HD ಕೋಟೆ: ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್, ನೀರಿನ ಕೊರತೆ; ಅಪಾಯದಲ್ಲಿ ಡಯಾಲಿಸಿಸ್ ರೋಗಿಗಳು

ಬುಡಕಟ್ಟು ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿರುವ ಎಚ್‌ಡಿ ಕೋಟೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಮತ್ತು ನೀರಿನ ಕೊರತೆಯಿಂದಾಗಿ ರೋಗಿಗಳು ತೀವ್ರ ಪರದಾಡುವಂತಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಮೈಸೂರು: ಕರ್ನಾಟಕದ ಗ್ರಾಮೀಣ ಮತ್ತು ದೂರದ ಭಾಗಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದರೆ, ವಾಸ್ತವವೇ ಸಂಪೂರ್ಣವಾಗಿ ವಿಭಿನ್ನವಾದ ಕಥೆಯನ್ನು ಹೇಳುತ್ತಿದೆ.

ಗಮನಾರ್ಹವಾಗಿ ಬುಡಕಟ್ಟು ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿರುವ ಎಚ್‌ಡಿ ಕೋಟೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಮತ್ತು ನೀರಿನ ಕೊರತೆಯಿಂದಾಗಿ ರೋಗಿಗಳು ತೀವ್ರವಾಗಿ ಪರದಾಡುವಂತಾಗಿದೆ. ಈ ತೊಂದರೆಗಳನ್ನು ಸೆರೆಹಿಡಿಯುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಅಗತ್ಯ ಚಿಕಿತ್ಸೆಗಳನ್ನು ನೀಡಲು ಸೌಲಭ್ಯದ ಅಸಮರ್ಥತೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಕನಿಷ್ಠ 5 ರಿಂದ 10 ಡಯಾಲಿಸಿಸ್ ಅವಲಂಬಿತ ರೋಗಿಗಳನ್ನು ದೂರವಿಡಬೇಕಾಯಿತು. ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ನಿರ್ಣಾಯಕವಾಗಿದೆ. ಇದು ವಿದ್ಯುತ್ ಮತ್ತು ನೀರಿನ ಸ್ಥಿರ ಪ್ರವೇಶವನ್ನು ಅವಲಂಬಿಸಿದೆ. ಆದರೆ, ಆಸ್ಪತ್ರೆಯ ವೈಫಲ್ಯವು ಅನೇಕ ರೋಗಿಗಳ ಜೀವನವನ್ನು ಅಪಾಯಕ್ಕೆ ದೂಡಿದೆ.

ಡಯಾಲಿಸಿಸ್ ಸೇವೆ ದೊರಕದೆ ರೋಗಿಗಳು ಸೆಳೆತ ಮತ್ತು ಉಸಿರಾಟದ ತೊಂದರೆಗಳೊಂದಿಗೆ ಮನೆಗೆ ಮರಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿನ ಕಳಪೆ ಸೇವೆ ಮತ್ತು ಸಂಪನ್ಮೂಲಗಳ ಕೊರತೆಯನ್ನು ದೂಷಿಸಿದ ಅವರು ತಮ್ಮ ಹತಾಶೆ ಮತ್ತು ಭಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡವರಿಗಾಗಿ ಉಚಿತ ಡಯಾಲಿಸಿಸ್ ಸೇವೆ: 800 ಡಯಾಲಿಸಿಸ್ ಯಂತ್ರಗಳಿಗೆ ಸಿಎಂ ಚಾಲನೆ

'ನಾವು ಪರಿಹಾರದ ನಿರೀಕ್ಷೆಯಲ್ಲಿ ಇಲ್ಲಿಗೆ ಬಂದಿದ್ದೇವೆ ಮತ್ತು ನಾವು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೇವೆಯನ್ನು ಪಡೆಯಲು ಸಾಧ್ಯವಾಗದ ಕಾರಣದಿಂದಲೇ ಸರ್ಕಾರಿ ಸೇವೆಯನ್ನು ಅವಲಂಬಿಸಿದ್ದೇವೆ. ಆಸ್ಪತ್ರೆಯಲ್ಲಿ ವಿದ್ಯುತ್, ನೀರು ಮುಂತಾದ ಮೂಲ ಸೌಕರ್ಯಗಳು ದೊರಕದಿದ್ದರೆ ರೋಗಿಗಳ ಪರಿಸ್ಥಿತಿ ಏನಾಗಬಹುದು? ಕೆಲವೊಮ್ಮೆ ಸೆಸ್ಕ್ ಅಧಿಕಾರಿಗಳು ಮಳೆಯ ಕಾರಣವನ್ನು ನೀಡುತ್ತಾರೆ. ಆದರೆ, ಅವರು ಈ ಉದ್ದೇಶಕ್ಕಾಗಿ ಅಕ್ಕಪಕ್ಕದ ಹಳ್ಳಿಗಳಿಂದ ಬರುವ ರೋಗಿಗಳ ಪರಿಸ್ಥಿತಿಯನ್ನು ಪರಿಗಣಿಸುವುದಿಲ್ಲ' ಎಂದು ರೋಗಿಯ ಸಂಬಂಧಿ ರಂಗಸ್ವಾಮಿ ಹೇಳಿದರು.

ಈಮಧ್ಯೆ, ಆಸ್ಪತ್ರೆಯ ಸಿಬ್ಬಂದಿ ತಮ್ಮ ಕರ್ತವ್ಯಗಳ ಬೇಡಿಕೆಗಳು ಮತ್ತು ಸಂಪನ್ಮೂಲಗಳ ಕೊರತೆಯ ನಡುವೆ ಸಿಲುಕಿದ್ದು, ರೋಗಿಗಳಿಗೆ ಅಗತ್ಯವಿರುವ ಆರೈಕೆಯನ್ನು ಒದಗಿಸಲು ಪರದಾಡುತ್ತಿದ್ದಾರೆ.

ಪ್ರಾತಿನಿಧಿಕ ಚಿತ್ರ
ತಾಲ್ಲೂಕು-ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್ ಐ, ಡಯಾಲಿಸಿಸ್ ಯಂತ್ರ ಅಳವಡಿಸದ್ದಕ್ಕೆ ಸಿಎಂ ಗರಂ!

ತಮ್ಮ ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು, 'ನಾವು ನಮ್ಮಲ್ಲಿರುವ ಸೌಲಭ್ಯಗಳೊಂದಿಗೆ ಉತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದರೆ, ಸ್ಥಿರವಾದ ವಿದ್ಯುತ್ ಮತ್ತು ನೀರು ಇಲ್ಲದೆ, ಈ ರೋಗಿಗಳಿಗೆ ಅಗತ್ಯವಿರುವ ಸೇವೆಯನ್ನು ಒದಗಿಸಲು ಅಸಾಧ್ಯವಾಗಿದೆ' ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ಕುಮಾರಸ್ವಾಮಿ ಅವರ ಗಮನಕ್ಕೆ ಈ ಸಮಸ್ಯೆಯನ್ನು ತಂದಾಗ ಅವರು ಈ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲಿಯೇ ಪರಿಹರಿಸುವುದಾಗಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com