ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲೋಕಸಮರ 2024: ತೃತೀಯಲಿಂಗಿ ಸಮುದಾಯದಿಂದ ಶೇ.25ಕ್ಕಿಂತ ಕಡಿಮೆ ಪ್ರಮಾಣದ ಮತದಾನ!

ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯ ಪೂರ್ಣಗೊಂಡಿದ್ದು, ಈ ನಡುವಲ್ಲೇ ತೃತೀಯಲಿಂಗಿ ಸಮುದಾಯದಿಂದ ಶೇ.25ಕ್ಕಿಂತಲೂ ಕಡಿಮೆ ಮತದಾನವಾಗಿದೆ ಎಂಬ ಅಂಕಿಅಂಶ ಕಳವಳವನ್ನುಂಟು ಮಾಡಿದೆ.
Published on

ಮೈಸೂರು: ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯ ಪೂರ್ಣಗೊಂಡಿದ್ದು, ಈ ನಡುವಲ್ಲೇ ತೃತೀಯಲಿಂಗಿ ಸಮುದಾಯದಿಂದ ಶೇ.25ಕ್ಕಿಂತಲೂ ಕಡಿಮೆ ಮತದಾನವಾಗಿದೆ ಎಂಬ ಅಂಕಿಅಂಶ ಕಳವಳವನ್ನುಂಟು ಮಾಡಿದೆ.

3,067 ಮತದಾರರು ‘ಇತರ’ ವರ್ಗದ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದರೂ, 667 ಮಂದಿ ಮಾತ್ರ 14 ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ, ಇ ದು ಶೇಕಡಾ 21.74 ರಷ್ಟು ಕಡಿಮೆ ಮತದಾನವಾಗಿದೆ.

ರಾಜ್ಯ ಮತದಾರರ ಸಬಲೀಕರಣ ಕಾರ್ಯಕ್ರಮ (SVEEP) ಸಮಿತಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗಳು ತೃತೀಯಲಿಂಗಿಗಳು ಹಾಗೂ ಆ ಸಮುದಾಯದ ಮುಖಂಡರಲ್ಲಿ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಂಡಿದ್ದರು. ಆದರೂ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮೈಸೂರು ವಿಭಾಗದಲ್ಲಿ ಮತದಾನದ ಪ್ರಮಾಣ ಶೇ 25ಕ್ಕಿಂತ ಕಡಿಮೆಯಾಗಿದೆ.

ಸಂಗ್ರಹ ಚಿತ್ರ
ಲೋಕಸಭಾ ಚುನಾವಣೆ 2024: ಬಳ್ಳಾರಿಯಲ್ಲಿ ಮಹಿಳೆಯರೇ ನಿರ್ಣಾಯಕ; ಮನವೊಲಿಕೆಗೆ ಎರಡೂ ಪಕ್ಷಗಳು ಕಸರತ್ತು!

ಮೈಸೂರು-ಕೊಡಗು ಕ್ಷೇತ್ರದಲ್ಲಿ 184 ನೋಂದಾಯಿತ ಮತದಾರರಲ್ಲಿ 38 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ಅದೇ ರೀತಿ ಮಂಡ್ಯದಲ್ಲಿ 168 ನೋಂದಾಯಿತ ಮತದಾರರಿದ್ದು, ಕೇವಲ 44 ಮಂದಿ ಮಾತ್ರ ತಮ್ಮ ಮತಹಕ್ಕು ಚಲಾಯಿಸಿದ್ದಾರೆ. ಇನ್ನು ಚಾಮರಾಜನಗರದಲ್ಲಿ 107 ನೋಂದಾಯಿತ ಮತದಾರರಲ್ಲಿ ಕೇವಲ 31 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಮೈಸೂರಿನ ತೃತೀಯಲಿಂಗಿ ಕಾರ್ಯಕರ್ತೆ ಪ್ರಣತಿ ಪ್ರಕಾಶ್ ಮಾತನಾಡಿ, ಈ ಹಿಂದಿ ಸಮುದಾಯದವರಿಗೆ ಗುರುತಿನ ಚೀಟಿ ಪಡೆಯಲು ಸಮಸ್ಯೆಗಳಿದ್ದವು. ಆದರೆ, ಈಗ ಅದನ್ನು ಪರಿಹರಿಸಲಾಗಿದೆ.ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮತದಾನವು ಉತ್ತಮವಾಗಿದೆ. ಮುಂಬರುವ ದಿನಗಳಲ್ಲಿ ಈ ಶೇಕಡಾವಾರು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಎನ್‌ಆರ್ ಮೊಹಲ್ಲಾದ ನೋಂದಾಯಿತ ಮತದಾರರಲ್ಲಿ ಒಬ್ಬರಾದ ಮತ್ತೊಬ್ಬ ತೃತೀಯ ಲಿಂಗಿ ಮಾತನಾಡಿ, ಮತದಾನ ಕೇಂದ್ರಗಳಲ್ಲಿ ತಾರತಮ್ಯ ಎದುರಿಸುತ್ತೇವೆ, ಇದು ಕಡಿಮೆ ಮತದಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com