ಹಾಸನ: ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳು ನೀರುಪಾಲು

ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಸಂಭವಿಸಿದೆ.
ಮೃತ ಬಾಲಕರು
ಮೃತ ಬಾಲಕರು

ಹಾಸನ: ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ಈಜಲು ಹೋಗಿದ್ದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ಹಾಸನದ ಮುತ್ತಿಗೆ ಗ್ರಾಮದ ದೊರೆಸ್ವಾಮಿ ಅವರ ಪುತ್ರ ಜೀವನ್ (13), ಸತೀಶ್ ಅವರ ಪುತ್ರ ಸಾತ್ವಿಕ್ (11), ಚಂದ್ರು ಅವರ ಪುತ್ರ ವಿಶ್ವಸ್ (12) ಮತ್ತು ಸೋಮಶೇಖರ್ ಅವರ ಪುತ್ರ ಪೃಥ್ವಿ (12) ಎಂದು ಗುರುತಿಸಲಾಗಿದೆ.

ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಮತ್ತೊಬ್ಬ ಸ್ನೇಹಿತ ಚಿರಾಗ್ ದಡ ತಲುಪುವಲ್ಲಿ ಯಶಸ್ವಿಯಾದ್ದಾನೆ.

ಮೃತ ಬಾಲಕರು
ಮಂಡ್ಯ: ಕುಡಿಯುವ ನೀರಿನಲ್ಲಿ ವಿಷ ಬೆರಸಿ ಪತ್ನಿ, ಮಕ್ಕಳಿಬ್ಬರನ್ನು ಕೊಂದ ಪಾಪಿ!

ಬಿಸಿಲ ತಾಪ ತಣಿಸಲು ಈಜಾಡಲು ತಿಮ್ಮನಹಳ್ಳಿಯ ಕೆರೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಪೋಲೀಸರ ಪ್ರಕಾರ, ಜೀವನ್ ನೀರಿನಲ್ಲಿ ಮುಳುಗಿದನು ಮತ್ತು ಅವನನ್ನು ರಕ್ಷಿಸುವಾಗ ಉಳಿದವರೂ ಮುಳುಗಿದರು.

ಗ್ರಾಮಸ್ಥರೊಬ್ಬರು ಮೃತದೇಹವೊಂದು ಕೊಚ್ಚಿ ಹೋಗುತ್ತಿರುವುದನ್ನು ಕಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಸುದ್ದಿ ಗ್ರಾಮದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಕ್ಕಳ ಪೋಷಕರ ಆಕ್ರಂದನ ಮನಕಲಕುವಂತಿತ್ತು. ಅಗ್ನಿಶಾಮಕ ಮತ್ತು ತುರ್ತು ಚಿಕಿತ್ಸಾ ವಿಭಾಗದ ಅಧಿಕಾರಿಗಳು ಮತ್ತು ಈಜುಗಾರರ ಸಹಾಯದಿಂದ ಪೊಲೀಸರು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರಿನ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಆಲೂರು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com