'ನಾವು ಬೇಸತ್ತು ಹೋಗಿದ್ದೇವೆ', ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಲು ತೆರಿಗೆದಾರರ ಹಣ ದುರುಪಯೋಗ: ಹೆಚ್ ಡಿ ಕುಮಾರಸ್ವಾಮಿ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ತಮ್ಮ ಹೇಳಿಕೆಗಳು ಅಸೂಯೆಯಿಂದ ಕೂಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ಈ ಸರ್ಕಾರದ ದುರಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದರು.
H D Kumaraswamy
ಹೆಚ್ ಡಿ ಕುಮಾರಸ್ವಾಮಿ
Updated on: 

ಮೈಸೂರು: ಬರ ಪರಿಸ್ಥಿತಿಯಿಂದ ರಾಜ್ಯ ತತ್ತರಿಸುತ್ತಿದ್ದರೂ, ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಿಸುವ ಮೂಲಕ ರಾಜ್ಯ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ತಮ್ಮ ಹೇಳಿಕೆಗಳು ಅಸೂಯೆಯಿಂದ ಕೂಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ಈ ಸರ್ಕಾರದ ದುರಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಮುಂಬರುವ ಹಿರಿಯೂರು ಕ್ಷೇತ್ರ ಉಪ ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಜೆಡಿಎಸ್ ನಾಯಕ, ತಮ್ಮ ಪಕ್ಷ ಹಾಗೂ ಮೈತ್ರಿ ಪಾಲುದಾರ ಬಿಜೆಪಿ ಎರಡೂ ಕ್ಷೇತ್ರದ ಟಿಕೆಟ್‌ಗಾಗಿ ಒಲವು ಹೊಂದಿರುವುದನ್ನು ಒಪ್ಪಿಕೊಂಡರು.

H D Kumaraswamy
ಸ್ಟಿಂಗ್ ಆಪರೇಷನ್ ಕೇಸ್: CCB ವಿಚಾರಣೆಗೆ ಕುಮಾರಸ್ವಾಮಿ PRO ಪ್ರಜ್ವಲ್ ಪ್ರಸಾದ್ ಹಾಜರು!

ನಾವು ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದೇವೆ. ಬಿಜೆಪಿಯವರಿಗೂ ಟಿಕೆಟ್ ಬೇಕಾಗಿದೆ. ಎರಡೂ ಪಕ್ಷಗಳ ಆಕಾಂಕ್ಷೆ ತಪ್ಪಲ್ಲ. ನಾವು ಒಟ್ಟಿಗೆ ಕುಳಿತು ಚರ್ಚೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ವೈಯಕ್ತಿಕ ಪ್ರತಿಷ್ಠೆಗಿಂತ ಗೆಲುವು ಮುಖ್ಯ. ಒಗ್ಗಟ್ಟಿನಿಂದ ಮುನ್ನಡೆದರೆ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಲಿತರಿಗೆ ಇಂದಿಗೂ ದೇವಸ್ಥಾನ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದಲಿತರ ಉನ್ನತಿಗಾಗಿ ಇಷ್ಟು ವರ್ಷಗಳಲ್ಲಿ ಗೃಹ ಸಚಿವರ ಕುಟುಂಬದ ಕೊಡುಗೆ ಏನು ಎಂದು ಪ್ರಶ್ನಿಸಿದರು.

ದಲಿತರ ಪರವಾಗಿ ಧ್ವನಿ ಎತ್ತದೆ ಇಷ್ಟು ವರ್ಷ ತಂದೆ-ಮಗ ಏನು ಮಾಡಿದ್ದಾರೆ? ದಲಿತರ ಇಂದಿನ ದುಃಸ್ಥಿತಿಗೆ ಇಂಥವರೇ ಕಾರಣ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಗೃಹ ಸಚಿವರು ಸಂಬಂಧವಿಲ್ಲದ ವಿಷಯಗಳನ್ನು ಎಳೆದು ತರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

H D Kumaraswamy
ಗಂಗಾ ಎಂದು ಹೆಸರಿಟ್ಟು ಅಕ್ರಮವೆಸಗಬಾರದು; ನಿಖಿಲ್ ಮೂರು ಬಾರಿ ಸೋತಿರಬಹುದು; ರಾಮನಗರದಿಂದ ನಮ್ಮನ್ನು ಹೊರಹಾಕಲು ಸಾಧ್ಯವಿಲ್ಲ: HDK

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪುಸ್ತಕವನ್ನು ಓದಿದ ಬಳಿಕವಷ್ಟೇ ಮಾತನಾಡುವುದಾಗಿ ತಿಳಿಸಿದರು.

ಪುಸ್ತಕದ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಸೋನಿಯಾ ಗಾಂಧಿ ಅವರ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ರಾಜಕೀಯವಾಗಿ ಅವರು ಒಳ್ಳೆಯ ಹಾಗೂ ತಪ್ಪು ನಿರ್ಧಾರಗಳೆರಡನ್ನೂ ತೆಗೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂಬದಿ ಸಾಲಿನಲ್ಲಿ ಕೂರಿಸಿದ್ದಕ್ಕೆ ವ್ಯಂಗ್ಯವಾಡಿದ ಕುಮಾರಸ್ವಾಮಿ, ಕನಿಷ್ಠ ಸಿದ್ದರಾಮಯ್ಯ ಅವರಿಗೆ ಅಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿದ್ದಾರಲ್ಲ, ಅದೇ ಸಮಾಧಾನದ ಸಂಗತಿ. ಈ ಹೊತ್ತಿಗೆ ಅವರನ್ನು ಸಂಪೂರ್ಣವಾಗಿ ಹೊರಹಾಕಬೇಕಿತ್ತು. ಇನ್ನೂ ಹಾಗೆ ಮಾಡಿಲ್ಲ ಎಂಬುದೇ ಅವರ ಅದೃಷ್ಟ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X