ಹಾಪ್ ಕಾಮ್ಸ್ ವತಿಯಿಂದ ಹಣ್ಣಿನ ಮೇಳ: ತಾಜಾ ಉತ್ಪನ್ನಗಳಿಗಾಗಿ Online ಸೇವೆ ಲಭ್ಯ!

ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಹಾಪ್‌ಕಾಮ್ಸ್) ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಆನ್‌ಲೈನ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರದಿಂದ ನವೆಂಬರ್ 11 ರವರೆಗೆ ಆಯ್ದ ಮಳಿಗೆಗಳಲ್ಲಿ ಹಾಪ್ ಕಾಮ್ಸ್ ವತಿಯಿಂದ ವಿಶೇಷ ಹಣ್ಣಿನ ಮೇಳವನ್ನು ಆಯೋಜಿಸಲಾಗಿದೆ.

ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಹಾಪ್‌ಕಾಮ್ಸ್) ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಆನ್‌ಲೈನ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.

ಈ ಪ್ಲಾಟ್‌ಫಾರ್ಮ್ ಮೂಲಕ, ಗ್ರಾಹಕರು Paytm, Snapdeal ಮತ್ತು Pincode ನಂತಹ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು Hopcoms ಉತ್ಪನ್ನಗಳನ್ನು ಖರೀದಿಸಬಹುದು, ಎಲ್ಲವೂ ONDC ನೆಟ್‌ವರ್ಕ್‌ಗೆ ಸಂಪರ್ಕಿತವಾಗಿದೆ. ಈ ಡಿಜಿಟಲ್ ಕ್ರಮದಿಂದ ತಾಜಾ ಉತ್ಪನ್ನವನ್ನು ಹೆಚ್ಚು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.ತನ್ನ ಆನ್‌ಲೈನ್ ಜಾಲವನ್ನು ಇನ್ನಷ್ಟು ವಿಸ್ತರಿಸಲು, ಹಾಪ್‌ಕಾಮ್ಸ್ ಜಕ್ಕೂರ್ ಟೆಕ್ನೋಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ತನ್ನ ಉತ್ಪನ್ನಗಳನ್ನು ನಿಯರ್‌ಶಾಪ್ ಅಪ್ಲಿಕೇಶನ್‌ನಲ್ಲಿ ನವೆಂಬರ್ 1 ರಿಂದ ಮಾರಾಟ ಮಾಡಲು ಕೈಜೋಡಿಸಿದೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮತ್ತು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಶಂಕರ್ ಮಿರ್ಜಿ ಮಾತನಾಡಿ, ಈ ಕ್ರಮವು ರೈತರನ್ನು ಬೆಂಬಲಿಸುತ್ತದೆ ಮತ್ತು ಹಾಪ್‌ಕಾಮ್ಸ್ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. "ನಮ್ಮ ಕೆಲವು ಮಳಿಗೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಮುಚ್ಚುವ ಸ್ಥಿತಿ ತಲುಪಿವೆ ಹಾಗಾಗಿ ನಾವು ಈಗ ವೈಯಕ್ತಿಕ ಮತ್ತು ಆನ್‌ಲೈನ್ ಚಾನೆಲ್‌ಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ ಎಂದು ಅವರು ಹೇಳಿದರು. ONDC ಪ್ಲಾಟ್‌ಫಾರ್ಮ್, ಭಾರತ ಸರ್ಕಾರದ ಯೋಜನೆಯು ವ್ಯಾಪಾರಿಗಳಿಗೆ ಮಾರಾಟಗಾರರ ಪ್ರತಿನಿಧಿಗಳ ಮೂಲಕ ಸೇರಲು ಅನುವು ಮಾಡಿಕೊಡುತ್ತದೆ. ನಗರದಲ್ಲಿ ಸುಮಾರು 100 ಹಾಪ್‌ಕಾಮ್ಸ್ ಔಟ್‌ಲೆಟ್‌ಗಳು ಈಗಾಗಲೇ ನೋಂದಾಯಿಸಲ್ಪಟ್ಟಿವೆ, ಉತ್ಪನ್ನದ ಬೆಲೆಗಳಲ್ಲಿ ವಿತರಣಾ ಶುಲ್ಕಗಳು ಸೇರಿವೆ. ದೆಹಲಿಯನ್ನು ಹೊರತುಪಡಿಸಿ, ಒಎನ್‌ಡಿಸಿಯಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಮೊಬೈಲ್ ಸ್ಟಾಲ್‌ಗಳನ್ನು ಸ್ಥಾಪಿಸುವ ಮೂಲಕ ತನ್ನ ಭೌತಿಕ ಮಾರಾಟವನ್ನು ವಿಸ್ತರಿಸಲು ಹಾಪ್‌ಕಾಮ್ಸ್ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ನೊಂದಿಗೆ ಸಹಭಾಗಿತ್ವ ಹೊಂದಿದೆ. ಪ್ರತಿಕ್ರಿಯೆ ಆಧರಿಸಿ ನಗರಾದ್ಯಂತ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

Representational image
ಇದೀಗ ಆ್ಯಪ್ ಮೂಲಕ ಬೆಂಗಳೂರಿಗರ ಮನೆ ಬಾಗಿಲಿಗೆ ಹಾಪ್ ಕಾಮ್ಸ್ ತಾಜಾ ಹಣ್ಣು, ತರಕಾರಿಗಳು!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com