
ಬೆಂಗಳೂರು: ಸುಡು ಬೇಸಿಗೆಯಿಂದ ತತ್ತರಿಸಿರುವ ರಾಜ್ಯಕ್ಕೆ ಮುಂಗಾರಿನ ಮುನ್ಸೂಚನೆ ತುಸು ನೆಮ್ಮದಿ ನೀಡುವಂತಿದೆ.
ರಾಜ್ಯದಲ್ಲಿ ಈ ಬಾರಿ ಸಮೃದ್ಧ ನೈಋತ್ಯ ಮುಂಗಾರು ಬರುವ ಮುನ್ಸೂಚನೆ ದೊರೆತಿದೆ. ಇದು ಬರ ಇಲ್ಲದ ವರ್ಷವಾಗಲಿದ್ದು, ರೈತರು ಅತ್ಯುತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.
2001 ರಿಂದ 2023 ವರೆಗೆ ರಾಜ್ಯ 16 ಬರ ವರ್ಷಗಳನ್ನು ಕಂಡಿದೆ. 123 ವರ್ಷಗಳಲ್ಲಿ 2023 ಅತ್ಯಂತ ಭೀಕರ ಬರ ಎದುರಾದ ವರ್ಷವಾಗಿದೆ. 2023 ರಲ್ಲಿ ಅತ್ಯಂತ ಕಡಿಮೆ ಮಳೆಯಾಗಿದ್ದು, 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಇದರ ಜೊತೆಗೆ ಕರ್ನಾಟಕದ ಬಹುತೇಕ ಭಾಗಗಳು ಜನವರಿಯಿಂದ ಏಪ್ರಿಲ್ ವರೆಗೆ ಮಳೆಯನ್ನು ಕಂಡಿಲ್ಲ. ಆದರೆ ಈಗ ಮೇ ತಿಂಗಳಲ್ಲಿ ರಾಜ್ಯದ ಕೆಲವೆಡೆ ಮಳೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಪ್ರಸಕ್ತ ಮುಂಗಾರಿನಲ್ಲಿ ಐಎಂಡಿ 106% ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಇದು ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನದ್ದಾಗಿದ್ದು, ಕರ್ನಾಟಕಕ್ಕೂ ಅದೇ ಆಗಲಿದೆ ಎಂದು ಹೇಳಿದ್ದಾರೆ.
'ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆ'
ಎಲ್ ನಿನೊ ಪರಿಣಾಮ ಸಮುದ್ರದ ಮೇಲ್ಮೈ ತಾಪಮಾನವನ್ನು ಹೆಚ್ಚಿಸಿದೆ. ಈಗ ಅದು ದುರ್ಬಲವಾಗುತ್ತಿದ್ದು, ಮೇ 15ರ ವೇಳೆಗೆ ಇದು ತಟಸ್ಥವಾಗುವ ನಿರೀಕ್ಷೆ ಇದೆ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ. ಕಳೆದ ವರ್ಷದ ಎಲ್ ನಿನೋ ಪರಿಣಾಮದಿಂದಾಗಿ ಕರ್ನಾಟಕವು ಭೀಕರ ಬರಗಾಲಕ್ಕೆ ಸಾಕ್ಷಿಯಾಗಿತ್ತು.
ಈಗ ಎಲ್ ನಿನೋ ಸ್ಥಿತಿ ಚಾಲ್ತಿಯಲ್ಲಿದೆ ಎಂದು ರೆಡ್ಡಿ ಹೇಳಿದ್ದಾರೆ. ಈ ಕಾರಣದಿಂದಾಗಿ, ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಇದರಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. "ಎಲ್ ನಿನೋ ಇದ್ದಾಗಲೆಲ್ಲಾ, ಆ ವರ್ಷಗಳು ಉತ್ತಮ ಮಳೆಗೆ ಸಾಕ್ಷಿಯಾಯಿತು" ಎಂದು ಅವರು ಹೇಳಿದ್ದಾರೆ.
ಈ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಇದು ರೈತರ ಪರವಾಗಿ ಕೆಲಸ ಮಾಡುವ ನಿರೀಕ್ಷೆ ಇದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ 860 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಕೃಷಿ ವಿಜ್ಞಾನಿ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಎಂ.ಬಿ.ರಾಜೇಗೌಡ ತಿಳಿಸಿದ್ದಾರೆ. ಈ ವರ್ಷ, ಮಳೆ 900 ಮಿಮೀ ತಲುಪಬಹುದು ಎಂದು ಅಂದಾಜಿಸಲಾಗಿದೆ.
Advertisement