ಗ್ಯಾರಂಟಿ ಯೋಜನೆಗಳ ಬಗ್ಗೆ ಖರ್ಗೆ ಸಲಹೆ: ಜನರ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ- ಪ್ರಧಾನಿ ಮೋದಿ ವಾಗ್ದಾಳಿ

ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಸರಿಯಾಗಿ ಜಾರಿಗೆ ತರುವುದು ಕಠಿಣ ಅಥವಾ ಅಸಾಧ್ಯ ಎನ್ನುವುದು ಕಾಂಗ್ರೆಸ್ ಗೆ ಅರಿವಾಗುತ್ತಿದೆ.
PM Modi
ಪ್ರಧಾನಿ ಮೋದಿ
Updated on

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆಯನ್ನು ಪರಿಶೀಲಿಸುತ್ತೇವೆ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬಜೆಟ್​ನಲ್ಲಿ ಏನಿದೆ ಅದರಂತೆ ಗ್ಯಾರಂಟಿ ಯೋಜನೆ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ ಬಳಿಕ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅವಾಸ್ತವಿಕ ಭರವಸೆಗಳನ್ನು ನೀಡುವುದು ಸುಲಭ. ಆದರೆ ಅವುಗಳನ್ನು ಸರಿಯಾಗಿ ಜಾರಿಗೆ ತರುವುದು ಕಠಿಣ ಅಥವಾ ಅಸಾಧ್ಯ ಎನ್ನುವುದು ಕಾಂಗ್ರೆಸ್ ಗೆ ಅರಿವಾಗುತ್ತಿದೆ. ಪ್ರಚಾರದ ವೇಳೆಯಲ್ಲಿ ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ಆಗುವುದಿಲ್ಲ ಎನ್ನುವುದು ಅವರಿಗೆ ತಿಳಿಸಿದೆ.ಈಗ ಅವರು ಜನರ ಮುಂದೆ ಕೆಟ್ಟದಾಗಿ ಬೆತ್ತಲಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳನ್ನೊಮ್ಮೆ ನೋಡಿ ಅಭಿವೃದ್ಧಿಯ ಪಥ ಮತ್ತು ಹಣಕಾಸಿನ ಸ್ಥಿತಿ ಹದಗೆಡುತ್ತಿದೆ. ಅವರು ಗ್ಯಾರಂಟಿಗಳು ಎಂದು ಹೇಳಿಕೊಳ್ಳುವ ಯೋಜನೆಗಳು ಈಡೇರಿಸಲಾಗದ ಸುಳ್ಳುಗಳು. ಇದು ರಾಜ್ಯದ ಜನತೆಗೆ ಅವರು ಮಾಡುತ್ತಿರುವ ಮಹಾಮೋಸ. ಬಡವರು, ಯುವಕರು, ರೈತರು ಹಾಗೂ ಮಹಿಳೆಯರು ಇಂತಹ ರಾಜಕೀಯದ ಸಂತ್ರಸ್ತರು. ಅವರಿಗೆ ನೀಡಲಾದ ಭರವಸೆಗಳ ಪ್ರಯೋಜನ ಸಿಗುತ್ತಿಲ್ಲ. ಅಲ್ಲದೆ ಈಗಿರುವ ಯೋಜನೆಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

PM Modi
'ಶಕ್ತಿ ಯೋಜನೆ' ಪರಿಷ್ಕರಣೆ ಹೇಳಿಕೆ: ಡಿಸಿಎಂ ಡಿಕೆ ಶಿವಕುಮಾರ್ ಗೆ ವೇದಿಕೆಯಲ್ಲೇ ಖರ್ಗೆ ತರಾಟೆ

ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳನ್ನೊಮ್ಮೆ ನೋಡಿ ಅಭಿವೃದ್ಧಿಯ ಪಥ ಮತ್ತು ಹಣಕಾಸಿನ ಸ್ಥಿತಿ ಹದಗೆಡುತ್ತಿದೆ. ಅವರು ಗ್ಯಾರಂಟಿಗಳು ಎಂದು ಹೇಳಿಕೊಳ್ಳುವ ಯೋಜನೆಗಳು ಈಡೇರಿಸಲಾಗದ ಸುಳ್ಳುಗಳು. ಇದು ರಾಜ್ಯದ ಜನತೆಗೆ ಅವರು ಮಾಡುತ್ತಿರುವ ಮಹಾಮೋಸ. ಬಡವರು, ಯುವಕರು, ರೈತರು ಹಾಗೂ ಮಹಿಳೆಯರು ಇಂತಹ ರಾಜಕೀಯದ ಸಂತ್ರಸ್ತರು. ಅವರಿಗೆ ನೀಡಲಾದ ಭರವಸೆಗಳ ಪ್ರಯೋಜನ ಸಿಗುತ್ತಿಲ್ಲ. ಅಲ್ಲದೆ ಈಗಿರುವ ಯೋಜನೆಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com