ಬೆಂಗಳೂರು: ಅಂಧರ ಕ್ರಿಕೆಟ್ ತಂಡ ಭೇಟಿಯಾದ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ!

2028ರ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್‌ಗೂ ಮುನ್ನ ಅಂಧರ ಕ್ರಿಕೆಟ್‌ ಅನ್ನು ಉತ್ತೇಜಿಸಲು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ನಗರದಲ್ಲಿ ಅಂಧರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದರು.
ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ
ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ
Updated on

ಬೆಂಗಳೂರು: 2028ರ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್‌ಗೂ ಮುನ್ನ ಅಂಧರ ಕ್ರಿಕೆಟ್‌ ಅನ್ನು ಉತ್ತೇಜಿಸಲು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ನಗರದಲ್ಲಿ ಅಂಧರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದರು.

ಎರಿಕ್ ಗಾರ್ಸೆಟ್ಟಿ ಅವಪು ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ್ದು, ಮೊದಲಿಗೆ ಬೆಂಗಳೂರಿನ ವಿಜ್ಞಾನ ಗ್ಯಾಲರಿಗೆ ಭೇಟಿ ನೀಡಿದರು, ನಂತರ ಅಂಧರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಅಂಧರ ಕ್ರಿಕೆಟ್‌ ಉತ್ತೇಜಿಸಲು ಈ ತಂಡ ಅಮೆರಿಕಕ್ಕೆ ಭೇಟಿ ನೀಡುತ್ತಿರುವುದಕ್ಕೆ ಶುಭ ಹಾರೈಸಿದರು.

ಗಾರ್ಸೆಟ್ಟಿ ಅವರು ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿದ್ದು, ಶುಕ್ರವಾರ ಅಮೆರಿಕಾ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಗುರುತಿಸಲು ಬಾಹ್ಯಾಕಾಶ ವಲಯದ ಮಂಚೂಣಿ ನಾಯಕರು ಮತ್ತು ಉದ್ಯಮಿಗಳನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ಅಮೆರಿಕ-ಭಾರತದ ಸಂಬಂಧ ಕಡಲ ತುದಿಯಿಂದ ಬಾಹ್ಯಾಕಾಶದ ನಕ್ಷತ್ರಗಳವರೆಗೂ ವಿವಿಧ ವಲಯಗಳಲ್ಲಿ ವಿಸ್ತರಿಸಲಿರುವ ವ್ಯಾಪಾರ ವಾಣಿಜ್ಯ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿದರು.

ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ
ಅಂಧರ T20 ವಿಶ್ವಕಪ್ 2022: ಬಾಂಗ್ಲಾವನ್ನು ಸೋಲಿಸಿ ಸತತ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ!

ಕಾನ್ಸಲ್‌ ಜನರಲ್‌ ಕ್ರಿಸ್‌ ಹಾಡ್ಜಸ್‌ ಅವರೊಡಗೂಡಿ ಇಸ್ರೋ ಅಧ್ಯಕ್ಷ ಡಾ. ಸೋಮನಾಥ್‌ ಅವರನ್ನು ಭೇಟಿ ಮಾಡಿದ ರಾಯಭಾರಿ ಗಾರ್ಸೆಟ್ಟಿ ಅವರು ನಾಸಾ- ಇಸ್ರೋ ಸಿಂಥೆಟಿಕ್‌ ಅಪೆರ್ಚರ್ ರಾಡಾರ್‌ ಮಿಷನ್‌ (NISAR) ಸೇರಿದಂತೆ ಬಾಹ್ಯಾಕಾಶವಲಯದಲ್ಲಿ ಸಹಯೋಗಗಳ ಕುರಿತು ಮಾತುಕತೆ ನಡೆಸಿದರು.

ಗಾರ್ಸೆಟ್ಟಿ ಅವರು ಉದ್ಯಮದ ಪ್ರಮುಖರು ಮತ್ತು ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್‌ ಇಂಡಿಯಾದ ಸದಸ್ಯರೊಂದಿಗೆ, ವ್ಯೂಹಾತ್ಮಕ ಭದ್ರತೆ ಮತ್ತು ತಂತ್ರಜ್ಞಾನದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ʼಯುಎಸ್-ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜೀಸ್ (iCET) ಮಹತ್ವದ ಕುರಿತು ಮಾತನಾಡಿದರು.

ಅಮೆರಿಕದ ರಾಯಭಾರಿ ಅವರು ಭಾರತದ ಮೊದಲ ಸಂಶೋಧನೆ ಆಧಾರಿತ ಹಾಗೂ ಸ್ವತಂತ್ರ ಲಾಭರಹಿತ ಸಾರ್ವಜನಿಕ ಸಂಸ್ಥೆಯಾದ ʻಬೆಂಗಳೂರು ಸೈನ್ಸ್‌ ಗ್ಯಾಲರಿʼಗೆ ಭೇಟಿ ನೀಡಿ “ಕಾರ್ಬನ್” ಪ್ರದರ್ಶನವನ್ನು ವೀಕ್ಷಿಸಿದರು.

ಜಂಟಿ ಬಾಹ್ಯಾಕಾಶ ಅನ್ವೇಷಣೆ, ಉಪಗ್ರಹಗಳ ಉಡಾವಣೆ ಹಾಗೂ ಗಗನಯಾತ್ರಿಗಳಿಗೆ ತರಬೇತಿ ನೀಡುವುದರ ಕುರಿತು ಕೇಂದ್ರೀಕೃತವಾಗಿದ್ದ ಅಮೆರಿಕ ಭಾರತ ವಾಣಿಜ್ಯ ಬಾಹ್ಯಾಕಾಶ ಸಹಕಾರ ಸಮ್ಮೇಳನದಲ್ಲಿ ಗಾರ್ಸೆಟ್ಟಿ ಅವರು ಮಾತನಾಡಿದರು.

ಅಮೆರಿಕ-ಭಾರತ ವಾಣಿಜ್ಯ ಬಾಹ್ಯಾಕಾಶ ಸಹಕಾರ ಸಮ್ಮೇಳನದಲ್ಲಿ ಭಾಗವಹಿಸಲು ನಾನು ಇಂದು ಬೆಂಗಳೂರಿಗೆ ಬಂದಿರುವುದಕ್ಕೆ ಸಂತೋಷವಾಗಿದೆ. ಇಸ್ರೊ ಅಧ್ಯಕ್ಷ ಡಾ. ಸೋಮನಾಥ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವುದು ಹೆಮ್ಮೆಯ ಸಂಗತಿ, ಏಕೆಂದರೆ ನಾವು ನಮ್ಮ ಪಾಲುದಾರಿಕೆಯನ್ನು ನಕ್ಷತ್ರಗಳಿಗೆ ಮತ್ತು ಅದರಾಚೆಗೆ ಕೊಂಡೊಯ್ಯಲು ವಾಣಿಜ್ಯ ಅವಕಾಶಗಳನ್ನು ಅನಾವರಣ ಮಾಡುತ್ತೇವೆ. ಇಂದಿನ ಕಾರ್ಯಕ್ರಮವು ಅಮೆರಿಕ ಮತ್ತು ಭಾರತದ ಬಾಹ್ಯಾಕಾಶ ಸಹಕಾರವನ್ನು ವಾಯುಮಂಡಲಕ್ಕೆ ವಿಸ್ತರಿಸುವ ಹಲವು ವಿಚಾರಗಳಲ್ಲಿ ಒಂದಾಗಿದೆ” ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com