ಕರ್ನಾಟಕ ಲೋಕಸಭಾ ಚುನಾವಣೆ: ಮೊದಲ ಹಂತದಲ್ಲಿ ಪುರುಷರಿಗಿಂತ ಮಹಿಳೆಯರಿಂದಲೇ ಹೆಚ್ಚು ಮತದಾನ!

ಏಪ್ರಿಲ್ 26 ರಂದು ರಾಜ್ಯದ 14 ಕ್ಷೇತ್ರಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಏಪ್ರಿಲ್ 26 ರಂದು ರಾಜ್ಯದ 14 ಕ್ಷೇತ್ರಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ ಪ್ರವೃತ್ತಿ ಮುಂದುವರೆದಿದೆ.

ಭಾರತದ ಚುನಾವಣಾ ಆಯೋಗವು ಹಂಚಿಕೊಂಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪುರುಷರ ಮತದಾನ ಶೇಕಡಾ 69.48 ಆಗಿದ್ದರೆ, ಮಹಿಳೆಯರು ಶೇ. 69.65 ರಷ್ಟು ಮತದಾನ ಮಾಡಿದ್ದಾರೆ. ಒಟ್ಟು 1,00,16,921 ಪುರುಷರು ಮತದಾರರು,1,00,20,796 ಮಹಿಳೆಯರು ಮತದಾನ ಮಾಡಿದ್ದಾರೆ. ಅಂದರೆ 3,875 ಮತದಾರರ ವ್ಯತ್ಯಾಸವಿದೆ.

ಅಲ್ಲದೆ, ಬೆಂಗಳೂರು ಉತ್ತರ, ಸೆಂಟ್ರಲ್, ದಕ್ಷಿಣ ಮತ್ತು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದ್ದಾರೆ. 2019 ರ ಮತದಾನದ ಸಮಯದಲ್ಲಿ, ಪುರುಷರ ಶೇಕಡಾವಾರು ಪ್ರಮಾಣವು ಮಹಿಳೆಯರಿಗಿಂತ ಸ್ವಲ್ಪ ಹೆಚ್ಚಾಗಿತ್ತು. ಶೇ. 69.55 ಪುರುಷರು ಮತ್ತು ಶೇ. 67.65 ರಷ್ಟು ಮಹಿಳೆಯರು ಮತದಾನ ಮಾಡಿದ್ದರು. 2014 ರಲ್ಲಿ, ಮತದಾನದ ಶೇಕಡಾವಾರು ಪ್ರಮಾಣವು ಕ್ರಮವಾಗಿ 68.59 ಮತ್ತು 65.79 ಆಗಿತ್ತು.

ಮಹಿಳಾ ಮತದಾರರನ್ನು ಹೆಚ್ಚಿಸುವ ಪ್ರವೃತ್ತಿ ಅವರ ಸಬಲೀಕರಣದ ವಿಸ್ತರಣೆಯಾಗಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ವಿಭಿನ್ನ ರೀತಿಯಲ್ಲಿ ಮತ ಚಲಾಯಿಸುತ್ತಾರೆ ಎಂದು ವಿವರಿಸಿದರು. ಅವರು ಇನ್ನು ಮುಂದೆ ಪುರುಷರಿಂದ ಪ್ರಭಾವಿತರಾಗುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ, ಅವರು ಹೆಚ್ಚಿನ ತಿಳುವಳಿಕೆ ಹೊಂದಿದ್ದಾರೆ ತಮ್ಮ ಮತ್ತು ತಮ್ಮ ಕುಟುಂಬದ ಕಲ್ಯಾಣಕ್ಕಾಗಿ ನಿರ್ಧರಿಸುತ್ತಾರೆ.

ಹೆಣ್ಣು ಮಕ್ಕಳ ಸಬಲೀಕರಣ, ಸುಧಾರಿತ ಶಿಕ್ಷಣ ಮತ್ತು ಹೆಚ್ಚಿದ ಜಾಗೃತಿಯು ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಏಳು ರಾಜ್ಯಗಳಲ್ಲಿ ಮಹಿಳಾ ಮತದಾನದ ಪ್ರಮಾಣ ಹೆಚ್ಚಿತ್ತು ಎಂದು ತಿಳಿಸಿದರು. ಇಸಿಐ ಅಂಕಿಅಂಶಗಳ ಪ್ರಕಾರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಲಕ್ಷ್ವದೀಪ್, ಮಣಿಪುರ, ಮೇಘಾಲಯ, ಪುದುಚೆರಿ, ನಾಗಾಲ್ಯಾಂಡ್, ತಮಿಳುನಾಡು, ಉತ್ತರಾಖಂಡ, ಪಶ್ಚಿಮ ಬಂಗಾಳ, ಬಿಹಾರ, ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಲೋಕಸಭೆ ಚುನಾವಣೆಯ ಹಂತ-1 ಮತ್ತು ಹಂತ-2 ರಲ್ಲಿ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ ಚಲಾಯಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿವೆ.

ಸಾಂದರ್ಭಿಕ ಚಿತ್ರ
ಲೋಕಸಮರ 2024: ತೃತೀಯಲಿಂಗಿ ಸಮುದಾಯದಿಂದ ಶೇ.25ಕ್ಕಿಂತ ಕಡಿಮೆ ಪ್ರಮಾಣದ ಮತದಾನ!

ಮತದಾರರ ಜಾಗೃತಿಯನ್ನು ಹೆಚ್ಚಿಸುವ ಕುರಿತು ಜನರೊಂದಿಗೆ ನಮ್ಮ ಸಂವಾದದ ಸಮಯದಲ್ಲಿ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ವಿವರಗಳನ್ನು ತಿಳಿದುಕೊಳ್ಳುವಾಗ, ಮತ ಚಲಾಯಿಸಲು ಹೆಚ್ಚು ಉತ್ಸುಕರಾಗಿದ್ದಾರೆಂದು ನಾವು ತಿಳಿದುಕೊಂಡಿದ್ದೇವೆ. ಹಂತ-2ಕ್ಕೆ ಮಹಿಳೆಯರಿಗಿಂತ ಪುರುಷರ ದಾಖಲಾತಿ ಹೆಚ್ಚಿದ್ದರೂ, ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿದೆ. ಹಂತ-3ರಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು. ಇಲ್ಲಿಯೂ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗುತ್ತಾರೆಯೇ ಎಂದು ನಾವು ಕಾದು ನೋಡುತ್ತೇವೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com