
ಬೆಂಗಳೂರು: ನಗರದಲ್ಲಿ ಜನಸಂಖ್ಯೆ ಹೆಚ್ಚಳ, ಸಂಚಾರ ದಟ್ಟಣೆ ಹಾಗೂ ಅಪರಾಧ ಹೆಚ್ಚಾಗುತ್ತಿದ್ದರೂ, ಅಗತ್ಯ ಪೊಲೀಸ್ ಸಿಬ್ಬಂದಿಗಳ ನೇಮಿಸಲುವಲ್ಲಿ ಸರ್ಕಾರ ವಿಫಲವಾಗಿದೆ.
ರಾಜ್ಯದಲ್ಲಿ 1,825 ಪೊಲೀಸ್ ಕಾನ್ಸ್‌ಟೇಬಲ್‌ಗಳು (ಪಿಸಿಗಳು), 347 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು (ಪಿಎಸ್‌ಐಗಳು) ಸೇರಿದಂತೆ ಒಟ್ಟಾರೆ 3,814 ಹುದ್ದೆಗಳು ಖಾಲಿ ಇದ್ದು, ವೆಚ್ಚಗಳಿಗೆ ಕಳವಳ ವ್ಯಕ್ತಪಡಿಸುತ್ತಿರುವ ಸರ್ಕಾರ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮುಂದಾಗುತ್ತಿಲ್ಲ.
ಇದರಿಂದಾಗಿ ನಗರದಲ್ಲಿ ಪ್ರಸ್ತುತ 1.4 ಮಿಲಿಯನ್ ಜನಸಂಖ್ಯೆಗೆ ಇರಬೇಕಾದ ಪೊಲೀಸ್ ಬಲ ಕೂಡ ಇಲ್ಲದಂತಾಗಿದೆ. ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (BPR&D) ಪ್ರಕಾರ, ಪ್ರತಿ 1 ಲಕ್ಷ ಜನಸಂಖ್ಯೆಗೆ 170 ಸಿವಿಲ್ ಪೋಲೀಸರ ಅಗತ್ಯವಿದೆ, ನಗರವನ್ನು ಬಲಪಡಿಸಲು 21,720 ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಆದರೆ ರಾಜ್ಯದ ರಾಜಧಾನಿಯಲ್ಲಿ ಪ್ರಸ್ತುತ 15,475 ಪೊಲೀಸರು, ಡಿಸಿಪಿಗಳು,ಸ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಮತ್ತು ವಿಶೇಷ ಪಡೆಗಳ ಎಸಿಪಿಗಳು ಮಾತ್ರ ಇದ್ದಾರೆ, ಇದು ಗಣನೀಯ ಅಂತರವನ್ನು ಬಹಿರಂಗಪಡಿಸಿದೆ.
ನಿವೃತ್ತ ಡಿಜಿ ಮತ್ತು ಐಜಿಪಿ ರಮೇಶ್ ಎಸ್‌ಟಿ ಅವರು ಮಾತನಾಡಿ, ಪೊಲೀಸ್ ಪಡೆ ಮಾನವ ಸಂಪನ್ಮೂಲ-ಸಂಪರ್ಕ ಸಂಸ್ಥೆಯಾಗಿದೆ. ತಂತ್ರಜ್ಞಾನವನ್ನು ನವೀಕರಿಸಿದಾಗ ಕೆಲಸವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದರಿಂದ ದಕ್ಷತೆಯು ಸುಧಾರಿಸುತ್ತದೆ, ಆದರೆ, ಇದಕ್ಕೆ ಸಿಬ್ಬಂದಿಗಳ ಸಂಖ್ಯೆಗಳು ಅವಶ್ಯಕವಾಗಿರುತ್ತದೆ. ಉದಾಹರಣೆಗೆ, ಹೊಯ್ಸಳ ಮತ್ತು ಚೀತಾಗಳಂತಹ ಗಸ್ತು ವಾಹನಗಳು ಹೆಚ್ಚಳ ಮಾಡಿದಾಗ ಅವುಗಳನ್ನು ನಿರ್ವಹಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯ ಅವಶ್ಯಕವಿರುತ್ತದೆ ಎಂದು ಹೇಳಿದ್ದಾರೆ.
