ಬೆಂಗಳೂರು: ಹೈಕೋರ್ಟ್ ತೀರ್ಪು ಬಿಡಿಎ ಪರವಾಗಿ ಬಂದಿದ್ದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.
ಭೂಮಾಲೀಕರು ಏಕಾಏಕಿ ಜಮೀನನ್ನು ನರ್ಸರಿಗಳಾಗಿ ಪರಿವರ್ತಿಸಿದರು, ಹೀಗಾಗಿ ಸ್ವಾಧೀನ ಪ್ರಕ್ರಿಯೆಯಿಂದ ಹೊರಗುಳಿದಿದ್ದರಿಂದ ಈ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳಲು ಬಿಡಿಎಗೆ ಸಾಧ್ಯವಾಗಲಿಲ್ಲ. ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದ್ದರೂ, ನಾವು ಈ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಾಲೀಕರು ಸಸಿಗಳನ್ನು ನೆಟ್ಟು ಸಣ್ಣ ನರ್ಸರಿಗಳನ್ನಾಗಿ ಮಾಡಿದರು. ಈಗ ಬಡಾವಣೆಯಲ್ಲಿ ಕನಿಷ್ಠ 15 ನರ್ಸರಿಗಳಿವೆ. ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ವಿನಾಯಿತಿ ಕೋರಿ ನ್ಯಾಯಮೂರ್ತಿ ಎವಿ ಚಂದ್ರಶೇಖರ್ ಸಮಿತಿಯ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಅಲ್ಲಿ ಬೆಳೆದ ಗಿಡಗಳನ್ನು ರೈತರಿಗೆ ಸರಬರಾಜು ಮಾಡಿದ್ದೇವೆ ಎಂದು ಜಮೀನು ಮಾಲೀಕರು ಹೇಳಿಕೊಂಡಿದ್ದಾರೆ. ನಂತರ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ವರ್ಗಾಯಿಸಿತು. "ಒಬ್ಬರ ಜಾಗದಲ್ಲಿ ನರ್ಸರಿ ಆರಂಭಿಸುವುದು ಈ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳದಿರಲು ಒಂದು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದೆ" ಎಂದು ಅವರು ಹೇಳಿದರು.
ಮಧ್ಯಭಾಗದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಇದು ಲೇಔಟ್‌ನಲ್ಲಿ ನಮ್ಮ ಮೂಲಸೌಕರ್ಯ ಅಭಿವೃದ್ಧಿ ಕೆಲಸಕ್ಕೆ ಅಡ್ಡಿಯಾಗಿತ್ತು, ನಾವು ಈಗ ಆ ಕೆಲಸವನ್ನು ಮುಂದುವರಿಸಬಹುದಾಗಿದೆ. ಸೋಮವಾರದಿಂದ ಈ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರಂತ ಬಡಾವಣೆಯಲ್ಲಿ 34,000 ನಿವೇಶನಗಳಿವೆ. ನಿವೇಶನ ಹಂಚಿಕೆಗೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದೆ.
Advertisement