ದೇಶ

ಲಂಡನ್​ಗೆ ತೆರಳುತ್ತಿದ್ದ CJPಯ ಸೌರವ್ ದಾಸ್​ಗೆ ದೆಹಲಿ ವಿಮಾನ ನಿಲ್ದಾಣದಲ್ಲೇ ತಡೆ: ಕೇಂದ್ರದ ವಿರುದ್ಧ ಕಿಡಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೌರವ್ ದಾಸ್ ಲಂಡನ್ ಗೆ ತೆರಳಬೇಕಿತ್ತು.

ಲಂಡನ್​ಗೆ ತೆರಳುತ್ತಿದ್ದ CJPಯ ಸೌರವ್ ದಾಸ್​ಗೆ ದೆಹಲಿ ವಿಮಾನ ನಿಲ್ದಾಣದಲ್ಲೇ ತಡೆ: ಕೇಂದ್ರದ ವಿರುದ್ಧ ಕಿಡಿ
ಸೌರವ್ ದಾಸ್
Published On :

ನವದೆಹಲಿ: ಲಂಡನ್​ಗೆ ತೆರಳುತ್ತಿದ್ದ 'ಕಾಕ್ರೋಚ್ ಜನತಾ ಪಾರ್ಟಿ'(CJP)ಯ ಮುಖ್ಯ ವಕ್ತಾರ ಸೌರವ್ ದಾಸ್ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಡೆಯಲಾಗಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೌರವ್ ದಾಸ್ ಲಂಡನ್ ಗೆ ತೆರಳಬೇಕಿತ್ತು. ಆದರೆ ಅವರ ಪಾಸ್‌ಪೋರ್ಟ್‌ನಲ್ಲಿ ಹುಟ್ಟಿದ ಸ್ಥಳವನ್ನು ತಪ್ಪಾಗಿ ನಮೂದಿಸಿರುವುದಕ್ಕೆ ಅವರನ್ನು ತಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ, ದೆಹಲಿ ವಿಮಾನ ನಿಲ್ದಾಣದಿಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಸೌರವ್ ದಾಸ್, 'ಕಾಕ್ರೋಚ್ ಚಳುವಳಿ'ಯ (Cockroach movement) ಕುರಿತು ಉಪನ್ಯಾಸ ನೀಡಲು ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ಮತ್ತು ಎಡಿನ್‌ಬರ್ಗ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ತೆರಳದಂತೆ ತಮ್ಮನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದರು.

ಈ ಚಳುವಳಿಯ ಬಗ್ಗೆ ಮಾತನಾಡುವುದನ್ನು ತಡೆಯಲು ಕೇಂದ್ರ ಸರ್ಕಾರವೇ ಅಡ್ಡಿಪಡಿಸುತ್ತಿದೆ ಎಂದು ಅವರು ಸಿಜೆಪಿ ನಾಯಕ ಕಿಡಿ ಕಾರಿದ್ದಾರೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಲಂಡನ್‌ಗೆ ವಿಮಾನ ಹತ್ತುವ ಮೊದಲು ದೆಹಲಿ ವಿಮಾನ ನಿಲ್ದಾಣದ ವಲಸೆ ಕೌಂಟರ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಅನ್ನು ಫ್ಲ್ಯಾಗ್ ಮಾಡಲಾಗಿದೆ ಎಂದು ದಾಸ್ ಹೇಳಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್ ಹಾಕಿರುವ ಸೌರವ್ ದಾಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ಹಾರುತ್ತಿದ್ದ ನನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಹೇಡಿ ಮೋದಿ ಸರ್ಕಾರ ತಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೂಲಗಳ ಪ್ರಕಾರ, ದಾಸ್ ಅವರ ಪಾಸ್‌ಪೋರ್ಟ್‌ನಲ್ಲಿ ಹುಟ್ಟಿದ ಸ್ಥಳವನ್ನು 'ಚೆನ್ನೈ' ಎಂದು ತಪ್ಪಾಗಿ ನಮೂದಿಸಿರುವುದರಿಂದ ಅವರನ್ನು ಪ್ರಯಾಣಿಸದಂತೆ ತಡೆಯಲಾಗಿದೆ. ಇದರ ಪರಿಣಾಮವಾಗಿ, ಚೆನ್ನೈನಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಅವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಲಂಡನ್‌ಗೆ ಹೊರಡಬೇಕಿದ್ದ ದಿನವಾದ ನವೆಂಬರ್ 23 ರಂದು, ಸೌರವ್ ದಾಸ್ ಅವರಿಗೆ 'ಕಾರಣ ಕೇಳಿ ನೋಟಿಸ್' (show-cause notice) ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನೋಟಿಸ್‌ಗೆ ಏಳು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಪ್ರಾದೇಶಿಕ ಕಚೇರಿಯು ದಾಸ್ ಅವರಿಗೆ ಸೂಚಿಸಿದೆ. ಅಲ್ಲದೆ, ಉತ್ತರ ನೀಡುವವರೆಗೂ ಈ ಪಾಸ್‌ಪೋರ್ಟ್ ಬಳಸಿ ಯಾವುದೇ ಪ್ರಯಾಣ ಕೈಗೊಳ್ಳದಂತೆ ಆ ನೋಟಿಸ್‌ನಲ್ಲಿ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ದಾಸ್ ಅವರ ಪಾಸ್‌ಪೋರ್ಟ್ ಅನ್ನು 2019ರ ಆಗಸ್ಟ್ 21 ರಂದು ಚೆನ್ನೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ವಿತರಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.