ಲೈಂಗಿಕ ದೌರ್ಜನ್ಯ ಪ್ರಕರಣ: ಹೆಚ್.ಡಿ. ರೇವಣ್ಣ ಹೊಳೆನರಸೀಪುರ ನಿವಾಸದಲ್ಲಿ SIT ಸ್ಥಳ ಮಹಜರು

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಪೊಲೀಸರು ಶನಿವಾರ ಹೆಚ್. ಡಿ. ರೇವಣ್ಣ ಅವರ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದರು.
ಹೆಚ್. ಡಿ. ರೇವಣ್ಣ ನಿವಾಸ
ಹೆಚ್. ಡಿ. ರೇವಣ್ಣ ನಿವಾಸ
Updated on

ಹೊಳೆ ನರಸೀಪುರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಪೊಲೀಸರು ಶನಿವಾರ ಹೆಚ್. ಡಿ. ರೇವಣ್ಣ ಅವರ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದರು.

ಸಂತ್ರಸ್ತ ಮಹಿಳೆಯೊಂದಿಗೆ ಐದು ವಾಹನಗಳಲ್ಲಿ ಬಂದ ಎಸ್ ಐಟಿ ತಂಡಕ್ಕೆ ಹಾಸನ ಎಎಸ್ ಪಿ ತಮ್ಮಯ್ಯ ಅವರನ್ನೊಳಗೊಂಡ ಸ್ಥಳೀಯ ಪೊಲೀಸರು ಸಾಥ್ ನೀಡಿದರು. ರೇವಣ್ಣ ಅವರ ನಿವಾಸದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಮಹಜರು ನಡೆಸಲಾಯಿತು. ಅಡುಗೆ ಮನೆ, ಬೆಡ್ ರೂಮ್, ಸ್ಟೋರ್ ರೂಮ್ ಸೇರಿದಂತೆ ಮನೆಯ ಎಲ್ಲಾ ಕಡೆಗಳಲ್ಲಿ ಶೋಧ ನಡೆಸಿದರು.

ಹೆಚ್. ಡಿ. ರೇವಣ್ಣ ನಿವಾಸ
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ: ಸಿಎಂ ಸಿದ್ದರಾಮಯ್ಯ

ಅಧಿಕಾರಿಗಳು ಮಹಜರು ಪ್ರಕ್ರಿಯೆ ವಿಡಿಯೋ ಮಾಡಿದರು. ಪಂಚನಾಮೆ ಬಳಿಕ ಸ್ಥಳದಲ್ಲಿಯೇ ಸಂತ್ರಸ್ತೆಯ ಹೇಳಿಕೆ ದಾಖಲು ಮಾಡಿಕೊಂಡರು. ಸ್ಥಳ ಮಹಜರು ವೇಳೆಯಲ್ಲಿ ರೇವಣ್ಣ ಅವರ ಪತ್ನಿ ಭವಾನಿ ಮನೆಯಲ್ಲಿಯೇ ಇದ್ದರು. ರೇವಣ್ಣ ಪರ ವಕೀಲರು, ಜೆಡಿಎಸ್ ನಾಯಕರು ಸ್ಥಳದಲ್ಲಿ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com