ಮಡಿಕೇರಿ: ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಡುವೆ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ಸುಮಾರು 25 ವರ್ಷ ಪ್ರಾಯದ ಹೆಣ್ಣಾನೆಯೊಂದು ವಾಲ್ನೂರು-ತ್ಯಾಗತ್ತೂರು ಎಸ್ಟೇಟ್‌ಗೆ ನುಗ್ಗಿತ್ತು. ಆನೆ ಗ್ರಾಮಕ್ಕೆ ತಲುಪದಂತೆ ಅಳವಡಿಸಲಾಗಿದ್ದ ರೈಲ್ವೆ ಬ್ಯಾರಿಕೇಡ್ ಅನ್ನು ಯಶಸ್ವಿಯಾಗಿ ದಾಟಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಆನೆಯು ರೈಲ್ವೇ ಬ್ಯಾರಿಕೇಡ್ ದಾಟಲು ಯತ್ನಿಸುತ್ತಿದ್ದಾಗ ಬ್ಯಾರಿಕೇಡ್ ನಡುವೆ ಸಿಲುಕಿಕೊಂಡಿದೆ. ಆನೆಯ ಕೂಗು ಕೇಳಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬ್ಯಾರಿಕೇಡ್ ಬಿಚ್ಚಿ ಆನೆಯನ್ನು ರಕ್ಷಿಸಿದ್ದಾರೆ.
ಎಸ್ಟೇಟ್‌ಗಳಿಂದ ಕಾಡಿಗೆ ಆನೆ ಮರಳುತ್ತಿತ್ತು. ಆದರೆ ಅದು ರೈಲ್ವೆ ಬ್ಯಾರಿಕೇಡ್‌ನ ಕಳೆಗೆ ಸಿಲುಕಿಕೊಂಡಿತು. ಈ ವೇಳೆ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಅರಣ್ಯಾಧಿಕಾರಿಗಳು ಸುಮಾರು 10 ನಿಮಿಷದಲ್ಲೇ ಬ್ಯಾರಿಕೇಡ್ ಕಟ್ ಮಾಡಿ ಆನೆಯನ್ನು ರಕ್ಷಿಸಲಾಯಿತು ಎಂದು RFO ದೃಢಪಡಿಸಿದರು. ರಕ್ಷಣಾ ಕಾರ್ಯಾಚರಣೆಯ ನಂತರ ಆನೆಯು ಕಾವೇರಿ ನದಿಯ ಮೂಲಕ ಅರಣ್ಯವನ್ನು ತಲುಪಿತು ಎಂದು ಅವರು ಹೇಳಿದರು.
ಏತನ್ಮಧ್ಯೆ, ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಸಂಘರ್ಷ ಹೆಚ್ಚಿದೆ. ಅರಣ್ಯದ ಅಂಚಿನಲ್ಲಿ ರೈಲ್ವೇ ಬ್ಯಾರಿಕೇಡ್‌ಗಳನ್ನು ಹಾಕಿದ್ದರೆ, ಆನೆಗಳು ಬ್ಯಾರಿಕೇಡ್‌ಗಳನ್ನು ದಾಟಿ ಎಸ್ಟೇಟ್‌ಗಳ ಮೂಲಕ ಗ್ರಾಮಗಳಿಗೆ ಎಂಟ್ರಿಕೊಡುತ್ತಿವೆ. ಈ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸಿ ಸಂಘರ್ಷಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement