ಶಿವರಾಮ ಕಾರಂತ ಬಡಾವಣೆ: ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಅಕ್ರಮ ಕಟ್ಟಡಗಳು; BDA ಗೆ ತಂದಿದೆ ತಲೆನೋವು..!

15 ದಿನಗಳ ಹಿಂದೆ ಶ್ಯಾಮರಾಜಪುರ ಗ್ರಾಮದಲ್ಲಿ ಎರಡು ಅಂತಸ್ತಿನ ಅರ್ಧ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಆಗಾಗ್ಗೆ ಇಂತಹ ಕಾರ್ಯಾಚರಣೆ ನಡೆಸುತ್ತಲೇ ಇರುತ್ತೇವೆ. ಆದರೂ, ಸ್ವಲ್ಪ ಸಮಯದ ನಂತರ, ಅದೇ ಸ್ಥಳದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ಅಕ್ರಮ ಕಟ್ಟಡ ನೆಲಸಮಗೊಳಿಸುತ್ತಿರುವುದು.
ಅಕ್ರಮ ಕಟ್ಟಡ ನೆಲಸಮಗೊಳಿಸುತ್ತಿರುವುದು.
Updated on

ಬೆಂಗಳೂರು: ದಿನಕಳೆಯುತ್ತಿದಂತೆ ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ಅಕ್ರಮ ಕಟ್ಟಡಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಈ ಕಟ್ಟಡಗಳ ತೆರವುಗೊಳಿಸುವುದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ 3,837 ಎಕರೆ ಪ್ರದೇಶ ಹಾಗೂ ಬಡಾವಣೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ 2,096 ಎಕರೆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡುತ್ತಾರೆ. ಆದರೆ, ಸ್ವಲ್ಪ ಸಮಯದ ನಂತರ ಇದೇ ಸ್ಥಳದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

15 ದಿನಗಳ ಹಿಂದೆ ಶ್ಯಾಮರಾಜಪುರ ಗ್ರಾಮದಲ್ಲಿ ಎರಡು ಅಂತಸ್ತಿನ ಅರ್ಧ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಆಗಾಗ್ಗೆ ಇಂತಹ ಕಾರ್ಯಾಚರಣೆ ನಡೆಸುತ್ತಲೇ ಇರುತ್ತೇವೆ. ಆದರೆ ಸ್ವಲ್ಪ ಸಮಯದ ನಂತರ, ಅದೇ ಸ್ಥಳದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣವಾಗಿರುತ್ತದೆ. ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ ಸ್ಥಳದ ಸದಾಕಾಲ ಕಣ್ಗಾವಲಿಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಚೇರಿಯಲ್ಲಿನ ಕೆಲ ಮಾಹಿತಿಗಳು ಸೋರಿಕೆಯಾಗುತ್ತಿದ್ದು, ಸ್ವಾಧೀನಪಡಿಸಿಕೊಳ್ಳುವ ಭೂಮಿ ಬಗ್ಗೆ ಭೂ ಮಾಲೀಕರಿಗೆ ಮಾಹಿತಿಗಳು ಸಿಗುತ್ತಿವೆ. ಹೀಗಾಗಿ ತರಾತುರಿಯಲ್ಲಿ ನಿರ್ಮಾಣ ಕಾರ್ಯಗಳನ್ನು ನಡೆಸುತ್ತಾರೆ. ಭೂಮಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಅಡ್ಡಿಯುಂಟು ಮಾಡಲು ಈ ರೀತಿ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಅಕ್ರಮ ಕಟ್ಟಡ ನೆಲಸಮಗೊಳಿಸುತ್ತಿರುವುದು.
ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಬೆಂಗಳೂರಿನ ಡಾ. ಕಾರಂತ್ ಲೇಔಟ್‌ ಬಿಡಿಎ ಸೈಟ್‌ಗಳ ಹಂಚಿಕೆ!

