ಕೊಪ್ಪಳ: ಒಂದೇ ಕುಟುಂಬದ ಮೂವರ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಪೂರ್ವ ನಿಯೋಜಿತ ಕೊಲೆ- ಪೊಲೀಸರ ವರದಿ!

ಆರೋಪಿಯು ವಸಂತಾ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸುವಂತೆ ಮತ್ತು ಬುರ್ಖಾ ಧರಿಸಲು ಒತ್ತಾಯಿಸುತ್ತಿದ್ದ ಎಂದು ಮೃತಳ ಸಂಬಂಧಿಕರು ದೂರಿದ್ದಾರೆ
ಕೊಲೆ ಆರೋಪಿ ಆರೀಫ್
ಕೊಲೆ ಆರೋಪಿ ಆರೀಫ್
Updated on

ಕೊಪ್ಪಳ: ಕೊಪ್ಪಳದ ಗ್ರಾಮವೊಂದರಲ್ಲಿ ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆಯಾಗಿದ್ದ ‘ಆತ್ಮಹತ್ಯೆ’ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಇದೊಂದು ಪೂರ್ವ ನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ.

ಮೃತ ಮಹಿಳೆ ವಸಂತ (32) ಪತಿ ಆರೀಫ್ ಮೊಹಮ್ಮದ್ ಗೌಸ್ ಈ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜೇಶ್ವರಿ (52), ಹಾಗೂ ಮಲ ಮಗ ಸಾಯಿಧರ್ಮತೇಜ (5) ಮತ್ತು ಪತ್ನಿ ವಸಂತಾಳನ್ನು ಆರೀಫ್ ಕೊಲೆ ಮಾಡಿದ್ದಾನೆ ಎಂಬುದು ಬಹಿರಂಗವಾಗಿದೆ.

ಮೃತದೇಹದ ಬಳಿ ವಿಷದ ಬಾಟಲಿ ಪತ್ತೆಯಾಗಿದ್ದರಿಂದ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಆರಂಭದಲ್ಲಿ ನಂಬಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮೂವರನ್ನು ಕತ್ತು ಹಿಸುಕಿ ಸಾಯಿಸವಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸರು ತಂಡ ರಚಿಸಿದ್ದರು. ಆರೋಪಿ ಆರಿಫ್ ಅಪರಾಧ ಸ್ಥಳಕ್ಕೆ ಭೇಟಿ ನೀಡದ ಕಾರಣ ಮತ್ತು ಅವರ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿರುವುದರಿಂದ ಸಾವಿನಲ್ಲಿ ಆತನ ಪಾತ್ರವಿದೆ ಎಂಬುದು ಸ್ಪಷ್ಟವಾಗಿತ್ತು. ಆರೀಫ್‌ನ ಆಪ್ತ ಸ್ನೇಹಿತನನ್ನು ನಾವು ಬಂಧಿಸಿದ್ದು, ಆತನ ಮೂಲಕ ಹೊಸಪೇಟೆಯಲ್ಲಿ ಆರೀಫ್ ನನ್ನು ಬಂಧಿಸಲು ಸಾಧ್ಯವಾಯಿತು. ಬುಧವಾರ ರಾತ್ರಿ ಕೊಪ್ಪಳಕ್ಕೆ ಕರೆತರಲಾಯಿತು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

ಕೊಲೆ ಆರೋಪಿ ಆರೀಫ್
ತುಮಕೂರು: ಪತ್ನಿ ಕತ್ತು ಕತ್ತರಿಸಿ, ಚರ್ಮ ಸುಲಿದ ಪ್ರಕರಣ; ನನ್ನ ಸೇವಾವಧಿಯಲ್ಲಿ ಇಂತಹ ಭೀಭತ್ಸ ಹತ್ಯೆ ನೋಡಿರಲಿಲ್ಲ- ಇನ್‌ಸ್ಪೆಕ್ಟರ್‌

ಆರೋಪಿಯು ವಸಂತಾ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸುವಂತೆ ಮತ್ತು ಬುರ್ಖಾ ಧರಿಸಲು ಒತ್ತಾಯಿಸುತ್ತಿದ್ದ ಎಂದು ಮೃತಳ ಸಂಬಂಧಿಕರು ದೂರಿದ್ದಾರೆ. "ರಂಜಾನ್ ಸಮಯದಲ್ಲಿ ಆರಿಫ್ ವಸಂತಾ ತನ್ನ ಸಂಪ್ರದಾಯಗಳನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದಾಗ ದಂಪತಿಗಳ ನಡುವೆ ಜಗಳವಾಗಿತ್ತು. ವಸಂತಾ ಆರೀಫ್ ಗೆ ಎರಡನೇ ಪತ್ನಿ. ಆರಿಫ್ ಆರಂಭದಲ್ಲಿ ವಸಂತ ಮತ್ತು ಆಕೆಯ ಮಗುವನ್ನು ಹಿಂದೂಗಳಾಗಿ ಸ್ವೀಕರಿಸಲು ಒಪ್ಪಿಕೊಂಡಿದ್ದ. ಆದರೆ ಅನಂತರ ತನ್ನ ಧರ್ಮವನ್ನು ಅನುಸರಿಸಲು ಅವರಿಗೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ರಂಜಾನ್ ನಂತರ ಆತ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿ, ಕುಟುಂಬವನ್ನು ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಎಂದು ಅಧಿಕಾರಿಯಯೊಬ್ಬರು ಹೇಳಿದರು.

