ಕಾನೂನು ಸುವ್ಯವಸ್ಥೆ ಸುಧಾರಿಸಲು ಗೃಹ ಇಲಾಖೆ ಸಜ್ಜು: ರಾಜ್ಯ ಪೊಲೀಸರ ಬತ್ತಳಿಕೆಗೆ 100 ಡ್ರೋನ್‌ ಸೇರ್ಪಡೆ!

ಪೋಲೀಸ್ ಇಲಾಖೆಯು ತನ್ನ ಆಧುನೀಕರಣ ಯೋಜನೆಯ ಭಾಗವಾಗಿ 80-100 ದೇಶೀಯ ಡ್ರೋನ್‌ಗಳಿಗೆ ಅಂದಾಜು 4 ಕೋಟಿ ವೆಚ್ಚದಲ್ಲಿ ಟೆಂಡರ್‌ಗಳನ್ನು ಆಹ್ವಾನಿಸುವ ಪ್ರಕ್ರಿಯೆಯಲ್ಲಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಾರ್ವಜನಿಕ ಸುರಕ್ಷತೆ ಮತ್ತು ಸೇವಾ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ನೆರವು ನೀಡಲು ಕರ್ನಾಟಕ ಪೊಲೀಸರಿಗೆ ಮೊದಲ ಬಾರಿಗೆ ಡ್ರೋನ್‌ಗಳನ್ನು ನೀಡಲು ಇಲಾಖೆ ಮುಂದಾಗಿದೆ.

"ಪೋಲೀಸ್ ಇಲಾಖೆಯು ತನ್ನ ಆಧುನೀಕರಣ ಯೋಜನೆಯ ಭಾಗವಾಗಿ 80-100 ದೇಶೀಯ ಡ್ರೋನ್‌ಗಳಿಗೆ ಅಂದಾಜು 4 ಕೋಟಿ ವೆಚ್ಚದಲ್ಲಿ ಟೆಂಡರ್‌ಗಳನ್ನು ಆಹ್ವಾನಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೆಚ್ಚುವರಿ ಪೊಲೀಸ್ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ (CLM) ) ವಿಭಾಗದ ಮಹಾನಿರ್ದೇಶಕ ಎಸ್ ಮುರುಗನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಸಾರ್ವಜನಿಕ ಸುರಕ್ಷತೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು, ಭದ್ರತೆ, ಅಕ್ರಮ, ರಾಷ್ಟ್ರವಿರೋಧಿ ಚಟುವಟಿಕೆಗಳ ಮೇಲೆ ಕಣ್ಗಾವಲು, ಚಲನವಲನಗಳು, ನಿಷೇಧಿತ ಬೆಳೆಗಳ ಮೇಲೆ ಕಣ್ಗಾವಲು ಮುಂತಾದ ವಿವಿಧ ಕಾರ್ಯಗಳಲ್ಲಿ ಪೊಲೀಸರು ಬಳಸಿಕೊಳ್ಳಬಹುದಾದ ಡ್ರೋನ್‌ಗಳ ವಿಶಿಷ್ಟತೆಗಳನ್ನು ಪರಿಶೀಲಿಸಲು ಡ್ರೋನ್ ಸಹಾಯ ಮಾಡಲಿದೆ. ಬಿಕ್ಕಟ್ಟು ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆ, ಜನಸಂದಣಿ ನಿಯಂತ್ರಣ, ವಿಐಪಿ ಚಲನೆ, ವಿಷ-ವಿರೋಧಿ ಸೇರಿದಂತೆ ಔಷಧಿಗಳ ಸಮಯೋಚಿತ ವಿತರಣೆ, ಅಪಘಾತದ ಸ್ಥಳಗಳಿಗೆ ತ್ವರಿತ ಪ್ರವೇಶ ಮತ್ತು ಕಷ್ಟಕರವಾದ ಭೂಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಗಳು ಇತ್ಯಾದಿ ಗಳಲ್ಲಿ ಡ್ರೋಣ್ ಬಳಕೆ ಮಾಡಲಾಗುವುದು. ಕಾನೂನು ಜಾರಿ ಕಾರ್ಯಾಚರಣೆಗಳಲ್ಲಿ ಡ್ರೋನ್‌ಗಳ ಬಳಕೆ ಹೊಸದೇನಲ್ಲ, ಆದರೆ ದಕ್ಷ ಪೋಲೀಸಿಂಗ್ ಮತ್ತು ಸೇವಾ ವಿತರಣೆಗಾಗಿ ರಾಜ್ಯ ಪೊಲೀಸರು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.

Representational image
3,800 ಹುದ್ದೆ ಖಾಲಿಯಿದ್ದರೂ ನೇಮಕ ಮಾಡದ ಸರ್ಕಾರ: ಪೊಲೀಸ್ ಇಲಾಖೆ ಬಲಪಡಿಸುವಲ್ಲಿ ವಿಫಲ!

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಕರ್ನಾಟಕ ಪೊಲೀಸ್‌ನ ವಿಶೇಷ ವಿಭಾಗವಾದ ಆಂತರಿಕ ಭದ್ರತಾ ವಿಭಾಗದ (ISD) ಭಯೋತ್ಪಾದನೆ ನಿಗ್ರಹ ಕೇಂದ್ರಕ್ಕೆ (CCT) ಡ್ರೋನ್‌ಗಳನ್ನು ಬಳಸಲು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು ಅಧಿಕಾರ ನೀಡಿದೆ. ಡ್ರೋನ್‌ಗಳು ಫೋರ್ಸ್ ಮಲ್ಟಿಪ್ಲೈಯರ್‌ಗಳಾಗಿವೆ ಮತ್ತು ಪ್ರಪಂಚದಾದ್ಯಂತ ಕಾನೂನು ಕಾರ್ಯಾಚರಣೆಗಳಿಗೆ ಸಹಾಯ ಮಾಡತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com