ಬೆಂಗಳೂರು: ಅಕ್ರಮ ಪಾಕ್ ಕುಟುಂಬಗಳಿಗೆ ಸಹಾಯ ಮಾಡಿದ ಪ್ರಮುಖ ಆರೋಪಿ ಬಂಧನ

ಆರೋಪಿಯನ್ನು ಮುಂಬೈ ಮೂಲದ ಪರ್ವೇಜ್ (57) ಎಂದು ಗುರುತಿಸಲಾಗಿದೆ. ಎರಡು ಕುಟುಂಬಗಳು ಪರ್ವೇಜ್‌ನ ವಿವರಗಳನ್ನು ಬಹಿರಂಗಪಡಿಸಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರonline desk
Updated on

ಬೆಂಗಳೂರು: ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳ ಅಕ್ರಮ ತಂಗಿದ್ದ ಪ್ರಕರಣದಲ್ಲಿ ಜಿಗಣಿ ಪೊಲೀಸರು ಪ್ರಮುಖ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ಆರೋಪಿಯು ಇತ್ತೀಚೆಗೆ ಬಂಧಿಸಲಾದ ಎರಡು ಪಾಕಿಸ್ತಾನಿ ಕುಟುಂಬಗಳಿಗೆ ನಕಲಿ ಗುರುತಿನ ದಾಖಲೆಗಳನ್ನು ಒದಗಿಸುವ ಮೂಲಕ ಮತ್ತು ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ಗಳನ್ನು ಪಡೆಯಲು ಸಹಾಯ ಮಾಡಿದ್ದಾನೆ.

ಆರೋಪಿಯನ್ನು ಮುಂಬೈ ಮೂಲದ ಪರ್ವೇಜ್ (57) ಎಂದು ಗುರುತಿಸಲಾಗಿದೆ. ಎರಡು ಕುಟುಂಬಗಳು ಪರ್ವೇಜ್‌ನ ವಿವರಗಳನ್ನು ಬಹಿರಂಗಪಡಿಸಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಆತನನ್ನು ಬಂಧಿಸಲಾಗಿದೆ. ನಕಲಿ ಆಧಾರ್ ಕಾರ್ಡ್‌ಗಳು, ಭಾರತೀಯ ಪಾಸ್‌ಪೋರ್ಟ್‌ಗಳು, ಪ್ಯಾನ್ ಕಾರ್ಡ್‌ಗಳು ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಪಡೆಯಲು ಪಾಕಿಸ್ತಾನಿ ಪ್ರಜೆಗಳಿಗೆ ಸಹಾಯ ಮಾಡಿದ ಆರೋಪ ಭಾರತೀಯ ಪರ್ವೇಜ್ ಮೇಲಿದೆ.

ಬಂಧಿತ ಆರೋಪಿ ಭಾರತದಲ್ಲಿ ಮೆಹದಿ ಫೌಂಡೇಶನ್‌ನ ಮುಖ್ಯಸ್ತನಾಗಿದ್ದಾನೆ ಎಂದು ವರದಿಯಾಗಿದೆ. ಧಾರ್ಮಿಕ ಮುಖಂಡ ಯೂನಸ್ ಅಲ್-ಗೋಹರ್ ಅವರ ಬೋಧನೆಗಳನ್ನು ಪ್ರಚಾರ ಮಾಡುತ್ತಿದ್ದ ಈ ಹಿಂದೆ ಬಂಧಿತ ವ್ಯಕ್ತಿಗಳು ಪರ್ವೇಜ್ ನೊಂದಿಗೆ ಸಂಪರ್ಕದಲ್ಲಿದ್ದರು, ಆತನ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ, ಬಂಧಿತ ವ್ಯಕ್ತಿಗಳು ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾನೆ. ಜಿಗಣಿ ಪೊಲೀಸರು ಪರ್ವೇಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಹಿಂದೂ ಹೆಸರಿನಲ್ಲಿ ವಾಸಿಸುತ್ತಿದ್ದ ಎರಡು ಪಾಕಿಸ್ತಾನಿ ಕುಟುಂಬಗಳನ್ನು ಎರಡು ಪ್ರತ್ಯೇಕ ಘಟನೆಗಳಲ್ಲಿ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಸಂಗ್ರಹ ಚಿತ್ರ
ಹಿಂದೂ ಹೆಸರಲ್ಲಿ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕ್ ಪ್ರಜೆ ಸೇರಿ ನಾಲ್ವರ ಬಂಧನ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com