SSLC results 2024: ಜಿಲ್ಲಾವಾರು ವಿವರ; ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, (Karnataka SSLC Results 2024) ಉಡುಪಿ ಜಿಲ್ಲೆ ಶೇಕಡಾ 94ರೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ (92.12%), ಶಿವಮೊಗ್ಗ ತೃತೀಯ ಸ್ಥಾನ (88.67%) ಗಳಿಸಿವೆ. ಜಿಲ್ಲಾವಾರು SSLC ಫಲಿತಾಂಶದ ವಿವರ (SSLC District Wise Results 2024) ಈ ರೀತಿ ಇಲ್ಲಿದೆ.
ಪರೀಕ್ಷಾ ಮಂಡಳಿಯಿಂದ ಫಲಿತಾಂಶ ಪ್ರಕಟ
ಪರೀಕ್ಷಾ ಮಂಡಳಿಯಿಂದ ಫಲಿತಾಂಶ ಪ್ರಕಟ
Updated on

ಬೆಂಗಳೂರು: ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, (Karnataka SSLC Results 2024) ಉಡುಪಿ ಜಿಲ್ಲೆ ಶೇಕಡಾ 94ರೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ (92.12%), ಶಿವಮೊಗ್ಗ ತೃತೀಯ ಸ್ಥಾನ (88.67%) ಗಳಿಸಿವೆ. ಜಿಲ್ಲಾವಾರು SSLC ಫಲಿತಾಂಶದ ವಿವರ (SSLC District Wise Results 2024) ಈ ರೀತಿ ಇಲ್ಲಿದೆ.

ಉತ್ತೀರ್ಣರಾದವರಲ್ಲಿ ಶೇಕಡಾ 81.11 ಹುಡುಗಿಯರು, ಶೇಕಡಾ 65.90 ಹುಡುಗರಾಗಿದ್ದಾರೆ.

ಒಟ್ಟು ಉತ್ತೀರ್ಣ ಶೇಕಡಾವಾರು 73.40%

ಉಡುಪಿ - ಶೇ 94

ದಕ್ಷಿಣ ಕನ್ನಡ- ಶೇ 92. 12

ಶಿವಮೊಗ್ಗ-ಶೇ 88.67

ಕೊಡಗು-ಶೇ 88.67

ಉತ್ತರ ಕನ್ನಡ- ಶೇ 86.54

ಹಾಸನ- ಶೇ 86.28

ಮೈಸೂರು-ಶೇ 85.5

ಶಿರಸಿ-ಶೇ 84.64

ಬೆಂಗಳೂರು ಗ್ರಾಮೀಣ-ಶೇ 83.67

ಚಿಕ್ಕಮಗಳೂರು-ಶೇ 83.39

ವಿಜಯಪುರ-ಶೇ 79.82

ಬೆಂಗಳೂರು ದಕ್ಷಿಣ-ಶೇ 79

ಬಾಗಲಕೋಟೆ-ಶೇ 77.92

ಬೆಂಗಳೂರು ಉತ್ತರ-ಶೇ 77.09

ಹಾವೇರಿ- ಶೇ 75.85

ತುಮಕೂರು-ಶೇ 75.16

ಗದಗ-ಶೇ 74.76

ಚಿಕ್ಕಬಳ್ಳಾಪುರ- ಶೇ 73.61

ಮಂಡ್ಯ-ಶೇ 73.59

ಕೋಲಾರ-ಶೇ 73.57

ಚಿತ್ರದುರ್ಗ-ಶೇ 72.85

ಧಾರವಾಡ-ಶೇ 72.67

ದಾವಣಗೆರೆ-ಶೇ 72.49

ಚಾಮರಾಜನಗರ-ಶೇ 71.59

ಚಿಕ್ಕೋಡಿ-ಶೇ 69.82

ರಾಮನಗರ-ಶೇ 69.53

ವಿಜಯನಗರ-ಶೇ 65.61

ಬಳ್ಳಾರಿ-ಶೇ 64.99

ಬೆಳಗಾವಿ-ಶೇ 64.93

ಮಧುಗಿರಿ-ಶೇ 62.44

ರಾಯಚೂರು-ಶೇ 61.2

ಕೊಪ್ಪಳ-ಶೇ 61.16

ಬೀದರ್-ಶೇ 57.52

ಕಲಬುರಗಿ-ಶೇ 53.04

ಯಾದಗಿರಿ-ಶೇ 50.59

ವಿದ್ಯಾರ್ಥಿನಿಯರ ಮೇಲುಗೈ: ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರ ಎಲ್ಲಾ ಮೂವರು ಟಾಪರ್‌ಗಳು ಹುಡುಗಿಯರಾಗಿದ್ದು, ಅಂಕಿತಾ, ಮೇಧಾ, ಹರ್ಷಿತಾ 625 ರಲ್ಲಿ ಕ್ರಮವಾಗಿ 625,624 ಮತ್ತು 624 ಅಂಕಗಳನ್ನು ಗಳಿಸಿದ್ದಾರೆ. ಅವರು ಬಾಗಲಕೋಟೆ,ಬೆಂಗಳೂರು ದಕ್ಷಿಣ ಮತ್ತು ಮಧುಗಿರಿಯವರಾಗಿದ್ದಾರೆ.

ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ತೇರ್ಗಡೆಯ ಶೇಕಡಾವಾರು ಫಲಿತಾಂಶದಲ್ಲಿ ಶೇ.10ರಷ್ಟು ಕುಸಿತ ಕಂಡುಬಂದಿದೆ. ಹೊಸ ನಿಯಮ, ಅರ್ಹತಾ ಅಂಕಗಳು 35% ರಿಂದ 25% ಕ್ಕೆ ಇಳಿಕೆ. ಗ್ರೇಸ್ ಅಂಕಗಳು 10% ರಿಂದ 20% ಕ್ಕೆ ಹೆಚ್ಚಳವಾಗಿದೆ.

ಶೂನ್ಯ ಫಲಿತಾಂಶ: ಈ ವರ್ಷ ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ಈ ಬಾರಿಯ ಫಲಿತಾಂಶ ಪ್ರಮಾಣ ಶೇ 73.40 ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com