Representational image
ಸಾಂದರ್ಭಿಕ ಚಿತ್ರ

ಮೈಸೂರು: Instagram ನಲ್ಲಿ ಫಾಲೋವರ್ಸ್ ಹೆಚ್ಚಾಗಿದ್ದಕ್ಕೆ ಯುವತಿಯಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ!

ನಗರದ ಖಾಸಗಿ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಶಫಿಯಾ ಸುಮಾರು ಎರಡು ವರ್ಷಗಳಿಂದ Instagram ಮತ್ತು Snapchat ನಲ್ಲಿ ಸಕ್ರಿಯರಾಗಿದ್ದಾರೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಆಕೆಯ ಫಾಲೋವರ್ಸ್ ಸಂಖ್ಯೆ ಹೆಚ್ಚಿತ್ತು,
Published on

ಮೈಸೂರು: ಇನ್‌ಸ್ಟಾಗ್ರಾಮ್ ಹಾಗೂ ಸ್ನಾಪ್ ಚಾಟ್ ಫಾಲೋವರ್ಸ್ ಹೆಚ್ಚಾದ ಹಿನ್ನಲೆಯಲ್ಲಿ ಅಸೂಯೆಗೊಂಡ ಯುವತಿಯೊಬ್ಬಳು ತನ್ನ ಸ್ನೇಹಿತರ ಜೊತೆ ಸೇರಿ ರಾತ್ರೋರಾತ್ರಿ ಮನೆಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಮನಬಂದತೆ ಹಲ್ಲೆ ನಡೆಸಿದ ಘಟನೆ ಮೈಸೂರು ಜಿಲ್ಲೆಯ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಶಫಿಯಾ ಸುಮಾರು ಎರಡು ವರ್ಷಗಳಿಂದ Instagram ಮತ್ತು Snapchat ನಲ್ಲಿ ಸಕ್ರಿಯರಾಗಿದ್ದಾರೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಆಕೆಯ ಫಾಲೋವರ್ಸ್ ಸಂಖ್ಯೆ ಹೆಚ್ಚಿತ್ತು, ಇದು ಬೇರೆಯವರ ಅಸೂಯೆಗೆ ಕಾರಣವಾಗಿತ್ತು. ಜೋಯಾ ಎಂಬಾಕೆ ಫರಾಜ್ ಹಾಗೂ ಮೋಹಿನ್ ಜೊತೆ ಸೇರಿ ಶಾಫಿಯಾ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಶಾಫಿಯಾ ಸುಮಾರು 2 ವರ್ಷಗಳಿಂದ ಇನ್ಸ್ಟಾಗ್ರಾಮ್‌ ಹಾಗೂ ಸ್ನಾಪ್ ಚಾಟ್‌ನಲ್ಲಿ ಆಕ್ಟೀವ್ ಆಗಿದ್ದಾಳೆ. ಹೀಗಾಗಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅಸೂಯೆಗೊಂಡ ಜೋಯಾ ಇನ್ಸ್ಟಾಗ್ರಾಮ್‌ ಹಾಗೂ ಸ್ನಾಪ್ ಚಾಟ್ ಅಕೌಂಟ್‌ಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾಳೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಎರಡು ತಿಂಗಳಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಈ ಜಗಳವೇ ಮುಂದುವರಿದು ಅಕ್ಟೋಬರ್ 28ರಂದು ಜೋಯಾ ತನ್ನ ಸ್ನೇಹಿತರಾದ ಫರಾಜ್ ಹಾಗೂ ಮೋಹಿನ್ ಜೊತೆ ರಾಜೀವ್ ನಗರದಲ್ಲಿರುವ ಶಾಫಿಯಾ ಮನೆಗೆ ಏಕಾಏಕಿ ನುಗ್ಗಿ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಸಭ್ಯವಾಗಿ ವರ್ತಿಸಿ ಶೋಕೇಸ್ ಗಾಜು ಪುಡಿಪುಡಿ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಉದಯಗಿರಿ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರನ್ನು ಕಂಡ ಮೂರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಜೋಯಾ, ಫರಾನ್ ಹಾಗೂ ಮೊಹೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಾಫಿಯಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Representational image
ಸ್ನೇಹಿತರ ದಿನಾಚರಣೆ: ಸೋಷಿಯಲ್ ಮೀಡಿಯಾ ಮೂಲಕ ಆರಂಭವಾದ ಸ್ನೇಹಲೋಕ ಗೆಳೆಯರ ಬಳಗಕ್ಕೆ ಈಗ 5ರ ಹರೆಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com