ಲೋಕಸಭಾ ಚುನಾವಣೆ 2024: ಬಳ್ಳಾರಿಯಲ್ಲಿ ಮಹಿಳೆಯರೇ ನಿರ್ಣಾಯಕ; ಮನವೊಲಿಕೆಗೆ ಎರಡೂ ಪಕ್ಷಗಳು ಕಸರತ್ತು!

ಅವಿಭಜಿತ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಅಭ್ಯರ್ಥಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಲಿದ್ದು, ಇದರ ಬೆನ್ನಲ್ಲೆ ಎರಡು ಪಕ್ಷಗಳು ಮಹಿಳೆಯರನ್ನು ಮನಗೆಲ್ಲಲು ನಾನಾ ರಣ ತಂತ್ರ ರೂಪಿಸುತ್ತಿದ್ದು, ಚುನಾವಣಾ ಕಣ ರಂಗೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಳ್ಳಾರಿ: ಅವಿಭಜಿತ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಅಭ್ಯರ್ಥಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಲಿದ್ದು, ಇದರ ಬೆನ್ನಲ್ಲೆ ಎರಡು ಪಕ್ಷಗಳು ಮಹಿಳೆಯರನ್ನು ಮನಗೆಲ್ಲಲು ನಾನಾ ರಣ ತಂತ್ರ ರೂಪಿಸುತ್ತಿದ್ದು, ಚುನಾವಣಾ ಕಣ ರಂಗೇರಿದೆ.

ಕ್ಷೇತ್ರದ ಒಟ್ಟು 18,77,751 ಮತದಾರರ ಪೈಕಿ ಮಹಿಳಾ ಮತದಾರರು 9,51,522 ಮತ್ತು ಪುರುಷ ಮತದಾರರು 9,25,961 ಇದ್ದಾರೆ. ಕ್ಷೇತ್ರವು 53,169 ಪ್ರಥಮ ಬಾರಿ ಮತ್ತು 24,841 ವಿಶೇಷ ಸಾಮರ್ಥ್ಯ ಹೊಂದಿರುವ ಮತದಾರರನ್ನು ಹೊಂದಿದೆ. ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯಾಬಲ ಹೆಚ್ಚಿದ್ದರೂ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬೇ ಒಬ್ಬ ಮಹಿಳೆಗೂ ಶಾಸಕಿ ಸ್ಥಾನ ಸಿಕ್ಕಿಲ್ಲ.

ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ ತುಕಾರಾಂ ಮತ್ತು ಬಿಜೆಪಿಯ ಬಿ ಶ್ರೀರಾಮುಲು ಇಬ್ಬರೂ ಮಹಿಳಾ ಮತದಾರರನ್ನು ಸೆಳೆಯಲು ನಾನಾ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ

ಸಂಗ್ರಹ ಚಿತ್ರ
'ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನನ್ನು ಗೆಲುವಿನತ್ತ ಕೊಂಡೊಯ್ಯುತ್ತವೆ': ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ

ಶ್ರೀರಾಮುಲು ಅವರು ಉಜ್ವಲ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಮಹಿಳಾ ಸಬಲೀಕರಣದಂತಹ ಯೋಜನೆಗಳನ್ನು ಹೆಸರಿಸಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಗೃಹ ಜ್ಯೋತಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನಿಟ್ಟುಕೊಂಡು ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ.

ರಾಜಕೀಯ ವಿಶ್ಲೇಷಕ ಶ್ರೀಧರ್ ರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಪುರುಷ ಮತದಾರರಿಗೆ ಹೋಲಿಸಿದರೆ ಸುಮಾರು 26,000 ಮಹಿಳಾ ಮತದಾರರು ಹೆಚ್ಚಿದ್ದು, ಚುನಾವಣೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com