ಕೊಪ್ಪಳದಲ್ಲಿ ಅಪರೂಪದ ಉರಿ ಉಯ್ಯಾಲೆ ಬಲಿದಾನದ ಸ್ಮಾರಕಗಳು ಪತ್ತೆ!

ಈ ಹಿಂದೆ ಮಂಡ್ಯ, ಗದಗ, ಧಾರವಾಡ, ಚಾಮರಾಜನಗರದಲ್ಲಿ ಕಂಡುಬಂದಿವೆ. ಉರಿ ಉಯ್ಯಾಲೆ ಎಂದರೆ ಬೆಂಕಿ(ಉರಿ)ಯ ಮೇಲೆ ತೂಗಾಡುವುದು ಎಂದರ್ಥ
Rare burning swing sacrificial monuments found
ಉರಿ ಉಯ್ಯಾಲೆ ಸ್ಮಾರಕಗಳು ಪತ್ತೆ
Updated on

ಕೊಪ್ಪಳ :ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳಗಿ ಗ್ರಾಮದ ಕೆರೆಯೊಂದರ ಬಳಿ ಎರಡು ಉಯ್ಯಾಲೆ ಬಲಿದಾನದ ಸ್ಮಾರಕಗಳು ಪತ್ತೆಯಾಗಿವೆ. ಇದನ್ನು ಕನ್ನಡದಲ್ಲಿ "ಉರಿ ಉಯ್ಯಾಲೆ" ಎಂದು ಕರೆಯಲಾಗುತ್ತದೆ.

ಈ ಅಪರೂಪದ ಸ್ಮಾರಕಗಳು ಸುಮಾರು 1,000 ವರ್ಷಗಳ ಹಿಂದೆ ಜನರು ಮಾಡಿದ ತ್ಯಾಗವನ್ನು ವಿವರಿಸುತ್ತವೆ. ಇತಿಹಾಸಕಾರರ ಪ್ರಕಾರ ಇಂತಹ ಸ್ಮಾರಕಗಳು ಈ ಹಿಂದೆ ಮಂಡ್ಯ, ಗದಗ, ಧಾರವಾಡ, ಚಾಮರಾಜನಗರದಲ್ಲಿ ಕಂಡುಬಂದಿವೆ. ಉರಿ ಉಯ್ಯಾಲೆ ಎಂದರೆ ಬೆಂಕಿ(ಉರಿ)ಯ ಮೇಲೆ ತೂಗಾಡುವುದು ಎಂದರ್ಥ. ಆತ್ಮಬಲಿದಾನಗಳಲ್ಲಿ ಒಂದಾದ ಈ ಹರಕೆಯು ಬಹಳ ವಿರಳ ಮತ್ತು ವಿಶೇಷ. ಹಿಂದೆ, ಜನರು ತಮ್ಮ ಮಕ್ಕಳಿಲ್ಲದ ಆಡಳಿತಗಾರರಿಗೆ ಪುತ್ರರು ಅಥವಾ ಪುತ್ರಿಯರನ್ನು ಆಶೀರ್ವದಿಸಬೇಕೆಂದು ದೇವರಿಗೆ ಮೊರೆ ಹೋಗಿ ಉಯ್ಯಾಲೆಯ ಮೇಲೆ ಕುಳಿತು ಅಥವಾ ನಿಂತು ( ಅಗ್ನಿದೇವನಿಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ) ಬೆಂಕಿ ಹಚ್ಚಿಕೊಳ್ಳುತ್ತಿದ್ದರು.

ಸ್ಮಾರಕಗಳ ಮೇಲಿನ ಶಾಸನಗಳ ಪ್ರಕಾರ ಕೆಲವರು ಮೋಕ್ಷವನ್ನು ಪಡೆಯಲು ಈ ಆಚರಣೆಯನ್ನು ಮಾಡುತ್ತಿದ್ದರು. ಆದಾಗ್ಯೂ, ಇವುಗಳನ್ನು ತ್ಯಾಗದ ಸ್ಮಾರಕಗಳೆಂದು ಪರಿಗಣಿಸಲಾಗಿದೆ. ಈ ಆಚರಣೆಗಳನ್ನು ದೇವಿಯ ದೇವಾಲಯಗಳಲ್ಲಿ ನಡೆಸಲಾಗುತ್ತಿತ್ತು. ಇತಿಹಾಸಕಾರರ ಪ್ರಕಾರ, ಜನರು ಯುದ್ಧಗಳಲ್ಲಿ ತಮ್ಮ ರಾಜರ ವಿಜಯಕ್ಕಾಗಿ ಈ ಆಚರಣೆಗಳನ್ನು ಸಹ ಮಾಡಿದರು.

Rare burning swing sacrificial monuments found
ಹಾಸನ: ಶ್ರವಣಬೆಳಗೊಳದಲ್ಲಿ 10ನೇ ಶತಮಾನದ ಶಿಲಾ ಶಾಸನ ಪತ್ತೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com