ಇದೀಗ ಆ್ಯಪ್ ಮೂಲಕ ಬೆಂಗಳೂರಿಗರ ಮನೆ ಬಾಗಿಲಿಗೆ ಹಾಪ್ ಕಾಮ್ಸ್ ತಾಜಾ ಹಣ್ಣು, ತರಕಾರಿಗಳು!

ಬೆಂಗಳೂರಿಗರು ಈಗ ಹಾಪ್‌ಕಾಮ್ಸ್‌ನಿಂದ ಆನ್‌ಲೈನ್‌ನಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ತಮ್ಮ ಮನೆ ಬಾಗಿಲಿಗೆ ಡೆಲಿವರಿ ಮಾಡಿಸಿಕೊಳ್ಳಬಹುದು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿಗರು ಈಗ ಹಾಪ್‌ಕಾಮ್ಸ್‌ನಿಂದ ಆನ್‌ಲೈನ್‌ನಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ತಮ್ಮ ಮನೆ ಬಾಗಿಲಿಗೆ ಡೆಲಿವರಿ ಮಾಡಿಸಿಕೊಳ್ಳಬಹುದು. ಇದರ ಹೊರತಾಗಿ, ರೆಸ್ಟೋರೆಂಟ್‌ಗಳು ಮತ್ತು ಮದುವೆಗಳು ಮತ್ತಿತರ ಸಣ್ಣ ಕಾರ್ಯಕ್ರಮಗಳಿಗಾಗಿ ಬೃಹತ್ ಆರ್ಡರ್ ಮಾಡಿದರೆ ಸ್ಥಳಗಳಿಗೆ ಸರಕು ಕಳುಹಿಸುವುದರೊಂದಿಗೆ ಶೇ. 10 ರಷ್ಟು ರಿಯಾಯಿತಿ ಕೂಡಾ ಸಿಗಲಿದೆ. 

ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಆ್ಯಪ್ ಮೂಲಕ ಹಾಪ್ ಕಾಮ್ಸ್ ಆನ್‌ಲೈನ್ ಫಲ ಸರಕು ಮಾರುಕಟ್ಟೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದು, ನಗರಾದ್ಯಂತ 25 ಅಂಗಡಿಗಳನ್ನು ಪಟ್ಟಿ ಮಾಡಿದೆ. ಇಲ್ಲಿ ಆರ್ಡರ್ ಮಾಡಬಹುದು.

ಈ ಹಿಂದೆ ಹಾಪ್ ಕಾಮ್ಸ್  ಆನ್‌ಲೈನ್ ಮಾರುಕಟ್ಟೆಗೆ ಬರಲು ಪ್ರಯತ್ನಿಸಿದಾಗ ಕೇಂದ್ರೀಕೃತ ವ್ಯವಸ್ಥೆ ನೆರವಾಗಲಿಲ್ಲ. ಆದರೆ ಈಗ ಹೊಸ ವಿಧಾನ ಮತ್ತು ವಿಕೇಂದ್ರೀಕೃತ ಮಾರುಕಟ್ಟೆಯೊಂದಿಗೆ, ಗ್ರಾಹಕರು ತಮ್ಮ ಸ್ಥಳದಲ್ಲಿ ಹಾಪ್ ಕಾಮ್ಸ್  ಮಳಿಗೆ ಆಯ್ಕೆ ಮಾಡಬಹುದು ಮತ್ತು ಆರ್ಡರ್ ಮಾಡಬಹುದು. ಮೇ ತಿಂಗಳಲ್ಲಿ 405 ಆರ್ಡರ್ ಗಳಲ್ಲಿ ರೂ. 62,791 ನಷ್ಟು ಲಾಭ ಮಾಡಿದ್ದ ಹಾಪ್ ಕಾಮ್ಸ್ ನ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸಬ್ಸಿಡಿ ದರದಲ್ಲಿ ಪಡೆಯುವ ಕಲ್ಪನೆಯು ಜನಪ್ರಿಯವಾಗುತ್ತಿದ್ದಂತೆ, ಜೂನ್‌ನಲ್ಲಿ 1,02,914 ರೂಪಾಯಿಯಷ್ಟು ಲಾಭ ಪಡೆದಿದೆ.

ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ಇದು ಯಶಸ್ವಿಯಾದರೆ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತೇವೆ ಎಂದು ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ONDC ಆ್ಯಪ್ ಗೆ ಕ್ಯಾಟಲಾಗ್ ಮತ್ತು ಬೆಲೆ ಬದಲಾವಣೆಗಳನ್ನು ನಿಯಮಿತವಾಗಿ ನವೀಕರಿಸಲು ತಂತ್ರಜ್ಞಾನ ಪಾಲುದಾರ ಸಂಸ್ಥೆ Innobits ನೊಂದಿಗೆ ಪಾಲುದಾರಿಕೆ ಹೊಂದಿದೆ. 7,500 ಕ್ಕೂ ಹೆಚ್ಚು ರೈತರು ಹಾಪ್ ಕಾಮ್ಸ್ ನ ಭಾಗವಾಗಿದ್ದು, ಯುವ ಪೀಳಿಗೆ ತಂತ್ರಜ್ಞಾನದ ತಿಳುವಳಿಕೆ ಹೊಂದಿರುವುದರಿಂದ, ಆ್ಯಪ್ ಮೂಲಕ ಖರೀದಿ ಹೆಚ್ಚಿನ ಗ್ರಾಹಕರನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು. 

ಒಎನ್‌ಡಿಸಿಯ ಧೀರಜ್ ಕುಮಾರ್, “ಒಎನ್‌ಡಿಸಿ ಮಾರುಕಟ್ಟೆಯಲ್ಲಿ ಹಾಪ್‌ಕಾಮ್ಸ್ ಹೊಂದಿರುವುದರಿಂದ ಆನ್‌ಲೈನ್ ಕಿರಾಣಿ ಅಂಗಡಿಗಳು ಕೆಲಸ ಮಾಡುವ ವಿಧಾನವನ್ನು ಬದಲಾಯಿಸುತ್ತವೆ. ಇದೇ ಮಾದರಿಯನ್ನು ಇತರ ಜಿಲ್ಲೆಗಳು ಮತ್ತು ನಗರಗಳಲ್ಲಿ ಪುನರಾವರ್ತಿಸಬಹುದು, ಗ್ರಾಹಕರಿಗೆ ಸಬ್ಸಿಡಿ ದರಗಳಿಗೆ ಪ್ರವೇಶವನ್ನು ನೀಡುತ್ತದೆ.

ಪ್ರಸ್ತುತ ಸರಕು ಸಾಗಣೆಗೆ ರೂ.50 ಶುಲ್ಕ ವಿಧಿಸಲಾಗುತ್ತಿದೆ.ಇದು ಡೆಲಿವರಿ ಏಜೆಂಟ್ ಗೆ ಹೋಗುತ್ತದೆ. ಒಎನ್‌ಡಿಸಿ ಸರ್ಕಾರ ಮತ್ತು ಸಣ್ಣ-ಪ್ರಮಾಣದ ವ್ಯವಹಾರಸ್ಥರಿಗೆ ಉತ್ತಮ ವೇದಿಕೆಯಾಗಿದೆ, ಅಲ್ಲಿ ಒಂದೇ ಪ್ಲಾಟ್‌ಫಾರ್ಮ್ ಅಲ್ಲದೇ ಭವಿಷ್ಯದಲ್ಲಿ ಪೇಟಿಎಂ, ಮೈಸ್ಟೋರ್ ಮತ್ತು ಮ್ಯಾಜಿಕ್‌ಪಿನ್‌ನಂತಹ ವೇದಿಕೆಗಳಲ್ಲೂ  ಹಾಪ್‌ಕಾಮ್‌ಗಳು ಉತ್ಪನ್ನಗಳನ್ನು ತಲುಪಿಸಲು ಪ್ರಾರಂಭಿಸಬಹುದು, ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಒಎನ್ ಡಿಸಿಯ ಧೀರಜ್ ಕುಮಾರ್ ತಿಳಿಸಿದರು.

QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ https://www.ondc.org/ondc-buyer-apps ಲಾಗಿನ್ ಆಗುವ ಮೂಲಕ ಗ್ರಾಹಕರು ಹಾಪ್ ಕಾಮ್ಸ್ ನಿಂದ ಆರ್ಡರ್ ಮಾಡಬಹುದು:

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com