ಮಹಿಳೆ ಅಪಹರಣ ಪ್ರಕರಣ: ಬೆಂಗಳೂರಿನ ರೇವಣ್ಣ ನಿವಾಸದಲ್ಲಿ SIT ಸ್ಥಳ ಮಹಜರು

ಮಹಿಳೆಯೊಬ್ಬರ ಅಪಹರಣ ಹಾಗೂ ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಂಗಳೂರಿನ ಬಸವನಗುಡಿಯಲ್ಲಿರುವ ಅವರ ನಿವಾಸದಲ್ಲಿ ಸೋಮವಾರ ಸ್ಥಳ ಮಹಜರು ನಡೆಸಿತು.
ಹೆಚ್. ಡಿ.ರೇವಣ್ಣ ನಿವಾಸದಲ್ಲಿ ಎಸ್ ಐಟಿ
ಹೆಚ್. ಡಿ.ರೇವಣ್ಣ ನಿವಾಸದಲ್ಲಿ ಎಸ್ ಐಟಿ

ಬೆಂಗಳೂರು: ಮಹಿಳೆಯೊಬ್ಬರ ಅಪಹರಣ ಹಾಗೂ ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಂಗಳೂರಿನ ಬಸವನಗುಡಿಯಲ್ಲಿರುವ ಅವರ ನಿವಾಸದಲ್ಲಿ ಸೋಮವಾರ ಸ್ಥಳ ಮಹಜರು ನಡೆಸಿತು. ರೇವಣ್ಣ ಕುಟುಂಬದವರ ಅನುಪಸ್ಥಿತಿಯಲ್ಲಿ ನಡೆದ ಸ್ಥಳ ಪರಿಶೀಲನೆಗೆ ಅವರ ಪರ ವಕೀಲ ಗೋಪಾಲ್ ಅವರನ್ನು ಎಸ್‌ಐಟಿ ತಂಡ ಕರೆಸಿತ್ತು. ಎರಡು ದಿನಗಳ ಹಿಂದೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ಮನೆಯಲ್ಲಿಯೂ ಸ್ಥಳ ಮಹಜರು ನಡೆಸಲಾಗಿತ್ತು.

ರೇವಣ್ಣ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮನೆಕೆಲಸದವರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಕೂಡ ಆರೋಪಿಯಾಗಿದ್ದಾರೆ. ಎರಡನೆಯದು ಮೇ 2 ರಂದು ದಾಖಲಾಗಿರುವ ಅಪಹರಣ ಪ್ರಕರಣವಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪದ ವಿಡಿಯೋಗಳು ವೈರಲ್ ಆದ ಬಳಿಕ ರೇವಣ್ಣ ಅವರ ಆಪ್ತ ಸತೀಶ್ ಬಾಬಣ್ಣ ಏಪ್ರಿಲ್ 29 ರಂದು ತನ್ನ ತಾಯಿಯನ್ನು ಬೈಕ್ ನಲ್ಲಿ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಸಂತ್ರಸ್ತೆಯ ಮಗ ಮೈಸೂರಿನ. ಕೆ.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ಮಹಿಳೆಯನ್ನು ರಕ್ಷಿಸಿರುವ ಎಸ್ ಐಟಿ, ಆಕೆಗೆ ಆಕೆಗೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎನ್ನಲಾದ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದೆ. ಪ್ರಜ್ವಲ್‌ ರೇವಣ್ಣ ಅನೇಕ ಮಹಿಳೆಯರಿಗೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಅನೇಕ ವಿಡಿಯೋಗಳು ಹಾಗೂ ಫೋಟೋಗಳು ವೈರಲ್ ಆಗಿವೆ. ಎಸ್‌ಐಟಿ ಇಬ್ಬರು ದೂರುದಾರರನ್ನು ಅತ್ಯಾಚಾರ ಮತ್ತು ಕಿರುಕುಳ ನಡೆದ ವಿವಿಧ ಸ್ಥಳಗಳಿಗೆ ಕರೆದೊಯ್ದಿದೆ.