ಸಿವಿಲ್ ಕಾನ್‌ಸ್ಟೆಬಲ್‌ಗಳು, ಆರ್ಮ್ಡ್ ರಿಸರ್ವ್ ಮುಂತಾದ ಪೊಲೀಸ್ ಪಡೆಗಳಲ್ಲಿ ಹಲವಾರು ಸಿಬ್ಬಂದಿಗಳಿರುವುದರಿಂದ ನೇಮಕಾತಿ ನಿರಂತರ ಪ್ರಕ್ರಿಯಾಗಿರಬೇಕು. ನೇಮಕಾತಿ ವಿಭಾಗವನ್ನು ಹಿರಿಯ ಮತ್ತು ಮಧ್ಯಮ ಮಟ್ಟದ ಅಧಿಕಾರಿಗಳೊಂದಿಗೆ ಬಲಪಡಿಸಬೇಕು. ನಿವೃತ್ತಿ, ಮರಣ, ಬಡ್ತಿ ಇತ್ಯಾದಿಗಳಿಂದಾಗಿ ಕೆಲವು ಹುದ್ದೆಗಳು ತಿಂಗಳಿಗೊಮ್ಮೆ ಖಾಲಿಯಾಗುತ್ತವೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
ಜನಸಂಖ್ಯೆ ಹೆಚ್ಚಾಗುತ್ತಿದ್ದು, ಅಪರಾಧ ಸಂಖಅಯೆ ಕೂಡ ಹೆಚ್ಚಾಗುತ್ತಿದೆ. ವಿದ್ಯಾರ್ಥಿ ಚಟುವಟಿಕೆಗಳು, ಸಂಚಾರ ದಟ್ಟಣೆ ಕೂಡ ಪ್ರತೀನ್ತಯ ಹೆಚ್ಚಾಗುತ್ತಿದೆ. ಪೊಲೀಸರು ಈಗಾಗಲ ತಮ್ಮ ಬಲ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಯೇ ಇರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ನಗರದ ಬೆಳವಣಿಗೆ ಮತ್ತು ಪೊಲೀಸ್ ಪಡೆಯ ಬೆಳವಣಿಗೆಯಲ್ಲಿ ಹೊಂದಾಣಿಕೆಯಿಲ್ಲದಂತಾಗಿದೆ. ಬಜೆಟ್ ನಿರ್ಬಂಧಗಳಿಂದಾಗಿ ಪೊಲೀಸ್ ಬಲವನ್ನು ಹೆಚ್ಚಿಸುವಲ್ಲಿ ಸರ್ಕಾರ ತಡ ಮಾಡುತ್ತಿದೆ ಎಂದು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಪೊಲೀಸ್ ಪೇದೆಗಳು 'ಪೊಲೀಸ್ ಇಲಾಖೆಯ ನಿಜವಾದ ಬಲವಾಗಿರುತ್ತಾದೆ. ನ್ಯಾಯಾಲಯದ ಕೆಲಸ, ಅಪರಾಧ ಪತ್ತೆ, ರಾತ್ರಿ ಬೀಟ್ ಮುಂತಾದ ಎಲ್ಲಾ ಪ್ರಮುಖ ಮತ್ತು ಸಣ್ಣ ಕೆಲಸಗಳನ್ನು ಅವರು ನಿಭಾಯಿಸುತ್ತಾರೆ. ಆಡಳಿತದಲ್ಲಿ ಪರಿಣಾಮಕಾರಿಯಾಗಿ ಕೆಲಸದ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಸುಧಾರಿಸುತ್ತಾರೆ, ಪರಿಹರಿಸುತ್ತಾರೆ. ಬಾಕಿಯಿರುವ ಪ್ರಕರಣಗಳು, ದೀರ್ಘ ಮತ್ತು ಪತ್ತೆಯಾಗದ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತರುತ್ತಾರೆ. ಸಿಬ್ಬಂದಿಯನ್ನು ಹೆಚ್ಚಿಸುವುದು ಮತ್ತು ನೇಮಕ ಮಾಡುವುದರಿಂದ ಕೆಲಸದ ಹೊರೆ ಕಡಿಮೆಯಾಗುತ್ತದೆ. ಪೊಲೀಸರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
Advertisement