
ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. 1924ರಲ್ಲಿ ನಡೆದ ಐತಿಹಾಸಿಕ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ 100 ವರ್ಷಗಳಾಗಿರುವ ಶುಭ ಗಳಿಗೆಯಲ್ಲಿ ‘ಗಾಂಧಿ ನಡಿಗೆ’, ‘ಸ್ವಚ್ಛತಾ ಆಂದೋಲನದ ಪ್ರತಿಜ್ಞಾವಿಧಿ’ ಮೂಲಕ ರಾಜ್ಯ ಸರ್ಕಾರವು ವಿಭಿನ್ನವಾಗಿ ಗಾಂಧಿ ಜಯಂತಿ ಕಾರ್ಯಕ್ರಮ ಆಚರಣೆ ಮಾಡಿದೆ.
1924ರ ಡಿ.25, 26ರಂದು ಇಲ್ಲಿ ಅಧಿವೇಶನ ನಡೆದಿತ್ತು. 2024ರ ಡಿ.25ಕ್ಕೆ ಈ ಗಳಿಗೆಗೆ 100 ವಸಂತ ತುಂಬಲಿದೆ. ಈ ಬೆಳಗಾವಿ ಕಾಂಗ್ರೆಸ್ ಅಧಿವೇಶನವನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಘಟನೆ ಎಂದು ಪರಿಗಣಿಸಲಾಗಿದೆ ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಯುವಕರನ್ನು ಪ್ರೇರೇಪಿಸಿತು.
ಜವಾಹರಲಾಲ್ ನೆಹರು, ಸರೋಜಿನಿ ನಾಯ್ಡು, ಅಬ್ದುಲ್ ಗಫಾರ್ ಖಾನ್, ಮೌಲಾನಾ ಆಜಾದ್ ಮತ್ತು ಗಂಗಾಧರರಾವ್ ದೇಶಪಾಂಡೆ ಸೇರಿದಂತೆ ಹಲವಾರು ಪ್ರಮುಖ ನಾಯಕರು ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು ಎಂದು ಲಭ್ಯವಿರುವ ಮಾಹಿತಿ ತಿಳಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಆರ್‌ಹೆಚ್ ಕುಲಕರ್ಣಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಬಗ್ಗೆ ಹೇಳಿದ್ದನ್ನು ಅವರ ಪುತ್ರ ಸುಭಾಷ್ ಕುಲಕರ್ಣಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ.
ವಿವಿಧ ನಗರಗಳು ಮತ್ತು ಪಟ್ಟಣಗಳ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದ ಜವಾಹರಲಾಲ್ ನೆಹರು ಅವರ ಮೇಲೆ 39 ನೇ ಕಾಂಗ್ರೆಸ್ ಅಧಿವೇಶನವನ್ನು ತಮ್ಮ ಪ್ರದೇಶಗಳಲ್ಲಿ ನಡೆಸುವಂತೆ ಒತ್ತಡ ಹೇರಿದ್ದರು, ಆದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಗಂಗಾಧರರಾವ್ ದೇಶಪಾಂಡೆ ಅವರಿಗೆ ಸಾಧ್ಯವಾಯಿತು ಎಂದು ಸುಭಾಷ್ ಹೇಳಿದರು. ಸುಭಾಷ್ ಅವರ ಪ್ರಕಾರ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿ ಕನಿಷ್ಠ ಆರು ಬಾರಿ ಬೆಳಗಾವಿಗೆ ಭೇಟಿ ನೀಡಿದ್ದರು.
