ಲೋಕಸಭೆ ಚುನಾವಣೆ: ಮತದಾನ ಮಾಡಲೆಂದೇ ವಿದೇಶಗಳಿಂದ ಭಟ್ಕಳಕ್ಕೆ ನೂರಾರು ಮಂದಿ ಆಗಮನ!

ಪಶ್ಚಿಮ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಟ್ಕಳದ ನೂರಾರು ಜನರು ಮೇ 7 ರಂದು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ತವರಿಗೆ ಮರಳುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಟ್ಕಳದ ನೂರಾರು ಜನರು ಮೇ 7 ರಂದು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ತವರಿಗೆ ಮರಳುತ್ತಿದ್ದಾರೆ.

ಭಟ್ಕಳದ ತಂಝೀಮ್ ಎಂಬುವರ ಮನವಿಗೆ ಸ್ಪಂದಿಸಿದ ಜನರು ಮತದಾನಕ್ಕಾಗಿ ಮನೆಗೆ ಬರುತ್ತಿದ್ದಾರೆ ಎನ್ನಲಾಗಿದೆ. ಈ ಮತದಾರರ ಪ್ರಯಾಣ ವೆಚ್ಚವನ್ನು ಭಟ್ಕಳ ತಂಝೀಮ್ ಭರಿಸುವುದಾಗಿ ತಿಳಿಸಿದ ನಂತರ ಮತದಾನಕ್ಕಾಗಿ ಬರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಮತದಾನ ಮಾಡಲು ಕೇರಳಕ್ಕೆ ಆಗಮಿಸಿದ್ದ ವಿಷಯ ತಿಳಿದಬಂದಿದೆ, ಹೀಗಾಗಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಟ್ಕಳದ ಜನರು ಸ್ವದೇಶಕ್ಕೆ ಮರಳಲು ಮತ್ತು ತಪ್ಪದೆ ತಮ್ಮ ಹಕ್ಕು ಚಲಾಯಿಸುವಂತೆ ತಂಝೀಮ್ ಮನವಿ ಮಾಡಿದೆ. ಭಟ್ಕಳ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಟ್ಕಳಕ್ಕೆ ಮತ ಹಾಕಲು ಬರುವವರ ಪ್ರಯಾಣ ವೆಚ್ಚವನ್ನು ತಂಝೀಮ್ ಸಂಸ್ಥೆ ಭರಿಸುತ್ತದೆ ಎಂದು ತಿಳಿಸಿದರು. ನಾವು ಅದರ ಮೇಲೆ ನಿಗಾ ಇರಿಸುತ್ತಿದ್ದೇವೆ. ಒಂದುವೇಳೆ ಕಂಡು ಬಂದರೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.

ಸಾಂದರ್ಭಿಕ ಚಿತ್ರ
ಕರ್ನಾಟಕ ಲೋಕಸಭಾ ಚುನಾವಣೆ: ಮೊದಲ ಹಂತದಲ್ಲಿ ಪುರುಷರಿಗಿಂತ ಮಹಿಳೆಯರಿಂದಲೇ ಹೆಚ್ಚು ಮತದಾನ!

ಆದರೆ ಇದರಲ್ಲಿ ತಂಝೀಮ್‌ನ ಪಾತ್ರವಿಲ್ಲ ಎಂದು ಭಟ್ಕಳದ ಮಜ್ಲಿಸೆ ಇಸ್ಲಾಹ್ ವಾ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದರಿ ಹೇಳಿದರು. ಅವರಲ್ಲಿ ಅನೇಕರು ಈಗ ಮತ ಚಲಾಯಿಸಲು ಭಾರತಕ್ಕೆ ಬರುತ್ತಿದ್ದಾರೆ. ವೆಚ್ಚವನ್ನು ತಾವೇ ಭರಿಸಿಕೊಂಡು ಬರುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಶ್ರೀಮಂತರು. ಆರ್ಥಿಕವಾಗಿ ಸದೃಢರಲ್ಲದಿದ್ದರೂ ಮತ ಹಾಕಲು ಬರಲು ಸಿದ್ಧರಿರುವವರಿಗೆ, ಪಶ್ಚಿಮ ಏಷ್ಯಾದಾದ್ಯಂತ ನಮ್ಮ ಜನರನ್ನು ಪ್ರತಿನಿಧಿಸುವ ತಂಝೀಮ್‌ಗಳು ಮತ್ತು ಜಮಾತ್‌ಗಳಿವೆ. ಅವರಿಗೆ ಒಂದು ಮಟ್ಟಿಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ದುಬೈ, ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಜಮಾತ್‌ನ ಶಾಖೆಗಳನ್ನು ಹೊಂದಿದ್ದೇವೆ. ಇದು ಪ್ರಜಾಪ್ರಭುತ್ವದ ಹಿತಾಸಕ್ತಿಯಾಗಿದೆ ಎಂದು ಅವರು TNIE ಗೆ ತಿಳಿಸಿದರು.

ಪಶ್ಚಿಮ ಏಷ್ಯಾದಲ್ಲಿ ಕೆಲಸ ಮಾಡುವ ಕೇರಳೀಯರು ಕೇರಳ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದನ್ನು ನೋಡಿದ ನಂತರ ನಾವು ನಮ್ಮ ಜನರಿಗೆ ಮನವಿ ಮಾಡಲು ನಿರ್ಧರಿಸಿದ್ದೇವೆ. ಸುಮಾರು 40,000 ಜನರು ಕೇರಳಕ್ಕೆ ಮತ ಹಾಕಲು ಭೇಟಿ ನೀಡಿದ್ದಾರೆ. ನಮ್ಮಲ್ಲಿ ಅಂತಹ ದೊಡ್ಡ ಸಂಖ್ಯೆಗಳಿಲ್ಲ, ನಮ್ಮದು ನೂರಾರು ಇರುತ್ತದೆ ಎಂದು ಅವರು ಹೇಳಿದರು.

ಪಶ್ಚಿಮ ಏಷ್ಯಾದಿಂದ ಎಷ್ಟು ಮಂದಿ ಬಂದು ಮತ ಚಲಾಯಿಸುತ್ತಾರೆ ಎಂಬುದು ಖಚಿತವಾಗಿಲ್ಲ ಎಂದು ಅವರು ಹೇಳಿದರು. ಭಟ್ಕಳದ ಸುಮಾರು 15,000 ಜನರು ದುಬೈ, ಜೆಡ್ಡಾ, ಕತಾರ್, ಕುವೈತ್ ಮತ್ತು ಪಶ್ಚಿಮ ಏಷ್ಯಾದ ಇತರ ದೇಶಗಳಲ್ಲಿದ್ದಾರೆ. ಅವರಲ್ಲಿ ಕನಿಷ್ಠ 10% ಜನರು ಬಂದು ಮತ ಚಲಾಯಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಇನಾಯತುಲ್ಲಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com