Representational image
ಸಾಂದರ್ಭಿಕ ಚಿತ್ರ

Scamsters ಹೊಸತಂತ್ರ invite scam: ಲಿಂಕ್ ತೆರೆದು ಬಲಿಯಾದೀರಿ ಜೋಕೆ!

ನಾಗರಿಕರನ್ನು ವಂಚಿಸಲು ಹೊಸ ರೀತಿಯ ತಂತ್ರ ಬಳಕೆ ಮಾಡಿಕೊಂಡಿರುವುದು ತಜ್ಞರು ಮತ್ತು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಇದು ಆಹ್ವಾನ ಪತ್ರಿಕೆಯ ಹಗರಣವಾಗಿದೆ.
Published on

ಬೆಂಗಳೂರು: ಇತ್ತೀಚೆಗೆ ಸೈಬರ್‌ ಕ್ರೈಮ್‌ ಹಗರಣಗಳು ಸರ್ವೇಸಾಮಾನ್ಯ ಆಗಿಬಿಟ್ಟಿವೆ. ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ಹೋದಂತೆ ವಂಚಕರುಗಳ ಸಂಖ್ಯೆ ಕೂಡಾ ಜಾಸ್ತಿಯಾಗುತ್ತಾ ಇದೆ. ನಾಗರಿಕರನ್ನು ವಂಚಿಸಲು ಹೊಸ ರೀತಿಯ ತಂತ್ರ ಬಳಕೆ ಮಾಡಿಕೊಳ್ಳುತ್ತಿರುವುದು ತಜ್ಞರು ಮತ್ತು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಇದು ಆಹ್ವಾನ ಪತ್ರಿಕೆಯ ಹಗರಣವಾಗಿದೆ. ಈ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚುತ್ತಿವೆ. ಇದು ಕೇವಲ ಮದುವೆಯ ಆಮಂತ್ರಣಗಳಿಗೆ ಸೀಮಿತವಾಗಿಲ್ಲ, ಇತರ ಕಾರ್ಯಕ್ರಮಗಳು, ಕಾರ್ಯಗಳು ಮತ್ತು ಚಾರಿಟಿ ಶೋಗಳಿಗೆ ಆಹ್ವಾನಗಳನ್ನು ಸಹ ಕಳುಹಿಸಲಾಗುತ್ತದೆ.

ಇನ್ವಿಟೇಷನ್ ಒಪನ್ ಮಾಡಿದ ನಂತರ ಆ್ಯಪ್‌ಗಳಿಗೆ ಪ್ರವೇಶ ಸಿಗುತ್ತದೆ. ನಂತರ ಮಾಲ್‌ವೇರ್ ಮಾಹಿತಿಯನ್ನು ಕದಿಯಲು ಪ್ರಾರಂಭಿಸುತ್ತದೆ ಎಂದು ರಾಷ್ಟ್ರೀಯ ಸೈಬರ್ ಭದ್ರತಾ ವಿದ್ವಾಂಸ ಮತ್ತು ಸೈಬರ್ ಕ್ರೈಮ್ ಹಸ್ತಕ್ಷೇಪ ಅಧಿಕಾರಿ ಚೇತನ್ ಆನಂದ್ ಹೇಳಿದ್ದಾರೆ. ಮೇಲ್ನೋಟಕ್ಕೆ ಎಲ್ಲರೂ ಕಳುಹಿಸುವ ಆಮಂತ್ರಣ ಪತ್ರಿಕೆಯಂತೆ ಇರುತ್ತದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವರ ಹಾಗೂ ವಧುವಿನ ಹೆಸರು, ಮದುವೆ ದಿನಾಂಕ, ಮುಹೂರ್ತ, ಸ್ಥಳ ಸೇರಿದಂತೆ ಎಲ್ಲಾ ಮಾಹಿತಿಯೂ ಇರಲಿದೆ. ಆದರೆ ಈ ಮಾಹಿತಿ, ಈ ಮದುವೆ ನಕಲಿ. ಈ ಡೌನ್ಲೋಡ್ ಫೈಲ್ ಕಳುಹಿಸುವ ಜೊತೆಗೆ ಟೆಕ್ಸ್ಟ್ ಮೆಸೇಜ್ ಕೂಡ ಕಳುಹಿಸುತ್ತಾರೆ. ಜನರು ಇಂತಹ invitation ತೆರೆದ ನಂತರ ಸಮಸ್ಯೆಗಳ ಬಗ್ಗೆ ನಿಧಾನವಾಗಿ ದೂರು ನೀಡಲು ಪ್ರಾರಂಭಿಸುತ್ತಾರೆ, ವೈರಸ್‌ಗಳಿಂದ ಪ್ರಭಾವಿತರಾಗುತ್ತಾರೆ ಅಥವಾ ಡೇಟಾ ಅಳಿಸುವಿಕೆಯ ಬಗ್ಗೆ ದೂರು ನೀಡುತ್ತಾರೆ. ಹೊಸ ಹಗರಣದ ವಿರುದ್ಧ ಸೈಬರ್ ಕ್ರೈಂ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಮೊಬೈಲ್ ಫೋನ್‌ಗಳಲ್ಲಿ ಅಂತರ್ಗತವಾಗಿರುವ ಆಂಟಿವೈರಸ್ ಗೆ ಇದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಆನಂದ್ ಹೇಳಿದರು. ಆಮಂತ್ರಣಗಳನ್ನು APK ಫೈಲ್‌ಗಳ ರೂಪದಲ್ಲಿ ಕಳುಹಿಸಲಾಗುತ್ತದೆ. ಅವುಗಳನ್ನು ತೆರೆದ ನಂತರ, ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ. ಜನರು ತಮ್ಮ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲಿಸಬೇಕು. ಸರ್ಕಾರಿ ಅಧಿಕಾರಿಗಳು, ವೈಟ್ ಕಾಲರ್ ವೃತ್ತಿಪರರು ಮತ್ತು ಸಂವಹನ ಕ್ಷೇತ್ರದ ಜನರು ಇಂತಹ ಪ್ರಕರಣಗಳಿಗೆ ಗುರಿಯಾಗುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ. ಮಾಹಿತಿಯನ್ನು ಪ್ರವೇಶಿಸಲು ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.