ವಸಂತ ಅವರ ತಾಯಿ ರಾಜೇಶ್ವರಿ ಅವರ ನಿವಾಸದಲ್ಲಿ ಮುಸುಕು ಹಾಕಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರಿಫ್ ಒಪ್ಪಿಕೊಂಡಿದ್ದಾನೆ. ವಸಂತಾಳನ್ನು ಮತಾಂತರ ಮಾಡುವಂತೆ ಮನವೊಲಿಸಲು ಆಕೆಯ ಮನೆಗೆ ಬಂದಿದ್ದ. ತಾಯಿ ಒಪ್ಪದಿದ್ದಾಗ ಆಕೆಯನ್ನು ಕೊಂದಿದ್ದಾನೆ. ವಸಂತಾ ಅವರು ಗೊಂಬೆ ತಯಾರಿಕಾ ಘಟಕದಲ್ಲಿ ಕೆಲಸದ ಸ್ಥಳದಲ್ಲಿದ್ದಾಗ ಆಕೆಗೆ ದೂರವಾಣಿ ಕರೆ ಮಾಡಿದ್ದಾನೆ. ತನ್ನ ತಾಯಿ ಸತ್ತಿರುವ ಬಗ್ಗೆ ತಿಳಿಯದೆ, ಆಕೆ ಮನೆಗೆ ಮರಳಿದ್ದಾಳೆ. ಇದೇ ವೇಳೆ ಆಕೆಯ ಐದು ವರ್ಷದ ಮಗ ಹತ್ತಿರದಲ್ಲೇ ಇರುವ ಅವರ ಸಂಬಂಧಿಕರ ಮನೆಗೆ ಹೋಗಿದ್ದ.

ವಸಂತ ತನ್ನ ಕಾರ್ಖಾನೆಯ ಸಹೋದ್ಯೋಗಿಯೊಂದಿಗೆ ಸ್ನೇಹ ಬೆಳೆಸಿದ್ದರಿಂದ ಹತಾಶೆಗೊಂಡಿದ್ದಾಗಿ ಆರೋಪಿ ಹೇಳಿದ್ದಾನೆ. ಅವಳು ತನ್ನ ಗಂಡನಿಂದ ಬೇರ್ಪಟ್ಟಾಗ ನಾನು ಅವಳಿಗೆ ಹೊಸ ಜೀವನ ಕೊಟ್ಟಿದ್ದೆ. ನಾನು ಮೋಸ ಹೋದಾಗ, ಇಡೀ ಕುಟುಂಬವನ್ನು ಮುಗಿಸಲು ನಿರ್ಧರಿಸಿದೆ ಎಂದು ಆತ ಪೊಲೀಸರಿಗೆ ತಿಳಿಸಿದರು.

ಕೊಲೆ ಆರೋಪಿ ಆರೀಫ್
ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ: ಆರೋಪಿ ವಿಶ್ವ 8 ದಿನ ಸಿಐಡಿ ವಶಕ್ಕೆ

ವಸಂತ ಅವರ ಶವ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದ್ದರೆ, ಇನ್ನಿಬ್ಬರು ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿ ಸೀಲಿಂಗ್ ಫ್ಯಾನ್ ಒಂದಕ್ಕೆ ಬಟ್ಟೆ ಕಟ್ಟಿ ವಸಂತ ಮತ್ತು ರಾಜೇಶ್ವರಿ ಅವರ ತುಟಿಗೆ ವಿಷ ಹಾಕಿ ಶವದ ಬಳಿ ವಿಷದ ಬಾಟಲಿ ಎಸೆದಿದ್ದ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣದ ಬಗ್ಗೆ ಆರೋಪಿ ಆರೀಫ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದು ಬೆಳಕಿಗೆ ಬಂದಿದೆ. ಅವರ ಆಪ್ತ ಸ್ನೇಹಿತ ಆರಿಫ್‌ನ ಅನೇಕ ಆಲೋಚನೆಗಳು ಪ್ಲಾನ್ ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬುರ್ಖಾ ಧರಿಸದ ಹುಡುಗಿಯರಿಗಿಂತ ಅದನ್ನು ಧರಿಸಿದ ಹುಡುಗಿಯರು ಸುರಕ್ಷಿತವಾಗಿರುತ್ತಾರೆ ಎಂದು ಅವರು ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com