ಪೆನ್ ಡ್ರೈವ್ ವಿಡಿಯೋ ಪ್ರಕರಣದ ಹಿಂದೆ ದೇವರಾಜೇಗೌಡ ಕೈವಾಡ: ಕಾಂಗ್ರೆಸ್

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ ಪ್ರಕರಣದ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹಾಸನದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಾಡಿರುವ ಆರೋಪವನ್ನು ಹಾಸನದ ಕಾಂಗ್ರೆಸ್ ಮುಖಂಡ ಬಿ.ಪಿ.ಮಂಜೇಗೌಡ ತಳ್ಳಿ ಹಾಕಿದ್ದಾರೆ.
ದೇವರಾಜೇಗೌಡ ಸುದ್ದಿಗೋಷ್ಟಿ ನಡೆಸುತ್ತಿರುವುದು.
ದೇವರಾಜೇಗೌಡ ಸುದ್ದಿಗೋಷ್ಟಿ ನಡೆಸುತ್ತಿರುವುದು.

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ ಪ್ರಕರಣದ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹಾಸನದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಾಡಿರುವ ಆರೋಪವನ್ನು ಹಾಸನದ ಕಾಂಗ್ರೆಸ್ ಮುಖಂಡ ಬಿ.ಪಿ.ಮಂಜೇಗೌಡ ತಳ್ಳಿ ಹಾಕಿದ್ದಾರೆ.

ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯದ ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿರುವ ಬಗ್ಗೆ ಸತ್ಯಾಂಶ ಹೊರಬರಬೇಕಾದರೆ ದೇವರಾಜೇಗೌಡ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಇಬ್ಬರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.

ವೀಡಿಯೋ, ಫೋಟೋ ಲೀಕ್ ಹಿಂದೆ ದೇವರಾಜೇಗೌಡ ಅವರ ಕೈವಾಡವಿದ್ದು, ಇದೀಗ ಕಾಂಗ್ರೆಸ್ ನಾಯಕ ದೂಷಿಸಿ, ಬ್ಲ್ಯಾಕ್ ಮೇಲ್ ಮಾಡಲು ಹೊರಟಿದ್ದಾರೆ. ಪೆನ್ ಡ್ರೈವ್ ಮೊದಲು ಸಿಕ್ಕಿದ್ದು ಹಾಗೂ ವಿಡಿಯೋಗಳನ್ನು ನೋಡಿದ್ದು ದೇವರಾಜೇಗೌಡ. ಬಳಿಕ ಅದನ್ನು ದೆಹಲಿ ಹಾಗೂ ರಾಜ್ಯದ ಬಿಜೆಪಿ ನಾಯಕರಿಗೆ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಅಮಿತ್ ಶಾ ಅವರು ಕುಮಾರಸ್ವಾಮಿಯವರನ್ನು ಕರೆದು ಪ್ರಜ್ವಲ್ ಅವರಿಗೆ ಟಿಕೆಟ್ ನೀಡದಂತೆ ಸೂಚಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿಯವರೂ ಒಪ್ಪಿದ್ದಾರೆ. ಇದೇ ಸತ್ಯ.

ದೇವರಾಜೇಗೌಡ ಸುದ್ದಿಗೋಷ್ಟಿ ನಡೆಸುತ್ತಿರುವುದು.
ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಹಂಚಿಕೆ ಹಿಂದೆ ಡಿಕೆ ಶಿವಕುಮಾರ್: ವಕೀಲ ದೇವರಾಜೇಗೌಡ ಆರೋಪ

ಆದರೂ, ಶಿವಕುಮಾರ್ ಅವರು ಪೆನ್ ಡ್ರೈವ್‌ಗಳನ್ನು ಹಂಚಿದ್ದಾರೆ ಎಂದು ಅನಗತ್ಯವಾಗಿ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಶಿವಕುಮಾರ್ ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ನಿರಂತರವಾಗಿ ಪ್ರಚಾರ ಮಾಡುತ್ತಿದ್ದು, ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

‘ಕರ್ನಾಟಕದಲ್ಲಿ ಎರಡನೇ ಹಂತದ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಕಾರಣ ಬಿಜೆಪಿ ಮುಖಂಡರ ಸೂಚನೆ ಮೇರೆಗೆ ದೇವರಾಜೇಗೌಡ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದರು. ಸತ್ಯ ಹೊರಬರಬೇಕೆಂದರೆ ದೇವರಾಜೇಗೌಡ ಮತ್ತು ಕಾರ್ತಿಕ್ ಇಬ್ಬರನ್ನೂ ಬಂಧಿಸಬೇಕು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com