ಬೆಂಗಳೂರು: ಲೋಕಸಭೆ ಫಲಿತಾಂಶದ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸಜ್ಜಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುವವರು ಆಯಾ ವಾರ್ಡ್‌ಗಳಲ್ಲಿ ಚಟುವಟಿಕೆಗಳ ಆರಂಭಿಸುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.
ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ವಿಳಂಬ ಮಾಡಿದ್ದರ ವಿರುದ್ಧ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತುವೆ. ಉತ್ತಮ ನಾಗರಿಕ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ನಡುವೆ ಕಾಂಗ್ರೆಸ್ ಮುಖಂಡ ಅಭಿಲಾಷ್ ರೆಡ್ಡಿ, ಅವರ ಪತ್ನಿ ಶಿಪ್ಲಾ ಅಭಿಲಾಷ್ ರೆಡ್ಡಿ ಹೊಸ ತಿಪ್ಪಸಂದ್ರ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದು, ಎಲ್ಲಾ ನಿವಾಸಿಗಳನ್ನು ತಲುಪಲು ಮತ್ತು ಅವರ ಆದ್ಯತೆಗಳನ್ನು ಪಟ್ಟಿ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಬಿಜೆಪಿ ಅಧಿಕಾರಾವಧಿಯಲ್ಲಿ ವಾರ್ಡ್‌ಗಳ ವಿಂಗಡಣೆ ನಡೆದಿದ್ದು, ಅವೈಜ್ಞಾನಿಕವಾಗಿ ವಾರ್ಡ್ ಗಳನ್ನು ವಿಭಜಿಸಲಾಗಿತ್ತು. ಆದರೆ ಕಾಂಗ್ರೆಸ್, ಇದನ್ನು ರದ್ದುಪಡಿಸಿದೆ. ಹಿಂದಿನ ವಾರ್ಡ್ ಗಳನ್ನೇ ಪುನಃಸ್ಥಾಪಿಸಿದೆ. ಈ ನಿರ್ಧಾರದಿಂದ ನಮಗೆ ಸಂತೋಷವಾಗಿದೆ. ನಾವು ಈಗಲೇ ಬಿಬಿಎಂಪಿ ಚುನಾವಣೆ ಎದುರಿಸಲು ಸಿದ್ಧವಿದ್ದೇವೆಂದು ಅಭಿಲಾಷ್ ರೆಡ್ಡಿ ಹೇಳಿದ್ದಾರೆ.
ನಗರ ಹೊರವಲಯದ ವಸಂತಪುರ ವಾರ್ಡ್ ಪ್ರತಿನಿಧಿಸಿದ್ದ ಶೋಭಾಗೌಡ ಮಾತನಾಡಿ, 2020ರ ಸೆಪ್ಟೆಂಬರ್‌ನಿಂದ ಬಿಬಿಎಂಪಿಯಲ್ಲಿ ಕಾರ್ಪೊರೇಟರ್‌ಗಳೇ ಇಲ್ಲದಂತಾಗಿದೆ. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ನೆರವಿನೊಂದಿಗೆ ಮೂಲಭೂತ ನಾಗರಿಕ ಅಗತ್ಯಗಳನ್ನು ಪರಿಹರಿಸಲಾಗುತ್ತಿದೆ. ಎಂಜಿನಿಯರ್‌ಗಳು ಯಾವಾಗಲೂ ಲಭ್ಯವಿಲ್ಲದ ಕಾರಣ ಜನರು ಸಮಸ್ಯೆಗಳ ಹೊತ್ತು ನಾಯಕರ ಬಳಿಗೇ ಬರುತ್ತಿದ್ದಾರೆಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಾಗಿ ಸರಕಾರ ಹೇಳುತ್ತಿದೆ. ಜೊತೆಗೆ ಜೂನ್ 4ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರವೇ ಚುನಾವಣೆ ನಡೆಯುತ್ತದೆ ಎಂದೂ ಹೇಳಿ ತನ್ನ ಕಾಲನ್ನು ತಾನೇ ಎಳೆದುಕೊಳ್ಳುತ್ತಿದ ಎಂದು ಬಸವನಗುಡಿ ವಾರ್ಡ್‌ನ ಮಾಜಿ ಮೇಯರ್, ಬಿಜೆಪಿ ಮುಖಂಡ ಕಟ್ಟೆ ಸತ್ಯನಾರಾಯಣ ಮತ್ತು ಬಿಬಿಎಂಪಿ ಮಾಜಿ ನಗರ ಯೋಜನಾ ಅಧ್ಯಕ್ಷ ಎ.ಎಚ್.ಬಸವರಾಜು ಹೇಳಿದ್ದಾರೆ.
Advertisement