ಬೆಂಗಳೂರು: ನಾಲ್ವರು ರಾಜ್ಯ ಸರ್ಕಾರಿ ಅಧಿಕಾರಿಗಳ 25 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ನಿನ್ನೆ ಗುರುವಾರ ಏಕಾಏಕಿ ದಾಳಿ ನಡೆಸಿದಾಗ ದಾಳಿ ನಡೆಸಿದಾಗ ಬರೋಬ್ಬರಿ 26.66 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಈ ಪೈಕಿ, ಮಂಗಳೂರಿನ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಎಂಸಿ ಅವರ ಬಳಿ 11.93 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಗೆ ಪತ್ತೆಯಾಗಿದೆ. ಇದರಲ್ಲಿ 10.41 ಕೋಟಿ ಮೌಲ್ಯದ ಮೂರು ನಿವೇಶನಗಳಾಗಿವೆ. ಬೆಂಗಳೂರಿನ ಯಲಹಂಕದಲ್ಲಿ ಒಂದು ಫ್ಲಾಟ್, ನಿರ್ಮಾಣ ಹಂತದಲ್ಲಿರುವ ಒಂದು ವಾಣಿಜ್ಯ ಸಂಕೀರ್ಣ, 26 ಎಕರೆ ಕಾಫಿ ಎಸ್ಟೇಟ್ ಮತ್ತು 1.51 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿಗಳು ಸೇರಿದಂತೆ 56,450 ನಗದು, 66.71 ಲಕ್ಷ ಮೌಲ್ಯದ ಆಭರಣಗಳು, 60 ಲಕ್ಷ ರೂ ಮೌಲ್ಯದ ವಾಹನ ಮತ್ತು 24.40 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿವೆ.
ಬೆಂಗಳೂರಿನ ಕಾವೇರಿ ನೀರಾವರಿ ನಿಗಮ ನಿಯಮಿತ ಸಂಸ್ಥೆಯ ಎಂಡಿ ಮಹೇಶ್ 6.89 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. 4.76 ಕೋಟಿ ಮೌಲ್ಯದ 25 ಸೈಟ್‌ಗಳು, ಒಂದು ಮನೆ ಮತ್ತು 25 ಎಕರೆ ಕೃಷಿ ಭೂಮಿ ಮತ್ತು 1.82 ಲಕ್ಷ ರೂಪಾಯಿ ನಗದು, 15 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು, 25 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಮತ್ತು 1.71 ಕೋಟಿ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿವೆ.
ಅಬಕಾರಿ ಅಧಿಕಾರಿ 4.37 ಕೋಟಿ ರೂ ಆಸ್ತಿ ‘ಮಾಲೀಕ’
ಬೆಂಗಳೂರು ದಕ್ಷಿಣ ಅಬಕಾರಿ ಆಯುಕ್ತರ ಕಚೇರಿಯ ಅಬಕಾರಿ ಸೂಪರಿಂಟೆಂಡೆಂಟ್ ಮೋಹನ್ ಕೆ ಅವರು 4.37 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
3.22 ಕೋಟಿ ಮೌಲ್ಯದ ಮೂರು ನಿವೇಶನ, ಎರಡು ಮನೆ ಹಾಗೂ ಎರಡು ಎಕರೆ 25 ಗುಂಟೆ ಕೃಷಿ ಭೂಮಿ ಸೇರಿದೆ. ಜತೆಗೆ 1.17 ಲಕ್ಷ ನಗದು, 44.58 ಲಕ್ಷ ಮೌಲ್ಯದ ಆಭರಣಗಳು, 35 ಲಕ್ಷ ಮೌಲ್ಯದ ವಾಹನಗಳು, 35 ಲಕ್ಷ ಬ್ಯಾಂಕ್ ಠೇವಣಿ ಸೇರಿದಂತೆ 1.15 ಕೋಟಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಯೋಜನೆ ನಿರ್ದೇಶಕ ತಿಪ್ಪೇಸ್ವಾಮಿ ಎನ್‌ಕೆ 3.38 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
2.55 ಕೋಟಿ ಮೌಲ್ಯದ ಒಂದು ನಿವೇಶನ, ಎರಡು ಮನೆ, ಏಳು ಎಕರೆ ಐದು ಗುಂಟೆ ಕೃಷಿ ಭೂಮಿ ಹಾಗೂ 8 ಲಕ್ಷ ನಗದು, 58.73 ಲಕ್ಷ ಮೌಲ್ಯದ ಆಭರಣಗಳು, 29.10 ಲಕ್ಷ ಮೌಲ್ಯದ ವಾಹನಗಳು, 15 ಸಾವಿರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿದಂತೆ 87.98 ಲಕ್ಷ ಮೌಲ್ಯದ ಚರಾಸ್ತಿಗಳು ಸೇರಿವೆ.
Advertisement