ಹಾವೇರಿ: ಯುವತಿ ಜೊತೆ ಮಗ ಓಡಿಹೋಗಿದ್ದಕ್ಕೆ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿತ ಪ್ರಕರಣ, 6 ಮಂದಿ ಬಂಧನ

ಯುವತಿ ಜೊತೆ ಮಗ ಓಡಿಹೋಗಿದ್ದಕ್ಕೆ 50 ವರ್ಷದ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಕಂಬಕ್ಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ
ಕಂಬಕ್ಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆPTI

ಹಾವೇರಿ: ಯುವತಿ ಜೊತೆ ಮಗ ಓಡಿಹೋಗಿದ್ದಕ್ಕೆ 50 ವರ್ಷದ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಅರೆಮಲ್ಲಾಪುರ ಗ್ರಾಮದಲ್ಲಿ 50 ವರ್ಷದ ಮಹಿಳೆ ಹನುಮವ್ವಳ ಮಹಿಳೆಯರ ಗುಂಪೊಂದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿತ್ತು. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 30ರಂದು ನಡೆದ ಘಟನೆ ಸಂಬಂಧ ಮೂವರು ಮಹಿಳೆಯರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಪಾದಿತ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುರುಬ ಸಮುದಾಯದ ಹನುಮವ್ವ ಮೆಡ್ಲೇರಿ ಅವರ ಪುತ್ರ ಮಂಜುನಾಥ್ ಕಳೆದ ಎರಡು ವರ್ಷಗಳಿಂದ ಅದೇ ಗ್ರಾಮದ ಮರಾಠ ಸಮುದಾಯದ ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಬಕ್ಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ
Haveri: ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿ: ಕಂಬಕ್ಕೆ ತಾಯಿ ಕಟ್ಟಿಹಾಕಿ ಥಳಿತ, ಪ್ರಕರಣ ದಾಖಲು!

ಪ್ರೀತಿ ವಿಚಾರ ಹುಡುಗಿಯ ಪೋಷಕರಿಗೆ ತಿಳಿದ ನಂತರ ಎರಡು ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು. ನಂತರ ಸಂತ್ರಸ್ತೆಯ ಮಗ ಊರು ಬಿಟ್ಟು ಹೋಗಿದ್ದನು. ಸುಮಾರು ಒಂದು ವರ್ಷದಿಂದ ಮಂಜುನಾಥ್ ತನ್ನ ಸಹೋದರಿಯೊಂದಿಗೆ ಆಕೆಯ ಮನೆಯಲ್ಲಿ ತಂಗಿದ್ದನು. ಈ ಮಧ್ಯೆ ಹುಡುಗಿಯ ಪೋಷಕರು ಮಗಳಿಗೆ ಮದುವೆ ಮಾಡಲು ಯೋಜಿಸಿದ್ದು ಈ ವಿಷಯ ತಿಳಿದ ಮಂಜುನಾಥ್ ಕಳೆದ ವಾರ ತನ್ನ ಗ್ರಾಮಕ್ಕೆ ಬಂದಿದ್ದು ಹುಡುಗಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವತಿಯ ಪೋಷಕರಾದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಎಂಬುವವರು ಹಲ್ಲೆ ಮಾಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದರು. ಗಾಯಗೊಂಡ ಮಹಿಳೆ ಹನುಮವ್ವಳನ್ನ ತಾಲೂಕುನ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಲಾಗಿತ್ತು.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ 323, 354 (ಬಿ), 504, 506 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com