ಉಷ್ಣಾಂಶ (ಸಂಗ್ರಹ ಚಿತ್ರ)
ಉಷ್ಣಾಂಶ (ಸಂಗ್ರಹ ಚಿತ್ರ)online desk

ಮೇ 7ರಂದು 3ನೇ ಹಂತದ ಮತದಾನ: ಉತ್ತರ ಕರ್ನಾಟಕದಲ್ಲಿ Heatwave ಅಲರ್ಟ್!

ನಾಳೆ (ಮೆ.07) ರಂದು 3 ನೇ ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನಕ್ಕೆ ಉತ್ತರ ಕರ್ನಾಟಕ ಭಾಗ ಸಜ್ಜುಗೊಂಡಿದೆ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತದಾನ ನಡೆಯುವ ಪ್ರದೇಶಗಳಲ್ಲಿ Heatwave ಎಚ್ಚರಿಕೆಯನ್ನು ನೀಡಿದೆ.

ಬೆಂಗಳೂರು: ನಾಳೆ (ಮೆ.07) ರಂದು 3 ನೇ ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನಕ್ಕೆ ಉತ್ತರ ಕರ್ನಾಟಕ ಭಾಗ ಸಜ್ಜುಗೊಂಡಿದೆ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತದಾನ ನಡೆಯುವ ಪ್ರದೇಶಗಳಲ್ಲಿ Heatwave ಎಚ್ಚರಿಕೆಯನ್ನು ನೀಡಿದೆ.

ಉತ್ತರ ಕರ್ನಾಟಕದ ಒಳಭಾಗಗಳಲ್ಲಿ ತಾಪಮಾನ 42-44 ಡಿಗ್ರಿ ಸೆಲ್ಸಿಯಸ್ ನಷ್ಟಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮತದಾನ ನಡೆಯಲಿರುವ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ರೆಡ್ ಹೀಟ್ ವೇವ್ ಅಲರ್ಟ್ ನೀಡಿದೆ. ಏತನ್ಮಧ್ಯೆ, ಸುಗಮ ಮತದಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಚುನಾವಣಾ ಆಯೋಗ ಮಾಡಿದ್ದು, ಅಧಿಕಾರಿಗಳು ಹೆಚ್ಚಿನ ಮತದಾನದ ನಿರೀಕ್ಷೆಯಲ್ಲಿದ್ದಾರೆ.

ಉಷ್ಣಾಂಶ (ಸಂಗ್ರಹ ಚಿತ್ರ)
ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದಿನಿಂದ ಐದು ದಿನ ಹೀಟ್ ವೇವ್ ಅಲರ್ಟ್

ಬಿಸಿಗಾಳಿ (heat wave) ಎದುರಿಸಲು ಚುನಾವಣಾ ಆಯೋಗ ಮತದಾರರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಚುನಾವಣಾ ಆಯೋಗ ಮತಗಟ್ಟೆ ಕೇಂದ್ರಗಳಲ್ಲಿ ಹೆಚ್ಚುವರಿ ಫ್ಯಾನ್‌ಗಳ ಟೆಂಟ್‌ಗಳನ್ನು ನಿರ್ಮಿಸಿದ್ದು, ಕುಡಿಯುವ ನೀರು ವಿತರಕಗಳ ವ್ಯವಸ್ಥೆ ಮಾಡಿದೆ.

Related Stories

No stories found.

Advertisement

X
Kannada Prabha
www.kannadaprabha.com