ಉಡುಪಿ: ಎರಡು ಗ್ರಾಮಗಳಲ್ಲಿ ಕಲುಷಿತ ನೀರು ಕುಡಿದು 1,000 ಕ್ಕೂ ಹೆಚ್ಚು ಜನ ಅಸ್ವಸ್ಥ

ಅಸ್ವಸ್ಥರಾದವರಲ್ಲಿ ಯಾರೊಬ್ಬರ ಸ್ಥಿತಿಯೂ ಗಂಭೀರವಾಗಿಲ್ಲ. ಸ್ಥಳೀಯ ಆರೋಗ್ಯ ಕೇಂದ್ರದಿಂದ ಸೂಕ್ತ ಔಷಧೋಪಚಾರ ಪಡೆದು ಹೆಚ್ಚಿನವರು ಈಗಾಗಲೇ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥಗೊಂಡ ವ್ಯಕ್ತಿ
ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥಗೊಂಡ ವ್ಯಕ್ತಿ
Updated on

ಉಡುಪಿ: ಉಡುಪಿ ಜಿಲ್ಲೆಯ ಉಪ್ಪುಂದದಲ್ಲಿ ಸ್ಥಳೀಯ ಓವರ್‌ಹೆಡ್ ಟ್ಯಾಂಕ್‌ನಿಂದ ಪೂರೈಕೆಯಾದ ಕಲುಷಿತ ನೀರು ಕುಡಿದು ಒಂದು ಸಾವಿರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಅಸ್ವಸ್ಥರಾದವರಲ್ಲಿ ಯಾರೊಬ್ಬರ ಸ್ಥಿತಿಯೂ ಗಂಭೀರವಾಗಿಲ್ಲ. ಸ್ಥಳೀಯ ಆರೋಗ್ಯ ಕೇಂದ್ರದಿಂದ ಸೂಕ್ತ ಔಷಧೋಪಚಾರ ಪಡೆದು ಹೆಚ್ಚಿನವರು ಈಗಾಗಲೇ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೆಚ್ಚಾಗಿ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್‌ನ ಕರ್ಕಿ ಕಳ್ಳಿ ಮತ್ತು ಮಡಿಕಲ್ ಹಳ್ಳಿಯ ಕಲುಷಿತ ನೀರು ಕುಡಿದ ಜನರಲ್ಲಿ ವಾಂತಿ ಮತ್ತು ಭೇದಿಯಂತಹ ರೋಗಲಕ್ಷಣಗಳು ಕಂಡು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥಗೊಂಡ ವ್ಯಕ್ತಿ
ಮೈಸೂರು: ಕಲುಷಿತ ನೀರು ಸೇವಿಸಿ ಓರ್ವ ಸಾವು; ವಾಂತಿ ಭೇದಿಯಿಂದ 12 ಮಂದಿ ಅಸ್ವಸ್ಥ

ಹಲವಾರು ಮನೆಗಳಲ್ಲಿ ಮೂರು ಅಥವಾ ಹೆಚ್ಚಿನ ಜನರು ಕಾಸಿನಾಡಿಯಲ್ಲಿನ ಓವರ್ಹೆಡ್ ವಾಟರ್ ಟ್ಯಾಂಕ್ ನಿಂದ ಪೂರೈಕೆಯಾದ ನೀರು ಕುಡಿದ ನಂತರ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡದ್ ಮಾತನಾಡಿ, ಎರಡು ವಾರ್ಡ್‌ಗಳಿಗೆ ಸರಬರಾಜಾಗುವ ನೀರಿನಲ್ಲಿ ನೀರಿನ ಮೂಲಕ ಹರಡುವ ರೋಗಕಾರಕ ಸಾಲ್ಮೊನೆಲ್ಲಾ ಬ್ಯಾಸಿಲರಿ ತಳಿಗಳು ಕಂಡುಬಂದಿವೆ.

ನಾವು ಸೆಪ್ಟೆಂಬರ್ 30 ರಂದು ಒಂದೇ ನೀರಿನ ಮೂಲವನ್ನು ಬಳಸುವ ಎರಡೂ ಗ್ರಾಮಗಳು ಮತ್ತು ಹತ್ತಿರದ ಹಳ್ಳಿಗಳಲ್ಲಿ ಪರಿಶೀಲನೆ ಮಾಡಲು ತಂಡವನ್ನು ಕಳುಹಿಸಿದ್ದೇವೆ ಮತ್ತು 56 ಪ್ರಕರಣಗಳಲ್ಲಿ ಈ ಬ್ಯಾಕ್ಟೀರಿಯಾದ ತಳಿಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಎರಡು ವಾರ್ಡ್‌ಗಳ ಗ್ರಾಮ ಪಂಚಾಯಿತಿ ಸದಸ್ಯರ ಪ್ರಕಾರ, ಈ ಘಟನೆಗೂ ಮೂರು ದಿನ ಮೊದಲು ನೀರು ಸರಬರಾಜು ಇರಲಿಲ್ಲ. ನಂತರ ಹಳ್ಳಿಗಳಲ್ಲಿ ಕೆಸರು ಮಿಶ್ರಿತ ನೀರು ಬಂದಿತು ಮತ್ತು ಕುಡಿಯುವ ಮೊದಲು ಅದನ್ನು ಫಿಲ್ಟರ್ ಮಾಡಿ ಅಥವಾ ಕುದಿಸಿ ಹಾರಿಸಿ ಕುಡಿದವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಕೆಸರು ಮಿಶ್ರಿತ ನೀರು ಪೂರೈಕೆಗೆ ಕಾರಣವೇನು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಗಡದ್ ಹೇಳಿದ್ದಾರೆ.

ನೀರಿನ ತೊಟ್ಟಿಯ ಕಳಪೆ ನಿರ್ವಹಣೆಯೇ ನೀರು ಕಲುಷಿತಗೊಳ್ಳಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾಸಿನದಿ ಓವರ್‌ಹೆಡ್‌ ಟ್ಯಾಂಕ್‌ನಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com