ಕೊಳೆತ ಸ್ಥಿತಿಯಲ್ಲಿ ಚಿತ್ರ ನಿರ್ದೇಶಕ ಗುರು ಪ್ರಸಾದ್ ಮೃತ ದೇಹ ಪತ್ತೆ! ಪತ್ನಿ ಸುಮಿತ್ರಾ ದೂರಿನಲ್ಲಿ ಏನಿದೆ?

ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದ ಗುರುಪ್ರಸಾದ್ ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಿತ್ರಾ ಎಂಬುವರನ್ನು ಎರಡನೇ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಕೂಡಾ ಇದೆ.
Director Guruprasad
ನಿರ್ದೇಶಕ ಗುರು ಪ್ರಸಾದ್ ಮೃತದೇಹ
Updated on

ಬೆಂಗಳೂರು: ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಗುರು ಪ್ರಸಾದ್ (52) ಆತ್ಮಹತ್ಯೆ ನಿಜಕ್ಕೂ ಆಘಾತಕಾರಿಯಾಗಿದೆ. ಮಠ, ಏದ್ದೇಳು ಮಂಜುನಾಥ್ ಮತ್ತಿತರ ಸೂಪರ್ ಹಿಟ್ ಚಿತ್ರಗಳ ಪ್ರತಿಭಾವಂತ ನಿರ್ದೇಶಕರಾಗಿದ್ದ ಗುರು ಪ್ರಸಾದ್ ಆತ್ಮಹತ್ಯೆಗೆ ಸಾಲವೇ ಕಾರಣ ಎನ್ನಲಾಗಿದೆ. ನವೆಂಬರ್ 2 ಅವರ ಹುಟ್ಟುಹಬ್ಬವಿತ್ತು. ಆದರೆ, 3-4ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳತೆ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದ ಗುರುಪ್ರಸಾದ್ ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಿತ್ರಾ ಎಂಬುವರನ್ನು ಎರಡನೇ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಕೂಡಾ ಇದೆ. ಆದರೆ, ಅವರೊಂದಿಗೂ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗಿತ್ತಂತೆ. ಕಳೆದ ಆರು ತಿಂಗಳಿಂದ ಅವರು ಜೊತೆಯಲ್ಲಿ ಇರಲಿಲ್ಲವಂತೆ!

ಹೌದು. ಸುಮಿತ್ರಾ ಅವರು ಮಾದನಾಯಕನಹಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಕಳೆದ 6 ತಿಂಗಳ ಹಿಂದೆ ಹುಸ್ಕೂರನ ನ್ಯೂ ಅವೆನ್ ಅಪಾರ್ಟ್ಮೆಂಟ್ ಗೆ ಬಂದಿದ್ದೆವು. ಟವರ್ ನಂ 27ರ ನಲ್ಲಿರುವ ಮನೆ ನಂ 11 ಮೊದಲನೇ ಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದೆವು. ನನಗೆ ಅನಾರೋಗ್ಯದ ಕಾರಣ ಯಜಮಾನರು ನನ್ನನ್ನ ತಾಯಿಯ ಮನೆಯಲ್ಲಿ ಇರಲು ಹೇಳಿ ಕಳಿಸಿಕೊಟ್ಟಿದ್ದರು. ಲೋಕಸಭಾ ಚುನಾವಣೆಯಲ್ಲಿ ಕೊನೆಯ ಬಾರಿ ಸಿಕ್ಕಿದ್ದಾಗಿ ತಿಳಿಸಿದ್ದಾರೆ.