ಲೇಔಟ್ ಕುರಿತು ಆಂತರಿಕವಾಗಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿತ್ತು. ಇದನ್ನು ಬಿಡಿಎ ಒಳಗಿನ ಇಲಾಖೆಗಳೊಂದಿಗೆ ಮಾತ್ರ ಹಂಚಿಕೊಳ್ಳಲಾಗಿತ್ತು. ಇಂಜಿನಿಯರ್, ಭೂಸ್ವಾಧೀನ ವಿಭಾಗದ ಸಿಬ್ಬಂದಿ ಮತ್ತು ಜಮೀನುಗಳನ್ನು ಗುರುತಿಸಲು ಗುತ್ತಿಗೆ ಪಡೆದಿರುವ ಹೊರಗುತ್ತಿಗೆ ಏಜೆನ್ಸಿ ಮಾತ್ರ ಸ್ವಾಧೀನಪಡಿಸಿಕೊಳ್ಳಲಿರುವ ಜಮೀನುಗಳ ಸರ್ವೆ ನಂಬರ್‌ಗಳು ತಿಳಿದಿತ್ತು. ಆದರೆ, ಅದು ಹೇಗೋ ಭೂ ಮಾಲೀಕರಿಗೆ ಸೋರಿಕೆಯಾಗಿದೆ. ಹೀಗಾಗಿ ಇದನ್ನು ತಡೆಯಲು ತ್ವರಿತ ನಿರ್ಮಾಣಗಳನ್ನು ಮಾಡುತ್ತಿದ್ದಾರೆ. ತರಾತುರಿಯಲ್ಲಿ ವಿದ್ಯುತ್ ಸಂಪರ್ಕವನ್ನು ಪಡೆಯುತ್ತಿದ್ದಾರೆ. ಬಿಡಿಎಯಲ್ಲಿನ ಕಳಪೆ ಸಿಬ್ಬಂದಿ ಸಾಮರ್ಥ್ಯದಿಂದಾಗಿ ಲೇಔಟ್ ಅನ್ನು 24x7 ನಂತೆ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರಂತ್ ಲೇಔಟ್ ಒಟ್ಟು 34,000 ಪ್ಲಾಟ್‌ಗಳು ಮತ್ತು 4,500 ಕಾರ್ನರ್ ಸೈಟ್‌ಗಳನ್ನು ಒಳಗೊಂಡಿದೆ. 2018ರಲ್ಲಿ ಗಾಣಿಗರಹಳ್ಳಿ, ಕಾಳತಮ್ಮನಹಳ್ಳಿ, ಸೋಮಶೆಟ್ಟಿಹಳ್ಳಿ, ಕೆಂಪಾಪುರ, ಲಕ್ಷ್ಮೀಪುರ, ರಾಮಗೊಂಡನಹಳ್ಳಿ, ಹಾರೋಹಳ್ಳಿ, ಆವಲಹಳ್ಳಿ, ಗುಣಿಅಗ್ರಹಾರ, ಮೆಡಿ ಅಗ್ರಹಾರ, ಶ್ಯಾಮರಾಜಪುರ, ವೀರಸಾಗರ, ಜರಕಬಂಡೆ ಕಾವಲ್, ದೊಡ್ಡಬೆಟ್ಟಹಳ್ಳಿ, ವಡ್ಡರಹಳ್ಳಿ, ಕೆಂಪನಹಳ್ಳಿ, ಬೈಲಕೆರ ಸೇರಿ ಒಟ್ಟು 17 ಗ್ರಾಮಗಳಲ್ಲಿ ಭೂಸ್ವಾಧೀನಪಡಿಸಿಕೊಂಡು ಬಡಾವಣೆ ರಚಿಸಲಾಗಿದೆ.

ಸೆಪ್ಟೆಂಬರ್ 2023 ರಲ್ಲಿ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಯ ಮೇಲ್ವಿಚಾರಣೆಯಲ್ಲಿ ಲೇಔಟ್ ಅನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗಿದ್ದು, ಹೈಕೋರ್ಟ್ ಪೀಠವು ಪ್ರತಿ ವಾರಕ್ಕೊಮ್ಮೆ 200 ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com