ಎಸ್ ಡಿಸಿ ಆತ್ಮಹತ್ಯೆ ಪ್ರಕರಣ: ಸಿಬ್ಬಂದಿಗೆ ತಹಶೀಲ್ದಾರ್ ಕಿರುಕುಳ ನೀಡುತ್ತಿದ್ದರು; ನೌಕರರ ಆರೋಪ

ಶುಕ್ರವಾರ ಕನಿಷ್ಠ ಐವರು ಮತ್ತು ಶನಿವಾರ 25 ಮಂದಿಯನ್ನು ವಿಚಾರಣೆಗೊಳಪಡಿಸಿದರು. ಈ ವೇಳೆ ಸಿಬ್ಬಂದಿಗೆ ನಾಗರಾಳ ಕೊಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
Rudreshwar Yadavannavar
ಮೃತ ರುದ್ರೇಶ್ವರ್
Updated on

ಬೆಳಗಾವಿ: ಇತ್ತೀಚೆಗೆ ತಹಶೀಲ್ದಾರ್ ಬಸವರಾಜ ನಾಗರಾಳ್ ಅವರ ಅಧಿಕೃತ ಕೊಠಡಿಯಲ್ಲಿ ಎಸ್‌ಡಿಸಿ ರುದ್ರೇಶ್ ಯಾದವಣ್ಣನವರ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುವ ಹಲವಾರು ನೌಕರರು ಪೊಲೀಸರ ವಿಚಾರಣೆ ವೇಳೆ ತಹಶೀಲ್ದಾರ್ ಕಿರುಕುಳ ನೀಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ.

ಯಾದವಣ್ಣನವರ್ ಅವರು ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿಎ, ಸೋಮು ಮತ್ತು ಕಚೇರಿಯಲ್ಲಿರುವ ಎಫ್‌ಡಿಸಿ ಅಶೋಕ್ ಕಬ್ಬಲಿಗೇರ್ ಅವರ ಸಾವಿಗೆ ನೇರ ಹೊಣೆ ಎಂದು ಹೆಸರಿಸಿರುವುದನ್ನು ಇಲ್ಲಿ ಗಮನಿಸಬಹುದು. ಆತ್ಮಹತ್ಯೆಗೆ ಕೆಲ ದಿನಗಳ ಹಿಂದೆ ತಹಶೀಲ್ದಾರ್ ನಾಗರಾಳ ಮತ್ತು ಸೋಮು ಅದೇ ಕಚೇರಿಯಲ್ಲಿ ಒಳ್ಳೆಯ ಪೋಸ್ಟಿಂಗ್ ಕೊಡಿಸುವುದಾಗಿ 2.5 ಲಕ್ಷ ಲಂಚ ವಸೂಲಿ ಮಾಡಿರುವುದಾಗಿ ರುದ್ರೇಶ್ವರ್ ಹಲವು ಸ್ನೇಹಿತರು ಹಾಗೂ ಮಾಧ್ಯಮದವರಿಗೆ ತಿಳಿಸಿದ್ದರು.

ಶುಕ್ರವಾರ ಮತ್ತು ಶನಿವಾರ ಬೆಳಗಾವಿಯ ಖಡೇಬಜಾರ್ ಪೊಲೀಸರು ತಹಶೀಲ್ದಾರ್ ಕಚೇರಿಯ ಹಲವು ನೌಕರರನ್ನು ವಿಚಾರಣೆ ನಡೆಸಿದರು. ಶುಕ್ರವಾರ ಕನಿಷ್ಠ ಐವರು ಮತ್ತು ಶನಿವಾರ 25 ಮಂದಿಯನ್ನು ವಿಚಾರಣೆಗೊಳಪಡಿಸಿದರು. ಈ ವೇಳೆ ಸಿಬ್ಬಂದಿಗೆ ನಾಗರಾಳ ಕೊಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. 'ತಹಶೀಲ್ದಾರ್ ಆಫೀಸ್ ಆಲ್ ಸ್ಟಾಫ್ ಗ್ರೂಪ್' ಎಂಬ ಕಚೇರಿಯ ವಾಟ್ಸಾಪ್ ಗುಂಪಿನ ಎಲ್ಲಾ ಸದಸ್ಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ತಹಶೀಲ್ದಾರ್ ಸೇರಿದಂತೆ ಮೂವರು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯವು ನವೆಂಬರ್ 12 ರಂದು ವಿಚಾರಣೆಗೆ ನಡೆಸಲಿದೆ.

ತಹಶೀಲ್ದಾರ್ ಕಚೇರಿಗೆ ಹೋಗುವ ಗಂಟೆಗಳ ಮೊದಲು ಯಾದವಣ್ಣನವರ್ ಸೋಮವಾರ ಸಂಜೆ 7.30 ಕ್ಕೆ ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ ತಮ್ಮ ಕೊನೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ ಗ್ರೂಪ್‌ನಿಂದ ಪರಸ್ಪರ ವಿನಿಮಯವಾದ ಕೆಲವು ಚಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Rudreshwar Yadavannavar
ರುದ್ರೇಶ್ವರ್ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಂದ ಜಾಮೀನು ಅರ್ಜಿ; ತನಿಖಾಧಿಕಾರಿ ಬದಲಾವಣೆ; ಬಂಧಿಸದಂತೆ ಪೊಲೀಸರ ಮೇಲೆ ರಾಜಕೀಯ ಒತ್ತಡ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com