ್ದಾರೆ ಎಂದು ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ.

2024ರ ಜನವರಿ 12ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ನಾಲ್ಕು ಕುದುರೆ ರೇಸ್ ಮುಗಿದ ನಂತರ ದಾಳಿ ನಡೆಸಲಾಗಿದ್ದು, 3.45 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರವೂ ಸಲ್ಲಿಸಿದೆ. ಜೂನ್ 1, 2023 ರಿಂದ ಜನವರಿ 18, 2024 ರ ಅವಧಿಗೆ, BTC ಯಲ್ಲಿ ಒಟ್ಟು 1,507 ರೇಸ್‌ಗಳನ್ನು ನಡೆಸಲಾಗಿದೆ, ಆದರೆ ಈ ಅವಧಿಯಲ್ಲಿ ಕೇವಲ 24.96 ಕೋಟಿ ರೂ. ರು ಹಣ ಸಂಗ್ರಹವಾಗಿದೆ ಎಂದು ತೋರಿಸಲಾಗಿದೆ. ನಾಲ್ಕು ರೇಸ್‌ಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ, 1,507 ರೇಸ್‌ಗಳ ಒಟ್ಟು ಬೆಟ್ಟಿಂಗ್ ಮೊತ್ತ 1,302 ಕೋಟಿ ರೂ. ಆಗಿದೆ. ಆದರೆ ತೆರಿಗೆ ವಂಚಿಸಲು ಕೇವಲ 24.96 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತೋರಿಸಲಾಗಿದೆ ಎಂದು ರಾಜ್ಯ ವಾದಿಸಿದೆ.

ಬುಕ್ಕಿಗಳಿಗೆ ಪೆನ್ಸಿಲ್ ಶೀಟ್‌ಗಳಲ್ಲಿ ವಹಿವಾಟು ನಡೆಸಲು ಅಧಿಕಾರವಿಲ್ಲ, ಅವರು ನೀಡಿದ ಬೆಟ್ಟಿಂಗ್ ಕಾರ್ಡ್‌ಗಳು ತೆರಿಗೆ ಇನ್‌ವಾಯ್ಸ್ ಅಥವಾ ಜಿಎಸ್‌ಟಿ ಸಂಖ್ಯೆಗಳನ್ನು ಹೊಂದಿರದ ಕಾರಣ ಅಗತ್ಯ ಸ್ವರೂಪದಲ್ಲಿಲ್ಲ ಎಂದು ಬಿಟಿಸಿ ಅಧ್ಯಕ್ಷರು ಸಿಸಿಬಿ ಮುಂದೆ ಹೇಳಿದ್ದಾರೆ ಎಂದು ರಾಜ್ಯವು ತನ್ನ ವಾದ ಮಂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com