'ಅಂಬಿ ನೀವು ಮತ್ತೆ ಹುಟ್ಟಿಬಂದಿರಿ': ಅಂಬರೀಷ್ ಪುಣ್ಯತಿಥಿಗೆ ಸುಮಲತಾ ಸ್ಮರಣೆ

ತಮ್ಮ ಪತಿಯನ್ನು ನೆನೆದು ಪೋಸ್ಟ್ ಹಂಚಿಕೊಂಡಿರುವ ಸುಮಲತಾ, ‘ನಿಮ್ಮ ಪ್ರೀತಿ, ನಿಮ್ಮ ಇರುವಿಕೆ ಶಾಶ್ವತ… ಸದಾ ಜನರ ಮಧ್ಯೆ ಇದ್ದು ಸ್ಪಂದನೀಯ ವ್ಯಕ್ತಿತ್ವದೊಂದಿಗೆ ನಮ್ಮೊಂದಿಗಿದ್ದ ಡಾ. ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಪ್ರೀತಿ, ಭಕ್ತಿಪೂರ್ವಕವಾಗಿ ಸ್ಮರಿಸುತ್ತಿದ್ದೇನೆ.
Ambareesh(File photo)
ಅಂಬರೀಷ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ನಿಧನರಾಗಿ ಇಂದಿಗೆ 6 ವರ್ಷಗಳಾಗಿವೆ. ಇಂದಿಗೂ ಸಹ ಅಭಿಮಾನಿಗಳು ಹಾಗೂ ಕುಟುಂಬದವರು ಅವರನ್ನು ಸ್ಮರಿಸುತ್ತಿದ್ದಾರೆ. ಅಂಬರೀಶ್​ ಅವರ ಆರನೇ ವರ್ಷದ ಪುಣ್ಯ ಸ್ಮರಣೆ ಆದ ಇಂದು, ಪತ್ನಿ ಸುಮಲತಾ ಅವರು ಅಂಬರೀಶ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ನಗರದ ಕಂಠೀರವ ಸ್ಟುಡಿಯೊದಲ್ಲಿರುವ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ.

ತಮ್ಮ ಪತಿಯನ್ನು ನೆನೆದು ಪೋಸ್ಟ್ ಹಂಚಿಕೊಂಡಿರುವ ಸುಮಲತಾ, ‘ನಿಮ್ಮ ಪ್ರೀತಿ, ನಿಮ್ಮ ಇರುವಿಕೆ ಶಾಶ್ವತ… ಸದಾ ಜನರ ಮಧ್ಯೆ ಇದ್ದು ಸ್ಪಂದನೀಯ ವ್ಯಕ್ತಿತ್ವದೊಂದಿಗೆ ನಮ್ಮೊಂದಿಗಿದ್ದ ಡಾ. ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಪ್ರೀತಿ, ಭಕ್ತಿಪೂರ್ವಕವಾಗಿ ಸ್ಮರಿಸುತ್ತಿದ್ದೇನೆ. ನಾಡು, ನುಡಿಗೆ ಅವರು ಸಲ್ಲಿಸಿದ ಸೇವೆಗಳು, ಅವರು ಕಲಿಸಿದ ಜೀವನ ಪಾಠಗಳು ಸದಾ ನಮ್ಮನ್ನು ಕಾಯಲಿವೆ, ಅವರಿಗೆ ಜನಮಾನಸದಲ್ಲಿ ದೊರಕುತ್ತಿರುವ ಅಭಿಮಾನ ನಮ್ಮ ಕುಟುಂಬಕ್ಕೆ ನಿರಂತರ ಆಶೀರ್ವಾದ. ಇದಕ್ಕೆ ನಾವೆಲ್ಲಾ ಚಿರಋಣಿ’ ಎಂದಿದ್ದಾರೆ.

ನೀವು ಪ್ರತಿ ಹೃದಯ ಬಡಿತದಲ್ಲಿ ನೆಲೆಸಿದ್ದೀರಿ, ಎಲ್ಲೆಲ್ಲೂ ಇದ್ದೀರಿ, ಪ್ರತಿ ಹುಟ್ಟಿನಲ್ಲೂ ಇದ್ದೀರಿ. ಈಗ ನೀವು ಮರಳಿ ಬಂದಿದ್ದೀರಿ’ ಎಂದಿದ್ದಾರೆ ಸುಮಲತಾ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೆ ತಂದೆಯಾಗಿದ್ದು ಅವರಿಗೆ ಗಂಡು ಮಗು ಜನಿಸಿದೆ. ಅಂಬರೀಶ್ ಅವರೇ ಮತ್ತೆ ಹುಟ್ಟಿಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಅಂಬರೀಶ್ ಅವರ ಅಭಿಮಾನಿಗಳು ಅವರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಮಾಡಿದ್ದಾರೆ. ಅಂಬರೀಶ್ ಅವರು 2018 ರ ನವೆಂಬರ್ 24 ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com