ಆರೋಗ್ಯ ಕೇಂದ್ರಗಳಲ್ಲಿ ಸೌರಶಕ್ತಿ ಬಳಕೆ; ದೇಶದಲ್ಲೇ ಮೊದಲ ಜಿಲ್ಲೆ ರಾಯಚೂರು!

ಈ ಕೇಂದ್ರಗಳಿಗೆ ವಿದ್ಯುತ್ ಬಿಲ್‌ಗಳನ್ನು ಶೇಕಡಾ 70ರವರೆಗೆ ಕಡಿಮೆ ಮಾಡಿದೆ. ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ ಸರಿಸುಮಾರು 86.4 ಲಕ್ಷ ರೂಪಾಯಿಗಳನ್ನು ಉಳಿಸುತ್ತಿದೆ.
ಆರೋಗ್ಯ ಕೇಂದ್ರಗಳಲ್ಲಿ ಸೌರಶಕ್ತಿ ಬಳಕೆ; ದೇಶದಲ್ಲೇ ಮೊದಲ ಜಿಲ್ಲೆ ರಾಯಚೂರು!
Updated on

ಬೆಂಗಳೂರು: ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಬಳಸಿ ಸಂಪೂರ್ಣ ವಿದ್ಯುತ್ ಪೂರೈಸುತ್ತಿರುವ ಭಾರತದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ರಾಯಚೂರು ಪಾತ್ರವಾಗಿದೆ. 191 ಉಪ-ಕೇಂದ್ರಗಳು ಮತ್ತು 51 ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs) ಸೇರಿದಂತೆ 257 ಆರೋಗ್ಯ ಸೌಲಭ್ಯಗಳೊಂದಿಗೆ, ಜಿಲ್ಲೆಯು ಸರಾಸರಿ 1,000 kWp (ಕಿಲೋವ್ಯಾಟ್ ಗರಿಷ್ಠ) ಸ್ಥಾಪಿತ ಸೌರ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.

ಈ ಕೇಂದ್ರಗಳಿಗೆ ವಿದ್ಯುತ್ ಬಿಲ್‌ಗಳನ್ನು ಶೇಕಡಾ 70ರವರೆಗೆ ಕಡಿಮೆ ಮಾಡಿದೆ. ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ ಸರಿಸುಮಾರು 86.4 ಲಕ್ಷ ರೂಪಾಯಿಗಳನ್ನು ಉಳಿಸುತ್ತಿದೆ, ಶುದ್ಧ ಇಂಧನ ಪರಿಹಾರಗಳು ಹೇಗೆ ಆರ್ಥಿಕ ಮತ್ತು ಪರಿಸರ ಲಾಭಗಳಿಗೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ.

2021 ರಲ್ಲಿ ಲಾಭೋದ್ದೇಶವಿಲ್ಲದ ಸಂಸ್ಥೆಯಾದ SELCO ಸಹಯೋಗದೊಂದಿಗೆ ರಾಜ್ಯ ಆರೋಗ್ಯ ಇಲಾಖೆಯು ಈ ಉಪಕ್ರಮವನ್ನು ಪ್ರಾರಂಭಿಸಿತು. ಈ ವರ್ಷ, ಈ ಯೋಜನೆಯನ್ನು ಕರ್ನಾಟಕದಾದ್ಯಂತ 5,000 ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲಾಯಿತು, ಇದು ಗ್ರಾಮೀಣ ಪ್ರದೇಶದ 3 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುತ್ತದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿಯೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್, ಈ ಉಪಕ್ರಮವನ್ನು ಆರಂಭದಲ್ಲಿ ರಾಯಚೂರಿನಲ್ಲಿ ಪ್ರಾರಂಭಿಸಲಾಯಿತು. ಜಿಲ್ಲೆಯ ಅಗತ್ಯತೆ ಮತ್ತು ಸಾಕಷ್ಟು ಬಿಸಿಲಿನಂತಹ ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಕಾರಣವಾದವು. ಪ್ರಸ್ತುತ, ಉಪಕ್ರಮವು 1,152 ಆರೋಗ್ಯ ಸೌಲಭ್ಯಗಳಿಗೆ ವಿಸ್ತರಿಸಿದೆ. ಇತ್ತೀಚೆಗೆ 5,000 ಆರೋಗ್ಯ ಕೇಂದ್ರಗಳಿಗೆ ಸೇರಿಸಿದ್ದೇವೆ ಎಂದರು. ಮುಂದಿನ ಎರಡು ವರ್ಷಗಳಲ್ಲಿ, ಯೋಜನೆಯು ಇಡೀ ರಾಜ್ಯವನ್ನು ಆವರಿಸುವ ಗುರಿಯನ್ನು ಹೊಂದಿದೆ, ಈ ವಿಸ್ತರಣೆಯೊಂದಿಗೆ, ಪ್ರತಿ ತಿಂಗಳು 60 ಲಕ್ಷದವರೆಗೆ ಉಳಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ, ವಾರ್ಷಿಕವಾಗಿ ಸುಮಾರು 6-7 ಕೋಟಿಗಳಷ್ಟು ಉಳಿತಾಯವಾಗುತ್ತದೆ ಎಂದರು.

ಆರೋಗ್ಯ ಕೇಂದ್ರಗಳಲ್ಲಿ ಸೌರಶಕ್ತಿ ಬಳಕೆ; ದೇಶದಲ್ಲೇ ಮೊದಲ ಜಿಲ್ಲೆ ರಾಯಚೂರು!
Solar power: ನೀರಾವರಿ ಪಂಪ್‌ಗಳಿಗೆ ಸೌರಶಕ್ತಿ ಒದಗಿಸುವ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ

ಆರು ಸಮುದಾಯ ಆರೋಗ್ಯ ಕೇಂದ್ರಗಳು, 51 ಪಿಎಚ್‌ಸಿಗಳು, 191 ಉಪ ಕೇಂದ್ರಗಳು, ನಾಲ್ಕು ಉಪ-ವಿಭಾಗೀಯ ಆಸ್ಪತ್ರೆಗಳು ಮತ್ತು ಐದು ನಗರ ಪಿಎಚ್‌ಸಿಗಳನ್ನು ಸೌರಶಕ್ತಿಯ ಮೇಲೆ ನಿರ್ವಹಿಸುತ್ತಿರುವ ರಾಯಚೂರು, ಕಾಲ್ ಸೆಂಟರ್‌ನಂತೆ ಸೌರ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ವಿಶೇಷ ಕೇಂದ್ರವನ್ನು ಹೊಂದಿದೆ. ಎಲ್ಲವೂ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಡ್ಯಾಶ್‌ಬೋರ್ಡ್‌ಗಳ ಮೂಲಕ ಸಿಸ್ಟಮ್‌ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ರಾಯಚೂರು ಜಿಲ್ಲೆಯ ಮಿಟ್ಟಿಮಲ್ಕಾಪುರ ಉಪ ಕೇಂದ್ರದ ಪಿಎಚ್‌ಸಿ ಅಧಿಕಾರಿ ಸಾರಾ ಬಾನೋ, ಕೆಲವು ವರ್ಷಗಳ ಹಿಂದೆ, ಅನೇಕ ಮಹಿಳೆಯರು ಹೆರಿಗೆ ಮಾಡಿಸಿಕೊಳ್ಳಲು ಬರಲು ಹಿಂಜರಿಯುತ್ತಿದ್ದರು, ಆದರೆ ಈಗ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com