ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಗೂ ಜನರಲ್ ತಿಮ್ಮಯ್ಯ ವಿರುದ್ಧದ ಅವಹೇಳನಾಕಾರಿ ಹೇಳಿಕೆಗೆ ಕೊಡಗು ನಿವಾಸಿಗಳು, ವಿವಿಧ ಕೊಡವ ಸಮಾಜಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನಿವಾಸಿಯೊಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಶುಕ್ರವಾರ ಬೆಳಗ್ಗೆ ಕೆಲ ವಾಟ್ಸಾಪ್ ಗ್ರೂಪ್ ಗಳಲ್ಲಿ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ವಿರುದ್ಧದ ಅವಹೇಳನಕಾರಿ ಹೇಳಿಕೆಗಳು ಹರಿದಾಡಿವೆ. ಅಪರಿಚಿತ ವ್ಯಕ್ತಿಯೊಬ್ಬರಿಂದ ಈ ಮೇಸೆಜ್ ಕಳುಹಿಸಲಾಗಿದೆ. ಮೊಬೈಲ್ ಆ್ಯಪ್ ನಲ್ಲಿ ಅವರ ಹಸರು ಶ್ರಿವಾಸ್ತವ ಭಟ್ ಎಂದು ತೋರಿಸಲಾಗುತ್ತಿದೆ. ಕೊಡವ ಸಂಘಟನೆಗಳು ಹಾಗೂ ಜಿಲ್ಲೆಯ ನಿವಾಸಿಗಳು ಹೇಳಿಕೆ ಖಂಡಿಸಿದ್ದರೂ ಅನೇಕ ಸೋಶಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ ಅದನ್ನು ಶೇರ್ ಮಾಡಲಾಗಿದೆ.
ಶ್ರೀವಾಸ್ತವ ಭಟ್ ಎನ್ನಲಾದ ಅಪರಿಚಿತ ವ್ಯಕ್ತಿ ವಿರುದ್ಧ ಕೊಡವಾಮೇರ ಕೊಂಡಾಟ ಎಸ್ಪಿ ಕೆ ರಾಜರಾಜನ್ ಗೆ ದೂರು ಸಲ್ಲಿಸಿದ್ದರೂ ಹಲವು ಪೊಲೀಸ್ ಠಾಣೆಗಳಲ್ಲಿ ವಿವಿಧ ಕೊಡವ ಸಮಾಜಗಳಿಂದ ದೂರು ದಾಖಲಿಸಲಾಗಿದೆ. ಸಂಸದ ಯದುವೀರ್ ಒಡೆಯರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ.
ದೇಶದ ಪ್ರಗತಿಗೆ ಅಪ್ರತಿಮ ಕೊಡುಗೆ ನೀಡಿರುವ ಕೊಡಗಿನ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯದುವೀರ್ ಆಗ್ರಹಿಸಿದ್ದಾರೆ.
ಸೇವೆ ಮತ್ತು ತ್ಯಾಗ ನಮ್ಮ ದೇಶದ ಭದ್ರತೆ ಮತ್ತು ಏಕತೆಯನ್ನು ರೂಪಿಸಿರುವುದರಿಂದ, ಅವರಿಗೆ ಅಪಾರವಾದ ಗೌರವ ನೀಡುವುದು ನಮ್ಮ ಕರ್ತವ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯದುವೀರ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸುವಂತೆ ಕೊಡವ ಮಕ್ಕಡ ಕೂಟ, ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯಾದ್ಯಂತ ವಿವಿಧ ಕೊಡವ ಸಮಾಜಗಳು ಒತ್ತಾಯಿಸಿವೆ.
Advertisement