ಹೆಚ್. ಡಿ.ರೇವಣ್ಣ ನಿವಾಸದಲ್ಲಿ ಎಸ್ ಐಟಿ
ಲೈಂಗಿಕ ದೌರ್ಜನ್ಯ ಪ್ರಕರಣ: ಹೆಚ್.ಡಿ. ರೇವಣ್ಣ ಹೊಳೆನರಸೀಪುರ ನಿವಾಸದಲ್ಲಿ SIT ಸ್ಥಳ ಮಹಜರು

ಈ ಮಧ್ಯೆ ರೇವಣ್ಣ ಅವರ ಬಸವನಗುಡಿಯ ಮನೆಯೊಳಗೆ ನನ್ನನ್ನು ಒಳಗೆ ಬಿಡಲಿಲ್ಲ ಎಂದು ಅವರ ಪರ ವಕೀಲ ಗೋಪಾಲ್‌ ಆರೋಪಿಸಿದ್ದಾರೆ. ಸ್ಥಳ ಪರಿಶೀಲನೆಗೆ ನೋಟಿಸ್ ನೀಡಿದ್ದರೂ ಎಸ್‌ಐಟಿ ಒಳಗೆ ಬಿಡಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ನಾನು ಅಲ್ಲಿ ಹಾಜರಿರಬೇಕಾಗಿದ್ದರೂ ನನ್ನನ್ನು ಒಳಗೆ ಬಿಡಲಿಲ್ಲ. ಅಲ್ಲಿ ಅಕ್ರಮಗಳು ನಡೆಯುತ್ತಿವೆ. ಸ್ಥಳ ಮಹಜರಿಗೆ ನಾನು ವಿರೋಧಿಯಲ್ಲ, ಎಸ್‌ಐಟಿ ನನಗೆ ಇಲ್ಲಿ ಹಾಜರಾಗುವಂತೆ ನೋಟಿಸ್ ನೀಡಿದಾಗ, ನನ್ನನ್ನು ಏಕೆ ಹೊರಗೆ ಇರಿಸಲಾಯಿತು? ನಾನು ಸಹಕರಿಸುವುದಿಲ್ಲ ಎಂದು ಹೇಳಿದ್ದೀನಾ? ಎಂದು ಗೋಪಾಲ್ ಕಿಡಿಕಾರಿದರು.

ವಶಪಡಿಸಿಕೊಂಡ ವಸ್ತುಗಳ ಪಟ್ಟಿಯನ್ನು ನೀಡಬೇಕಾಗಿದೆ ಎಂದು ಹೇಳಿದ ಅವರು, ಎಸ್‌ಐಟಿ ಯಾರಿಗೆ ಇವುಗಳನ್ನು ಹಸ್ತಾಂತರಿಸುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಎಸ್‌ಐಟಿ ಏಕಪಕ್ಷೀಯ ರೀತಿಯಲ್ಲಿ ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ ನನ್ನನ್ನು ದೂರ ಇಟ್ಟಿದ್ದಾರೆ ಎಂದು ವಕೀಲರು ಆರೋಪಿಸಿದರು.

ಹೆಚ್. ಡಿ.ರೇವಣ್ಣ ನಿವಾಸದಲ್ಲಿ ಎಸ್ ಐಟಿ
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದ ಫೋಟೋ-ವಿಡಿಯೊ ಹಂಚಿಕೊಳ್ಳುವುದು ಶಿಕ್ಷಾರ್ಹ ಅಪರಾಧ: ಎಸ್ ಐಟಿ ಮುಖ್ಯಸ್ಥರಿಂದ ಮಾಧ್ಯಮ ಪ್ರಕಟಣೆ

ಈ ಮಧ್ಯೆ ವಿದೇಶದಿಂದ ಪ್ರಜ್ವಲ್ ಆಗಮನದ ನಿರೀಕ್ಷೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಅದರ ಸದಸ್ಯ ರಾಷ್ಟ್ರಗಳಿಂದ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಅಂತರಾಷ್ಟ್ರೀಯ ಪೊಲೀಸ್ ಸಹಕಾರ ಸಂಸ್ಥೆಯಿಂದ ಬ್ಲೂ ಕಾರ್ನರ್ ನೋಟಿಸ್ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com