ಅಪರಾಧ ಹಿನ್ನೆಲೆಯಿರುವ ಅದಾನಿಯನ್ನು ಮೋದಿ ರಕ್ಷಿಸುವುದ್ಯಾಕೆ‌?: ದಿನೇಶ್‌ ಗುಂಡೂರಾವ್‌ ಪ್ರಶ್ನೆ

ಪ್ರಧಾನಿ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ವಾರೆಂಟ್ ಹೊರಡಿಸಿದೆ. ಅದಾನಿ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಿಸಲು ಅಧಿಕಾರಿಗಳಿಗೆ ರೂ2100 ಕೋಟಿಗೂ ಅಧಿಕ ಲಂಚದ ಅಮಿಷ ಒಡ್ಡಿದ್ದಾರೆ.
ಸಚಿವ ದಿನೇಶ್‌ ಗುಂಡೂರಾವ್‌
ಸಚಿವ ದಿನೇಶ್‌ ಗುಂಡೂರಾವ್‌
Updated on

ಬೆಂಗಳೂರು: ಅದಾನಿ ಒಬ್ಬ ವೃತ್ತಿಪರ ಅಪರಾಧಿ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಅಪರಾಧ ಹಿನ್ನೆಲೆಯಿರುವ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ‌? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ವಾರೆಂಟ್ ಹೊರಡಿಸಿದೆ. ಅದಾನಿ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಿಸಲು ಅಧಿಕಾರಿಗಳಿಗೆ ರೂ2100 ಕೋಟಿಗೂ ಅಧಿಕ ಲಂಚದ ಅಮಿಷ ಒಡ್ಡಿದ್ದಾರೆ. ಆ ಲಂಚದ ಹಣವನ್ನು ವಿದೇಶಿ ಹೂಡಿಕೆದಾರರಿಂದ ಪಡೆದ ಆರೋಪದ ಮೇಲೆ ಅದಾನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದ ಬಳಿಕ ಅದಾನಿ ಒಬ್ಬ ವೃತ್ತಿಪರ ಅಪರಾಧಿ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಅಪರಾಧ ಹಿನ್ನೆಲೆಯಿರುವ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ‌?

ಸಚಿವ ದಿನೇಶ್‌ ಗುಂಡೂರಾವ್‌
ಅಮೆರಿಕಾದಿಂದ ಕ್ರಿಮಿನಲ್ ದೋಷಾರೋಪ: 600 ಮಿಲಿಯನ್ ಡಾಲರ್ ಬಾಂಡ್ ಮಾರಾಟ ರದ್ದುಗೊಳಿಸಿದ ಅದಾನಿ ಗ್ರೂಪ್ ಅಂಗಸಂಸ್ಥೆ

ಪ್ರತಿ ಭಾರಿ ಸಂಪತ್ತಿನ ಹಿಂದೆ ಒಂದೋ ಅಕ್ರಮವಿರುತ್ತದೆ, ಇಲ್ಲವೆ ಅಪರಾಧವಿರುತ್ತದೆ ಎಂಬುದು ಲೋಕರೂಢಿ ಮಾತು. ಮೋದಿ ಯವರ ಅತ್ಯಾಪ್ತ ಗೆಳೆಯ ಅದಾನಿ ಗಳಿಸಿರುವ ಸಂಪತ್ತಿನ ಹಿಂದೆ ಇಂತಹ ಹಲವು ಅಕ್ರಮಗಳು ಹಾಗೂ ಅಪರಾಧಗಳ ಸರಮಾಲೆಯೇ ಇದೆ. ಅದಾನಿಯವರು ತಮ್ಮ ಉದ್ಯಮ ವ್ಯವಹಾರ ವಿಸ್ತರಿಸಲು ಇಡಿ ವ್ಯವಸ್ಥೆಯನ್ನೇ ಭ್ರಷ್ಟ ಮಾಡುವ ಕಲೆ ಸಿದ್ದಿಸಿಕೊಂಡಿದ್ದಾರೆ. ಇಂತಹ ಭ್ರಷ್ಟ ಉದ್ಯಮಿಯನ್ನು ತಮ್ಮ ಆಪ್ತ ವಲಯದಲ್ಲಿ ಬಿಟ್ಟುಕೊಂಡಿರುವ ಮೋದಿಯವರ ಪ್ರಾಮಾಣಿಕತೆಯ ಬಗ್ಗೆಯೂ ಅನುಮಾನ ಮೂಡುವುದಿಲ್ಲವೆ.? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com