ಗುರುಪ್ರಸಾದ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ದೂರವಾಣಿ ಮೂಲಕ ಸಂಪರ್ಕದಲಿದ್ದೆವು. ಅಕ್ಟೋಬರ್ 24 ರಂದು ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದೆ. ಆದರೆ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಬ್ಯುಸಿ ಇದ್ದಾರೆ ಎಂದು ಸುಮ್ನೆ ಆಗಿದ್ದೆ. ಇದಾದ ನಂತರ ಇಂದು ಬೆಳಗ್ಗೆ ಒಂದು ಗಂಟೆಗೆ ಅಪಾರ್ಟ್ಮೆಂಟ್ ನಿವಾಸಿ ಜಯರಾಮ್ ಕರೆ ಮಾಡಿ ನಿಮ್ಮ ಮನೆಯ ಬಾಗಿಲ ಬಳಿ ದುರ್ವಾಸನೆ ಬರುತ್ತಾ ಇದೆ, ಮನೆಯ ಬಾಗಿಲ ಬಳಿ ಬಾಗಿಲು ತಟ್ಟಿದ್ದರು ಬಾಗಿಲು ತೆಗೆಯುತ್ತಿಲ್ಲ ಎಂದು ಮಾಹಿತಿ ನೀಡಿದ್ರು. ತದನಂತರ ಗಾಬರಿಯಿಂದ ನಮ್ಮ ಕುಟುಂಬದ ಸದಸ್ಯರೊಂದಿಗೆ ಬಂದು ನೋಡಿದಾಗ ಮನೆಯ ಬಾಗಿಲು ಹಾಕಿತ್ತು. ಕಿಟಕಿಯಲ್ಲಿ ಬಗ್ಗಿ ನೋಡಿದರೆ ಯಜಮಾನರು ಆತ್ಮಹತ್ಯೆಗೆ ಶರಣಾಗಿದ್ದರು. ನೆರೆಹೊರೆಯವರು ಹಾಗೂ ಪೋಲೀಸರ ನೆರವಿನೊಂದಿಗೆ ಬಾಗಿಲನ್ನು ಮೀಟಿ ಒಳಗೆ ಮನೆಯೊಳಗೆ ಪ್ರವೇಶಿಸಿದೆವು. ಆಗ ನನ್ನ ಗಂಡ ಗುರುಪ್ರಸಾದ್ ನೇಣಿಗೆ ಶರಣಾಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು 3-4 ದಿನಗಳ ಹಿಂದೆ ಯಾವುದೋ ಸಮಯದಲ್ಲಿ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ನೂಲಿನ ಹಗ್ಗದಿಂದ ನೇಣಿಗೆ ಶರಣಾಗಿದ್ದಾರೆ. ಮಹಡಿಯ ಕಬ್ಬಿಣದ ಕೊಕ್ಕೆಗೆ ಕಟ್ಟಿಕೊಂಡು ಕುಣಿಕೆ ಮಾಡಿ ಕತ್ತನ್ನು ಜೀರಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Director Guruprasad
'ಮಾನ ಮರ್ಯಾದೆ ಹರಾಜು ಹಾಕುತ್ತೇನೆ'; 'ನಿರ್ದೇಶಕ ಗುರುಪ್ರಸಾದ್ ಬಿಜೆಪಿ ವಿರೋಧಿ, ಎಡಪಂಥೀಯ ವ್ಯಕ್ತಿ': ಸಾವಿನ ಬಳಿಕ ನಟ ಜಗ್ಗೇಶ್​!

ಸಿನಿಮಾ ವಿಚಾರದಲ್ಲಿ ಗುರುಪ್ರಸಾದ್ ಸಾಲ ಮಾಡಿಕೊಂಡಿದ್ದರು. ಈ ವಿಚಾರವನ್ನು ಆಗಾಗ್ಗೆ ಹೇಳುತ್ತಿದ್ದರು. ಸಾಲವನ್ನು ತೀರಿಸೋಣ ಎಂದು ಧೈರ್ಯ ಹೇಳುತ್ತಿದ್ದೆ. ಆದರೂ ನನ್ನ ಗಂಡ ಸಾಲದ ಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನನ್ನ ಗಂಡನ ಸಾವಿನಲ್ಲಿ ಅನುಮಾನ ಇಲ್ಲ. ನೇಣು ಹಾಕೊಂಡಿರುವ ಬಗ್ಗೆ ನಿಖರವಾದ ಕಾರಣ ತನಿಖೆ ಮಾಡಬೇಕೆಂದು ಎಂದು ಸುಮಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com