ರುದ್ರೇಶ್ವರ್ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಂದ ಜಾಮೀನು ಅರ್ಜಿ; ತನಿಖಾಧಿಕಾರಿ ಬದಲಾವಣೆ; ಬಂಧಿಸದಂತೆ ಪೊಲೀಸರ ಮೇಲೆ ರಾಜಕೀಯ ಒತ್ತಡ!

ಮೂವರ ವಿರುದ್ಧ ಎಫ್‌ಐಆರ್ ದಾಖಲಾದ ನಂತರವೂ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಾದವಣ್ಣನವರ್ ನೇಣು ಬಿಗಿದುಕೊಂಡ ದಿನ ನಾಗರಾಳ್ ಕಚೇರಿಗೆ ಹಾಜರಾಗಿದ್ದರು ಎನ್ನಲಾಗಿದೆ.
Rudreshwar Yadavannavar
ಮೃತ ರುದ್ರೇಶ್ವರ್
Updated on

ಬೆಳಗಾವಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ತಹಶೀಲ್ದಾರ್ ಬಸವರಾಜ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಹಾಗೂ ಎಫ್ ಡಿಎ ಅಶೋಕ್ ಕಗ್ಗಲಿಗೇರ್ ವಿರುದ್ಧ ಬೆಳಗಾವಿ ಖಡೇಬಜಾರ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಮೂವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರಿಂದ ಬೆಳಗಾವಿ ಪೊಲೀಸರ ಮೇಲೆ ಒತ್ತಡ ಹೆಚ್ಚುತ್ತಿದೆ. ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರುದ್ರಣ್ಣ ನವರ್ ಅವರಿಗೆ ಕಿರುಕುಳ ನೀಡಿದ ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಮುಖಂಡರು ಒತ್ತಡ ಹೇರುತ್ತಿದ್ದರೂ ಕಳೆದ ಕೆಲವು ದಿನಗಳಿಂದ ಬೆಳಗಾವಿ ಪೊಲೀಸರಿಗೆ ಮೂವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಮೂವರ ವಿರುದ್ಧ ಎಫ್‌ಐಆರ್ ದಾಖಲಾದ ನಂತರವೂ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಾದವಣ್ಣನವರ್ ನೇಣು ಬಿಗಿದುಕೊಂಡ ದಿನ ನಾಗರಾಳ್ ಕಚೇರಿಗೆ ಹಾಜರಾಗಿದ್ದರು ಎನ್ನಲಾಗಿದೆ. ಆತ್ಮಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಯಾದವಣ್ಣನವರ್ ಸಾವನ್ನಪ್ಪುವ ಒಂದು ದಿನ ಮೊದಲು ವಾಟ್ಸಾಪ್‌ನಲ್ಲಿ ಸಂಪರ್ಕದಲ್ಲಿದ್ದ ಎಲ್ಲರಿಗೂ ತನಿಖೆಗೆ ಸಹಕರಿಸುವಂತೆ ನೋಟಿಸ್ ನೀಡಲಾಗಿದೆ.

ಆತ್ಮಹತ್ಯೆಗೆ ಕೆಲವು ದಿನಗಳ ಮೊದಲು, ಯಾದವಣ್ಣನವರ್ ಅವರು ತಮ್ಮ ಕೊನೆಯ ವಾಟ್ಸಾಪ್ ಸಂದೇಶದ ಮೂಲಕ, ಮೂವರು ಆರೋಪಿಗಳು ತಮ್ಮ ಸಾವಿಗೆ ಕಾರಣವೆಂದು ಹೆಸರಿಸಿದ್ದರು. ಬೆಳಗಾವಿ ಪ್ರದೇಶದ ಹಲವು ಜಮೀನುಗಳ ಮಾಲೀಕತ್ವದ ಅಕ್ರಮ ವರ್ಗಾವಣೆಗೆ ಸಹಕರಿಸುವಂತೆ ಮೂವರಿಂದ ತೀವ್ರ ಒತ್ತಡ ಹೇರಲಾಗಿತ್ತು ಎಂದು ತಿಳಿದು ಬಂದಿದೆ. ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಕಚೇರಿಯಲ್ಲಿ ಅಕ್ರಮ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಯಾದವಣ್ಣನವರ್ ತನ್ನ ಕೆಲ ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಇವರಿಂದ 2.5 ಲಕ್ಷ ಲಂಚ ಪಡೆದಿದ್ದರೂ ಆದರೆ ತಹಶೀಲ್ದಾರ್ ಅದೇ ಕಚೇರಿಯಲ್ಲಿ ಬೇರೆ ಕೆಲಸ ನೀಡಿರಲಿಲ್ಲ. ಯಾದವಣ್ಣನವರ್ ಆತ್ಮಹತ್ಯೆ ಮಾಡಿಕೊಂಡ ದಿನದಂದು ಅಪರಾಧ ನಡೆದ ಸ್ಥಳದ ಸುತ್ತಮುತ್ತಲಿನ ಜನರ ಚಲನವಲನಗಳನ್ನು ಪರಿಶೀಲಿಸಲು ಪೊಲೀಸರು ತಹಶೀಲ್ದಾರ್ ಕಚೇರಿ ಒಳಗೆ ಮತ್ತು ಹೊರಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ತನಿಖಾಧಿಕಾರಿಯನ್ನು ಏಕಾಏಕಿ ಬದಲಾಯಿಸಿದೆ ಎಂದು ಬೆಳಗಾವಿಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಸಿಪಿಐ ಬದಲಿಗೆ ಎಸಿಪಿ ಶೇಖರಪ್ಪ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ಇಲಾಖೆ ನೇಮಕ ಮಾಡಿದೆ.

Rudreshwar Yadavannavar
ಬೆಳಗಾವಿ ಎಸ್‌ಡಿಎ ಆತ್ಮಹತ್ಯೆ ಕೇಸ್ ಸುತ್ತ ಲಂಚಾವತಾರದ ಹುತ್ತ: ವರ್ಗಾವಣೆ ತಡೆಗೆ ಹಣ ನೀಡುವಂತೆ ಹೆಬ್ಬಾಳ್ಕರ್ PA ಒತ್ತಡ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com