Siddaramaiah ಬೆನ್ನಿಗೆ ನಿಂತಿದ್ದ JDS ಶಾಸಕ GT ದೇವೇಗೌಡಗೂ MUDA ಉರುಳು; ಸಂಬಂಧಿಕರಿಗೆ 19 ಸೈಟ್ ಹಂಚಿಕೆ!

ಈ ಹಿಂದೆ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಏಕೆ ರಾಜಿನಾಮೆ ನೀಡಬೇಕು? ಎಂದು ಪ್ರಶ್ನಿಸಿ ಅವರ ಬೆನ್ನಿಗೆ ನಿಂತಿದ್ದ ಜಿಟಿ ದೇವೇಗೌಡಗೂ ಮುಡಾ ಸಂಕಷ್ಟ ಆರಂಭವಾಗಿದೆ..
GT DeveGowda-Siddaramaiah
ಜಿಟಿ ದೇವೇಗೌಡ ಮತ್ತು ಸಿದ್ದರಾಮಯ್ಯ
Updated on

ಮೈಸೂರು: ಸಿಎಂ ಸಿದ್ದರಾಮಯ್ಯರನ್ನು ಇನ್ನಿಲ್ಲದಂತೆ ಕಾಡುತ್ತಿರುವ MUDA scam ಉರುಳು ಇದೀಗ ಅವರನ್ನು ಹೊಗಳಿದ್ದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರನ್ನೂ ಸುತ್ತಿಕೊಳ್ಳಲಾರಂಭಿಸಿದ್ದು, ನಕಲಿ ದಾಖಲೆ ಸೃಷ್ಟಿಸಿ ತಮ್ಮ ಸಂಬಂಧಿಕರಿಗೆ ಬರೊಬ್ಬರಿ 19 ಸೈಟ್‌ ಹಂಚಿಕೆ ಮಾಡಿಸಿದ ಆರೋಪ ಕೇಳಿಬಂದಿದೆ.

ಹೌದು.. ಈ ಹಿಂದೆ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಏಕೆ ರಾಜಿನಾಮೆ ನೀಡಬೇಕು ಎಂದು ಪ್ರಶ್ನಿಸಿ ಅವರ ಬೆನ್ನಿಗೆ ನಿಂತಿದ್ದ ಜಿಟಿ ದೇವೇಗೌಡಗೂ ಮುಡಾ ಸಂಕಷ್ಟ ಆರಂಭವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ ಅವರ ಸಂಬಂಧಿಯೂ ಮುಡಾದಿಂದ 19 ಸೈಟ್‌ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.

ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಜಿಟಿ ದೇವೇಗೌಡ (GT Devegowda) ಅವರ ಸಹೋದರಿಯ ಮಗ ಮಹೇಂದ್ರ (Mahendra) 19 ಸೈಟ್‌ ಪಡೆದಿದ್ದಾರೆ. ಅಲ್ಲದೆ ಈ ಪ್ರಕ್ರಿಯೆಯಲ್ಲಿ ಜಿಟಿ ದೇವೇಗೌಡ ತಮ್ಮ ವರ್ಚಸ್ಸು-ಪ್ರಭಾವ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

GT DeveGowda-Siddaramaiah
MUDA Scam: ಸುಳ್ಳು ಮಾಹಿತಿ ಆರೋಪ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧವೇ FIR!

ಏನಿದು ಆರೋಪ?

ಮಹೇಂದ್ರ ಎಂಬುವವರಿಗೆ ಸೇರಿದ ದೇವನೂರು ಗ್ರಾಮದ 2.22 ಎಕರೆ ಭೂಮಿಯನ್ನು ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿದೆ. ಆದರೆ ಯಾವಾಗ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಿದ್ದೇವೆ ಎನ್ನುವ ಮಾಹಿತಿ ಮಾತ್ರ ಇಲ್ಲ. ಅಷ್ಟೇ ಅಲ್ಲದೇ ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3ನೇ ಹಂತದಲ್ಲಿ ನಿವೇಶನ ನೀಡಲಾಗಿದೆ.

ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಚೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಾಗಿದೆ. ಈ ಜಾಗ ನೀಡಿದ್ದಕ್ಕೆ ಕೇವಲ 2 ಸೈಟ್‌ಗಳನ್ನು ಮಾತ್ರ ನೀಡಬೇಕಿತ್ತು. 40*60 ಮತ್ತು 40*30 ರ 3600 ಚದರ ಅಡಿ ಮಾತ್ರ ಪರಿಹಾರ ಸಿಗಬೇಕಾಗಿತ್ತು. ಆದರೆ ನಗರದ ಪ್ರೈಮ್ ಜಾಗವಾದ ವಿಜಯನಗರದಲ್ಲಿ 19 ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಪರಿಹಾರ ನೀಡಿದೆ.

GT DeveGowda-Siddaramaiah
ಮುಡಾ ಹಗರಣ​: ನಟೇಶ್​ ವಿರುದ್ಧ ಪ್ರಾಸಿಕ್ಯೂಷನ್​ಗೆ ಸರ್ಕಾರ ಅನುಮತಿ; ಲೋಕಾಯುಕ್ತ ನೋಟಿಸ್

ಅಂತೆಯೇ ಈ ಭೂಮಿಯನ್ನ ಮುಡಾ ಯಾವಾಗ ವಶಪಡಿಸಿಕೊಂಡಿದೆ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಈ ಜಾಗದ ಮೂಲ ಮಾಲೀಕರು ಮಹೇಂದ್ರ ಅಲ್ಲ. ನಕಲಿ ದಾಖಲೆಗಳು ಸೃಷ್ಟಿ ಮಾಡಿಕೊಂಡು ಅಕ್ರಮವಾಗಿ ಪರಿಹಾರದ ಮೂಲಕ ನಿವೇಶನ ಪಡೆಯಲಾಗಿದೆ.

ಮೂಲತಃ ಮಹೇಂದ್ರ ಎನ್ನುವ ವ್ಯಕ್ತಿಗೆ ದೇವನೂರು ಬಡಾವಣೆ ಜಾಗದಲ್ಲಿ ಜಮೀನು ಇಲ್ಲ. ಇದರ ಜೊತೆ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 19 ಸೈಟ್‌ ಹಂಚಿಕೆ ಮಾಡಿದ್ದಕ್ಕೆ ಮಾನದಂಡ ಏನು ಎಂದು ಸ್ನೇಹಮಯಿ ಕೃಷ್ಣ ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com