
ಬೆಂಗಳೂರು: ತನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ, ಶಾಸಕ ಎಚ್‌ಡಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಅಮಾಯಕರು ಎಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಹೇಳಿಕೆ ನೀಡಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ತನಿಖೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣವನ್ನು ಎಸ್‌ಐಟಿಯಿಂದ ತನಿಖೆ ನಡೆಸಲಾಗುತ್ತಿದೆ.ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಬೇಕೆ ಅಥವಾ ಬೇಡವೇ ಎಂಬುದು ತನಿಖಾಧಿಕಾರಿಗೆ (ಐಒ) ಬಿಟ್ಟ ವಿಚಾರ. ಇಂತಹ ವಿಡಿಯೋ ಬಿಡುಗಡೆ ಮಾಡುವುದು ಅಪರಾಧ ಎಂದು ಹೇಳಿದ್ದಾರೆ.
ಪ್ರಕರಣ ತನಿಖೆಯ ಹಂತದಲ್ಲಿರುವಾಗ ಇಂತಹ ಹೇಳಿಕೆಗಳೊಂದಿಗೆ ಆಟವಾಡುವುದು ಅಪರಾಧವಾಗುತ್ತದೆ. ಆಕೆಯ ಹೇಳಿಕೆ ನಿಜವಾಗಿದ್ದರೂ, ಎಲ್ಲೆಂದರಲ್ಲಿ ಹೇಳಿಕೆ ನೀಡುವುದು ಅಕ್ಷೇಪಾರ್ಹವಾಗುತ್ತದೆ. ತನಿಖೆಯ ಬಗ್ಗೆ ತಿಳಿದಿದ್ದು, ಆರೋಪಿಗಳು ಬೇರೆಯವರು ಎಂದು ಮಹಿಳೆ ಹೇಳಿರುವುದು ಕಂಡು ಬಂದಿದೆ. ಆಕೆ ಅಂತಹ ಹೇಳಿಕೆಯನ್ನು ತನಿಖಾಧಿಕಾರಿಗಳ ಬಳಿ ಮೊದಲುನೀಡಬೇಕು. ತನಿಖಾಧಿಕಾರಿ ಈ ಹೇಳಿಕೆ ನಿರಾಕರಿಸಿದರೆ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನು ನೀಡಬಹುದು.
ಇಂತಹ ವಿಡಿಯೋಗಳಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಲು ಸಾಧ್ಯವಿಲ್ಲ. ಆಕೆಯ ಮೇಲೆ ಯಾರೂ ಒತ್ತಡ ಹೇರದಂತೆ ಪೊಲೀಸರು ರಕ್ಷಣೆ ನೀಡಬೇಕು. ಮಹಿಳೆ ಎಲ್ಲೆಂದರಲ್ಲಿ ಅಲ್ಲದೆ, ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ನೀಡಿದರೆ ಮಾತ್ರ ಬೆಲೆ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಐಪಿಸಿಯ ಸೆಕ್ಷನ್ 201 ರ ಅಡಿಯಲ್ಲಿ ಅಂತಹ ವೀಡಿಯೊವನ್ನು ಬಿಡುಗಡೆ ಮಾಡುವುದು ಅಪರಾಧದ ಅಡಿಗೆ ಬಬರುತ್ತದೆ. ಇದು ಹಳಿತಪ್ಪಿಸುವ ತನಿಖೆಗೆ ಸಮಾನವಾಗಿದೆ. ತನಿಖೆಯು ಒಂದು ರಹಸ್ಯ ಪ್ರಕ್ರಿಯೆಯಾಗಿದ್ದು, ಮ್ಯಾಜಿಸ್ಟ್ರೇಟ್‌ಗೆ ಒದಗಿಸಿದ ಮಾಹಿತಿಯೊಂದಿಗೆ ತನಿಖಾಧಿಕಾರಿಯು ಕೆಲಸ ಮಾಡುತ್ತಾರೆ. ಅಂತಹ ಹೇಳಿಕೆಗಳಿಗೆ ಅನುಮತಿ ನೀಡಿದ್ದೇ ಆದರೆ, ಸಂತ್ರಸ್ತ ಮಹಿಳೆಯರಿಗೆ ಸಮಸ್ಯೆಯಾಗುವುದು ಹೆಚ್ಚಾಗುತ್ತದೆ ಎಂದು ಹಿರಿಯ ವಕೀಲ ಎಂಎಸ್ ಶ್ಯಾಮಸುಂದರ್ ಅವರು ಹೇಳಿದ್ದಾರೆ.
Advertisement