ಗಜ ಗಣತಿ ಮಾಡಲು ಆನೆ ಲದ್ದಿ ಸಂಗ್ರಹ ಅತ್ಯಗತ್ಯ: ತಜ್ಞರು

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶದ ದಕ್ಷಿಣ ರಾಜ್ಯಗಳು ಮೇ 23, ಗುರುವಾರದಂದು ಮೂರು ದಿನಗಳ ಕಾಲ ಆನೆ ಗಣತಿಯನ್ನು ಪ್ರಾರಂಭಿಸಿವೆ. ಗಜ ಗಣತಿ ಅಂಕಿ ಅಂಶಗಳಿಗೆ ಆನೆಯ ಲದ್ದಿ ಅಗತ್ಯವಿದೆ ಎಂದು ತಜ್ಞರು ಮತ್ತು ವಿಜ್ಞಾನಿಗಳು ಸೂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶದ ದಕ್ಷಿಣ ರಾಜ್ಯಗಳು ಮೇ 23, ಗುರುವಾರದಂದು ಮೂರು ದಿನಗಳ ಕಾಲ ಆನೆ ಗಣತಿಯನ್ನು ಪ್ರಾರಂಭಿಸಿವೆ. ಗಜ ಗಣತಿ ಅಂಕಿ ಅಂಶಗಳಿಗೆ ಆನೆಯ ಲದ್ದಿ ಅಗತ್ಯವಿದೆ ಎಂದು ತಜ್ಞರು ಮತ್ತು ವಿಜ್ಞಾನಿಗಳು ಸೂಚಿಸಿದ್ದಾರೆ.

ಕರ್ನಾಟಕವು ಏಪ್ರಿಲ್‌ನಿಂದ ಡಿಡಿಆರ್ ಮೌಲ್ಯಮಾಪನವನ್ನು ಪ್ರಾರಂಭಿಸಿದೆ, ತಜ್ಞರು ಇದನ್ನು ಐದು ವರ್ಷಗಳಿಗೊಮ್ಮೆ ಮಾಡುವ ಬದಲು ಎಲ್ಲಾ ರಾಜ್ಯಗಳಲ್ಲಿ ವಾರ್ಷಿಕವಾಗಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಡಿಡಿಆರ್ ಮೌಲ್ಯಮಾಪನವು ಸ್ಪಷ್ಟವಾದ ಚಿತ್ರಣ ನೀಡುತ್ತದೆ, ಭೂದೃಶ್ಯ, ಹವಾಮಾನ ಬದಲಾವಣೆ,, ಮಳೆಯ ಮಾದರಿ, ಆನೆಗಳ ಆರೋಗ್ಯ ಮತ್ತು ಅವುಗಳ ವಲಸೆಯ ಮಾದರಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಮೌಲ್ಯಮಾಪನದಲ್ಲಿ ಸಹಾಯ ಮಾಡುತ್ತಿರುವ ಖ್ಯಾತ ಆನೆ ತಜ್ಞ ಆರ್ ಸುಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಪ್ರತಿ ರಾಜ್ಯದಲ್ಲಿ ಹವಾಮಾನ ಮತ್ತು ಆನೆಗಳ ಆವಾಸಸ್ಥಾನವು ಬದಲಾಗುವುದರಿಂದ, ದೀರ್ಘಾವಧಿಯ ಮೌಲ್ಯಮಾಪನವು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಆನೆ ಗಣತಿ ಪ್ರಾರಂಭವಾಗುವ ಆರು ತಿಂಗಳ ಮೊದಲು ಡಿಡಿಆರ್ ಪ್ರಾರಂಭಿಸಬೇಕು. ಇದನ್ನು ನಿಯಮಿತವಾಗಿ ಮಾಡಬೇಕು ಇದು ದೀರ್ಘಾವಧಿಯ ಕಾರ್ಯವಾಗಿದ್ದು, ಕ್ಷೇತ್ರ ಸಿಬ್ಬಂದಿ ಮೊದಲು ತಾಜಾ ಆನೆ ಲದ್ದಿ ಹುಡುಕಬೇಕು, ಅದನ್ನು ಗುರುತಿಸಬೇಕು ಮತ್ತು ಪ್ರತಿ ಎರಡು ವಾರಗಳಿಗೊಮ್ಮೆ ಮೌಲ್ಯಮಾಪನ ಮಾಡಬೇಕು ಎಂದಿದ್ದಾರೆ.

ಸಾಂದರ್ಭಿಕ ಚಿತ್ರ
ರಾಜ್ಯದ ಗಡಿ ಪ್ರದೇಶಗಳಲ್ಲಿ ಮೇ 23 ರಿಂದ ಆನೆ ಗಣತಿ ಆರಂಭ!

ಆನೆಗಳ ಗಣತಿ ಅಗತ್ಯವನ್ನು ವಿವರಿಸಿದ ಸುಕುಮಾರ್, ಎಲ್ಲಾ ರಾಜ್ಯಗಳಲ್ಲಿ ಏಕರೂಪದ ಮೌಲ್ಯಮಾಪನಕ್ಕಾಗಿ ಪ್ರಮಾಣಿತ ವಿಧಾನ ಮತ್ತು ಮಾನದಂಡವನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು. ಮಾಮನ ಪ್ರಾಣಿ ಸಂಘರ್ಷ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ರಾಜ್ಯಗಳ ನಡುವೆ ಸಮನ್ವಯವನ್ನು ಸುಧಾರಿಸುತ್ತದೆ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ದಕ್ಷಿಣದ ರಾಜ್ಯಗಳಲ್ಲಿ ಆನೆಗಳ ನಿರ್ವಹಣೆ ಉತ್ತಮವಾಗಿದೆ. ಸಾವಿನ ಸಂಖ್ಯೆ ಮತ್ತು ಆವಾಸಸ್ಥಾನದ ನಷ್ಟವೂ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಡಿಆರ್‌ಆರ್ ಮೌಲ್ಯಮಾಪನ ತಂತ್ರವನ್ನು ಸೇರಿಸಲು ಪರಿಸರ ಅರಣ್ಯಗಳು ಮತ್ತು ಹವಾಮಾನ ಬದಲಾವಣೆ (MOEFCC) ಸಚಿವಾಲಯಕ್ಕೆ ತಜ್ಞರು ಸಲಹೆ ನೀಡಿದ್ದರು, ಆದರೆ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.

ಕೋಲಾರ, ಕಾವೇರಿ ವನ್ಯಜೀವಿ ಅಭಯಾರಣ್ಯ, ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮಡಿಕೇರಿ ಪ್ರಾದೇಶಿಕ ವಿಭಾಗ, ಮಡಿಕೇರಿ ವನ್ಯಜೀವಿ ಅಭಯಾರಣ್ಯ, ಮಡಿಕೇರಿ ವನ್ಯಜೀವಿ ಅಭಯಾರಣ್ಯದ 10 ಅರಣ್ಯ ವಿಭಾಗಗಳಲ್ಲಿ ಆನೆ ಗಣತಿ ನಡೆಸಲಾಗುತ್ತಿದೆ. ಒಟ್ಟು 65 ಅರಣ್ಯ ವ್ಯಾಪ್ತಿಗಳು ಮತ್ತು 563 ಬೀಟ್‌ಗಳನ್ನು 1,689 ಸಿಬ್ಬಂದಿಯಿಂದ ಮೌಲ್ಯಮಾಪನ ಮಾಡಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com