1916 ರಲ್ಲಿ ಸ್ವಾತಂತ್ರ್ಯ ಚಳುವಳಿಯು ವೇಗವನ್ನು ಪಡೆಯುತ್ತಿದ್ದ ಸಮಯದಲ್ಲಿ, ಗಾಂಧೀಜಿ ಅವರು ಬಾಲಗಂಗಾಧರ ತಿಲಕ್ ಅವರೊಂದಿಗೆ ಬೆಳಗಾವಿಗೆ ಬಂದಿದ್ದರು. ಬೆಳಗಾವಿಯ ಹಲವಾರು ಯುವ ಮುಖಂಡರು ಆ ಸಮಯದಲ್ಲಿ ಬೆಳಗಾವಿಗೆ ಭೇಟಿ ನೀಡದಂತೆ ಗಾಂಧೀಜಿಯನ್ನು ಒತ್ತಾಯಿಸಿದ್ದರು, ಆದರೆ ಮಹಾತ್ಮರು ಧೈರ್ಯ ಮಾಡಿ ಭೇಟಿ ನೀಡಿದರು, ನನ್ನ ಸಾವು ಮಾತ್ರ ಬೆಳಗಾವಿಗೆ ಭೇಟಿ ನೀಡುವುದನ್ನು ತಡೆಯಲು ಸಾಧ್ಯ, ಅದನ್ನು ಹೊರತುಪಡಿಸಿದರೆ ಬೇರೆ ಯಾರಿಂದಲೂ ಬೆಳಗಾವಿಗೆ ನಾನು ಭೇಟಿ ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಗಾಂಧೀಜಿ ಹೇಳಿದ್ದನ್ನು ಎಂದು ಸುಭಾಷ್ ಕುಲಕರ್ಣಿ ಸ್ಮರಿಸಿದ್ದಾರೆ.
1916 ರಲ್ಲಿ ಏಪ್ರಿಲ್ 27 ರಿಂದ ಮೇ 1 ರವರೆಗೆ ಈ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಹೆಚ್ಚಿಸಲು ಗಾಂಧಿಯವರು ಬೆಳಗಾವಿಯಲ್ಲಿದ್ದರು. ಮುಂದೆ, ಅವರು 1920 ರಲ್ಲಿ ನವೆಂಬರ್ 8 ಮತ್ತು 9 ರಂದು ಬೆಳಗಾವಿಗೆ ಭೇಟಿ ನೀಡಿದರು. ನಂತರ ಅವರು 1924 ರಲ್ಲಿ 24 ನೇ ಕಾಂಗ್ರೆಸ್ ಅಧಿವೇಶನದಲ್ಲಿ 15 ದಿನಗಳ ಕಾಲ ಬೆಳಗಾವಿಯಲ್ಲಿ ಇದ್ದರು. ಮಹಾತ್ಮ ಗಾಂಧಿಯವರು 1927 ರಲ್ಲಿ ಮಹಾರಾಷ್ಟ್ರಕ್ಕೆ ಹೋಗುವ ಮಾರ್ಗದಲ್ಲಿ ಏಪ್ರಿಲ್ 18 ಮತ್ತು 19 ರಂದು ಬೆಳಗಾವಿಯಲ್ಲಿ ತಂಗಿದ್ದರು. ನಂತರ, ಅವರು ಮಾರ್ಚ್ 4, 1934 ರಂದು ಮತ್ತೆ ಇಲ್ಲಿಗೆ ಬಂದರು ಮತ್ತು ಏಳು ದಿನಗಳ ಕಾಲ ಬೆಳಗಾವಿ, ನಿಪ್ಪಾಣಿ ಮತ್ತು ಶೇಡಬಾಳ (ಅಥಣಿ ತಾಲ್ಲೂಕು) ಗಳಲ್ಲಿ ತಂಗಿದ್ದರು. ಎಪ್ರಿಲ್ 17 ರಿಂದ 23 ರವರೆಗೆ ಗಾಂಧಿ ಸೇವಾ ಸಂಘದ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾಗ ಬೆಳಗಾವಿ ಸಮೀಪದ ಹುದಲಿಯಲ್ಲಿರುವ ಕುಮಾರಿ ಆಶ್ರಮದಲ್ಲಿ ಗಾಂಧಿ ತಂಗಿದ್ದರು. ಹುದಲಿಯಲ್ಲಿ ಅತಿಥಿಗಳಿಗೆ ತಂಗಲು ಕನಿಷ್ಠ 250 ಗುಡಿಸಲುಗಳನ್ನು ನಿರ್ಮಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ವೀರಸೌಧ
ಐತಿಹಾಸಿಕ 39 ನೇ ಕಾಂಗ್ರೆಸ್ ಅಧಿವೇಶನದ ನೆನಪಿಗಾಗಿ, ರಾಜ್ಯ ಸರ್ಕಾರವು ಅಧಿವೇಶನ ನಡೆದ ಬೆಳಗಾವಿಯ ಟಿಳಕವಾಡಿಯಲ್ಲಿ ವೀರಸೌಧ, ಗಾಂಧಿ ಸ್ಮಾರಕವನ್ನು ನಿರ್ಮಿಸಿದೆ. ವೀರಸೌಧದಲ್ಲಿ ಬುಧವಾರ ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
Advertisement