ಬೆಳಗಾವಿ: ಖಾನಾಪುರ ತಾಲ್ಲೂಕಿನ ಐತಿಹಾಸಿಕ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನಲ್ಲಿ ಗುಂಡೇಟಿಗೆ ಯುವಕನೊಬ್ಬ ಬಲಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಯುವಕನ ಸಾವಿಗೆ ನವಿಲು ಬೇಟೆಗೂ ನಂಟು ಇದೆಯೇ ಅಥವಾ ಯುವಕರ ಗುಂಪೊಂದು ಹತ್ಯೆ ನಡೆಸಿದೆಯೇ? ಎಂಬುದು ಪೊಲೀಸರನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸೋಮವಾರ ಮುಂಜಾನೆ ಖಾನಾಪುರ ತಾಲೂಕಿನ ಹಲಸಿ ಎಂಬಲ್ಲಿ 31 ವರ್ಷದ ಅಲ್ತಾಫ್ ಹುಸೇನ್ ಮೃತಪಟ್ಟಿದ್ದಾರೆ.
ಘಟನೆಗೆ ಕಾರಣವೇನು ಎಂಬು ಎಂಬುದನ್ನುಕಂಡು ಹಿಡಿಯಲು ನಂದಗಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗೆ ಹಲಶಿ ನಿವಾಸಿ ಅಲ್ತಾಫ್ ಹುಸೇನ್ ಎಂಬ ವ್ಯಕ್ತಿಯ ಶವವನ್ನು ಯುವಕರ ಗುಂಪೊಂದು ಅವರ ಮನೆಗೆ ತಂದಿತು. ತಮ್ಮ ಪುತ್ರನಿಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ತಂದೆ ಮಹಮದಗೌಸ್ ಮಕಾಂದರ್ ಆರೋಪಿಸಿದ್ದಾರೆ. ಮಹಮದ್ ಗೌಸ್ ಮಕಂದಾರ್ ನೀಡಿದ ದೂರಿನ ಮೇಲೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರು ನೀಡಿದ ಕೂಡಲೇ ಅಪರಾಧ ನಡೆದ ಸ್ಥಳಕ್ಕೆಬೈಲಹೊಂಗಲ ಡಿವೈಎಸ್ಪಿ ರವಿನಾಯಕ್, ನಂದಗಡ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸ್ ಸಿ ಪಾಟೀಲ್ ಹಾಗೂ ಖಾನಾಪುರ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ ನಾಯ್ಕ್ ಪರಿಶೀಲನೆ ನಡೆಸಿದರು.
ಪ್ರಾಥಮಿಕ ವರದಿಯ ಪ್ರಕಾರ ಆರೋಪಿಗಳು ಮತ್ತು ಮೃತ ವ್ಯಕ್ತಿಗಳು ಬೇಟೆಗೆ ಹೋದ ಸಂದರ್ಭದಲ್ಲಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಭಾನುವಾರ ರಾತ್ರಿ ಯುವಕರ ತಂಡವೊಂದು ಈ ಪ್ರದೇಶದಲ್ಲಿ ಬೇಟೆಯಾಡಲು ತೆರಳಿದ್ದು, ಈ ವೇಳೆ ಸಾವನ್ನಪ್ಪಿರುವ ಘಟನೆ ನಡೆದಿದೆ ಎನ್ನಲಾಗಿದೆ. ಮಹಮದಗೌಸ್ ಮಕಾಂದರ್ ಅವರು ತಮ್ಮ ಮಗನ ಸಾವು ಯೋಜಿತ ಕೊಲೆಯೇ ಹೊರತು ಆಕಸ್ಮಿಕವಲ್ಲ ಎಂದು ಶಂಕಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಅವರ ಮಾರ್ಗದರ್ಶನದಲ್ಲಿ ನಂದಗಡ ಪೊಲೀಸರು ಯುವಕನ ಸಾವಿನ ಹಿಂದಿನ ಸತ್ಯಾಸತ್ಯತೆ ಕಂಡು ಹಿಡಿಯಲು ತನಿಖೆ ಆರಂಭಿಸಿದ್ದಾರೆ.
Advertisement