Representational image
ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಬಳಸಿಕೊಂಡು ಉದ್ಯೋಗದ ನೆಪದಲ್ಲಿ ವಂಚನೆ, ಸೈಬರ್ ಅಪರಾಧ: ರಾಜಸ್ಥಾನದ ಗ್ಯಾಂಗ್ ಬಂಧನ

ಇತ್ತೀಚೆಗೆ, ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇದು ಸ್ಕ್ಯಾಮ್ ಎಂದು ತಿಳಿಯದೆ invitation ಲಿಂಕ್ ತೆರೆದಿದ್ದಾರೆ. ನಂತರ, ಅಧಿಕಾರಿ ಹನಿ ಟ್ರ್ಯಾಪ್ ಆಗಿದ್ದರು ಎಂದು ಹಿರಿಯ ಸೈಬರ್ ಕ್ರೈಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಸಿಆರ್‌ಬಿ ಈಗ ಇಂತಹ ಪ್ರಕರಣಗಳನ್ನು ಮಾಲ್‌ವೇರ್ ವಿಭಾಗದ ಅಡಿಯಲ್ಲಿ ವರದಿ ಮಾಡುತ್ತದೆ ಎಂದು ಅಧಿಕಾರಿ ಹೇಳಿದರು.

ಸೈಬರ್‌ಪೀಸ್‌ನ ಸಂಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಮೇಜರ್ ವಿನೀತ್ ಕುಮಾರ್ ಮಾತನಾಡಿ, invitations ಗಳು ತುಂಬಾ ಆಕರ್ಷಕವಾಗಿವೆ, ಜನರು ಅದನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪರಿಚಿತ ನಂಬರ್ ಇಂದ ಬಂದಿದೆ ಎಂದು ತಿಳಿದಿದ್ದರೂ ಲಿಂಕ್ ಒಪನ್ ಮಾಡುತ್ತಾರೆ. ಹಾಗಾಗಿ ಕಳುಹಿಸುವವರ ಫೋನ್ ಕೂಡ Compromised ಮಾಡಿಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಫೋನ್ ಅಥವಾ ಸಾಧನವನ್ನು ತೆರೆಯುವುದರಿಂದ ಈ ರೀತಿಯ ಅಪರಾಧವು ಅಪಾಯಕಾರಿಯಾಗುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಅನೇಕ ಸ್ಟಾರ್ಟ್‌ಅಪ್‌ಗಳು ಈಗ ನವೀನ ಪರಿಹಾರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅನೇಕ ದೇಶಗಳಲ್ಲಿ, ಡೊಮೈನ್ ನೇಮ್ ಸಿಸ್ಟಮ್ (ಡಿಎನ್ಎಸ್) ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ, ಆದರೆ ಭಾರತದಲ್ಲಿ ಪ್ರಾಯೋಗಿಕ ಅಧ್ಯಯನಗಳು ನಡೆಯುತ್ತಿವೆ, ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com