ವಕ್ಫ್ ಆಸ್ತಿಯಾಗಿ ಮಠ ಮಂದಿರ, ಕೃಷಿ ಭೂಮಿ, ಸ್ಮಶಾನ ಜಾಗ ಘೋಷಣೆ: ಆತಂಕದಲ್ಲಿ ಗದಗ ರೈತರು!

ನರೇಗಲ್ ಪಟ್ಟಣದ ಮಠದ ಸಭಾಂಗಣ, ನರೇಗಲ್ ಬಳಿ ಸುಮಾರು 50 ಎಕರೆ ಜಮೀನು, ಸ್ಮಶಾನವಾಗಿದ್ದ ಹುಣಸಿಕಟ್ಟಿ ಗ್ರಾಮದ ಕಂದಾಯ ಇಲಾಖೆ ಜಮೀನು ವಕ್ಫ್ ಭೂಮಿಯಾಗಿ ಪರಿವರ್ತನೆಗೊಂಡಿರುವ ವಿಷಯ ಹಲವು ರೈತರಿಂದ ತಿಳಿದು ಬಂದಿದೆ.
Representational image
ಸಾಂದರ್ಭಿಕ ಚಿತ್ರ
Updated on

ಗದಗ: ಗದಗದ 500 ವರ್ಷಗಳ ಇತಿಹಾಸವಿರುವ ಅನ್ನದಾನೇಶ್ವರ ಮಠದ ಭೋಜನಶಾಲೆ (ಪ್ರಸಾದ ನಿಲಯ), ಕೃಷಿಭೂಮಿ ಹಾಗೂ ಸ್ಮಶಾನ ವಕ್ಫ್ ಆಸ್ತಿಯಾಗಿರುವುದು ಬೆಳಕಿಗೆ ಬಂದಿದ್ದು, ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಗ್ರಾಮಸ್ಥರು ಹಾಗೂ ನಿವಾಸಿಗಳು ತಮ್ಮ ಜಮೀನಿನ ದಾಖಲೆ ಪರಿಶೀಲಿಸಲು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡುತ್ತಿದ್ದಾರೆ.

ನರೇಗಲ್ ಪಟ್ಟಣದ ಮಠದ ಸಭಾಂಗಣ, ನರೇಗಲ್ ಬಳಿ ಸುಮಾರು 50 ಎಕರೆ ಜಮೀನು, ಸ್ಮಶಾನವಾಗಿದ್ದ ಹುಣಸಿಕಟ್ಟಿ ಗ್ರಾಮದ ಕಂದಾಯ ಇಲಾಖೆ ಜಮೀನು ವಕ್ಫ್ ಭೂಮಿಯಾಗಿ ಪರಿವರ್ತನೆಗೊಂಡಿರುವ ವಿಷಯ ಹಲವು ರೈತರಿಂದ ತಿಳಿದು ಬಂದಿದೆ. ಚಿಕ್ಕನರಗುಂದ ಮಾಲನ ವಕ್ಫ್ ಆಸ್ತಿ ಎಂದು ಬೋರ್ಡ್ ಹಾಕಿದ ಬಳಿಕ 2019ರಿಂದ ಸ್ಮಶಾನಕ್ಕೆ ಪ್ರವೇಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ 410/B ಆಸ್ತಿಯು ವಕ್ಫ್ ಬೋರ್ಡ್ ಅಡಿಯಲ್ಲಿ ರೆಹಮಾನ್ ಶಾ ವಲಿ ದರ್ಗಾ ಹೆಸರಿನಲ್ಲಿದೆ.

ಈ ಕುರಿತು ಚರ್ಚಿಸಲು ರೋಣ ಶಾಸಕ ಜಿ.ಎಸ್.ಪಾಟೀಲರನ್ನು ಭೇಟಿ ಮಾಡಲು ಭಕ್ತರು ತೆರಳಿದ್ದರು. ವಿವರ ಪಡೆದು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅನೇಕ ರೈತರು ತಮ್ಮ ದಾಖಲೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ ಮತ್ತು ವಕ್ಫ್ ಆಸ್ತಿ ದಾಖಲೆಗಳ ವಿಷಯ ತಮ್ಮ ಜೀವನೋಪಾಯಕ್ಕಾಗಿ ಸಣ್ಣ ಜಮೀನುಗಳನ್ನು ಅವಲಂಬಿಸಿರುವವರಲ್ಲಿ ಭಯದ ಭಾವನೆ ಮೂಡಿಸಿದೆ.

Representational image
ವಕ್ಫ್: ರಾಜ್ಯದ ರೈತರಿಂದ ಅಹವಾಲು ಸ್ವೀಕರಿಸಿದ JPC ಅಧ್ಯಕ್ಷ ಪಾಲ್; MUDA: 50:50 ನಿವೇಶನ ರದ್ದತಿಗೆ ತೀರ್ಮಾನ; ಸಿಎಂ ಆಪ್ತಗೆ ED ಸಮನ್ಸ್!

ಲಕ್ಷ್ಮೇಶ್ವರ ಪಟ್ಟಣದ ದೇಸಾಯಿ ಬನದ ರೈತರು 50 ಎಕರೆ ಭೂ ದಾಖಲೆಯಲ್ಲಿ ವಕ್ಫ್ ಆಸ್ತಿ ಎಂದು ತೋರಿಸಿದ್ದು, ಪಟ್ಟಣದ ಕೆಲವು ಸರ್ವೆ ನಂಬರ್‌ಗಳು ವಕ್ಫ್ ಬೋರ್ಡ್ ವ್ಯಾಪ್ತಿಗೆ ಬರುತ್ತವೆ ಎಂದು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

ಭೂ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿಸಿರುವುದರಿಂದ ಸರ್ಕಾರದ ಯೋಜನೆಗಳಿಂದ ಯಾರೂ ಪ್ರಯೋಜನ ಪಡೆಯುತ್ತಿಲ್ಲ ಅಥವಾ ತಮ್ಮ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಅನ್ನದಾನೇಶ್ವರ ಮಠದ ಮುಪ್ಪಿನ ಬಾವಲಿಂಗ ಸ್ವಾಮಿಗಳು ಮಾತನಾಡಿ, ಮಠಕ್ಕೆ 500 ವರ್ಷಗಳ ಇತಿಹಾಸವಿದೆ ಆದರೆ ಭೋಜನಶಾಲೆಯ ದಾಖಲೆಗಳು ಇಂದು ವಕ್ಫ್ ಭೂಮಿ ಎಂದು ತೋರಿಸುತ್ತಿದೆ. ವಕ್ಫ್ ಭೂಮಿ ಎಂದು ನಾಮಕರಣ ಮಾಡಿರುವುದು ತಿಳಿದು ಭಕ್ತರು ಅಸಮಾಧಾನಗೊಂಡಿದ್ದರು ಎಂದು ಹೇಳಿದ್ದಾರೆ. ಗದಗ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾತನಾಡಿ, ವಕ್ಫ್ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಶೀಘ್ರವೇ ರೈತರಿಗೆ ನೆರವಾಗುತ್ತೇವೆ. ಅವರು ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com