ರೇಸ್ ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ದಾಳಿ; 3.47 ಕೋಟಿ ರೂಪಾಯಿ ವಶ!

ರೇಸ್ ಕೋರ್ಸ್ ನ ಕುದುರೆ ರೇಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು 3.47 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರೇಸ್ ಕೋರ್ಸ್ ನ ಕುದುರೆ ರೇಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು 3.47 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಬುಕ್ಕಿಂಗ್ ಕೌಂಟರ್ ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್​ಟಿ ಕಟ್ಟದೇ ವಂಚನೆ ಮಾಡಿದ ಆರೋಪಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಕಳೆದ ರಾತ್ರಿ ಬುಕ್ಕಿಂಗ್‌ ಕೌಂಟರ್​ಗಳನ್ನ ಲಾಕ್​ ಮಾಡಿ ಕೌಂಟರ್​ನಲ್ಲಿನ ಸಿಬ್ಬಂದಿ ಹೊರ ಹೋಗದಂತೆ ತಡೆದು ಪರಿಶೀಲನೆ ನಡೆಸಿದ್ದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಾಳಿಯನ್ನು ಅಂತ್ಯಗೊಳಿಸಿದ್ದಾರೆ. 

ಈ ವೇಳೆ 60 ಜನರನ್ನ ವಶಕ್ಕೆ ಪಡೆದು ಅವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಂತರ ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com