ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯ 17 ಹಳ್ಳಿಗಳಲ್ಲಿ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯು ಸಕ್ರಮಗೊಳಿಸಿರುವ 5171 ಕಟ್ಟಡಗಳಿಗೆ ಅಭಿವೃದ್ದಿ ಶುಲ್ಕ ನಿಗದಿುಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ.
ಬಿಡಿಎಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಯಾವುದೇ ಪ್ರದೇಶದಲ್ಲಿ ಬಿಡಿಎ ಯೋಜನೆ ಕಾರ್ಯಗತಗೊಳಿಸಿದಾಗ ಸುತ್ತಮುತ್ತಲಿನ ಆಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ಬಿಡಿಎ ಕಾಯಿದೆ ಸೆಕ್ಷನ್ 20 ಮತ್ತು 21 ರ ಅಡಿಯಲ್ಲಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಲು ಮುಂದಾಗಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಶುಲ್ಕವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂದು ವಿವರಿಸಿರುವ ಅಧಿಕಾರಿಗಳು, ಭೂಮಿಗೆ ಬಿಡಿಎ ಲೇಔಟ್ ನಿರ್ಮಾಣದ ಮೊದಲು ಇದ್ದ ಮಾರುಕಟ್ಟೆ ಮೌಲ್ಯ ಮತ್ತು ನಂತರ ಇರುವ ಮೌಲ್ಯವನ್ನು ನಿರ್ಣಯಿಸಲಾಗುತ್ತದೆ. ನಂತರ ಎರಡು ಮೌಲ್ಯಗಳ ನಡುವಿನ ವ್ಯತ್ಯಾಸದ ಮೂರನೇ ಒಂದು ಭಾಗವಾಗದಷ್ಟು ಶುಲ್ಕವನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿ ಚದರ ಅಡಿಗೆ ವಿಧಿಸಬೇಕಾದ ಶುಲ್ಕವನ್ನು ಅಧಿಕಾರಿಗಳು ವಿವರಿಸಿದ್ದು, ಈ ಕುರಿತು ಮಾಹಿತಿ ಈ ಕೆಳಗಿನಂತಿದೆ... ಪ್ರತಿ ಚದರ ಮೀಟರ್ (ಸಾವಿರ ರೂ.ಗಳಲ್ಲಿ) ಪ್ರತಿ ಚದರ ಅಡಿ (ರೂ.ಗಳಲ್ಲಿ)
ಬೈಲಕೆರೆ – 1,833 – 170
ಜೆ.ಬಿ. ಕಾವಲ್- 2000 -186
ಸೋಮಶೆಟ್ಟಿಹಳ್ಳಿ -5,000- 465
ಗಾಣಿಗರಹಳ್ಳಿ – 5000 – 465
ಆವಲಹಳ್ಳಿ- 6042 – 561
ಹಾರೋಹಳ್ಳಿ- 1790 – 166
ಮೇಡಿ ಅಗ್ರಹಾರ- 667 – 62
ಕಾಳತಮ್ಮನಹಳ್ಳಿ- 1,167 – 180
ಕೆಂಪಾಪುರ – 12,367 – 1,149
ರಾಮಗೊಂಡನಹಳ್ಳಿ- 11,067- 1,028
ಕೆಂಪನಹಳ್ಳಿ- 465 – 43
ಲಕ್ಷ್ಮೇಪುರ- 5000 -465
ದೊಡ್ಡಬೆಟ್ಟಹಳ್ಳಿ – 8,667 -805
ವಡೇರಹಳ್ಳಿ- 833 – 77
ಗುಣಿ ಅಗ್ರಹಾರ- 2,333 – 217
ಶಾಮರಾಜಪುರ- 1833 – 170
ವೀರಸಾಗರ- 733 – 68
ಅಭಿವೃದ್ಧಿ ಶುಲ್ಕಗಳು ಜಾರಿಗೆ ಬರುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
Advertisement