
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಪ್ರತಿ ವರ್ಷ ಅಪಘಾತ ಮತ್ತು ಇತರ ಸಮಸ್ಯೆಗಳಿಂದಾಗಿ 100 ಕೋಟಿ ರೂ. ನಷ್ಟ ಉಂಟಾಗುತ್ತಿದೆ.
ಈ ಸಮಸ್ಯೆಗಳನ್ನು ಪರಿಹರಿಸಲು, KSRTC ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನಿಂದ ಪಾಠ ಕಲಿಯಲು ಯತ್ನಿಸುತ್ತಿದೆ. ಈ ಎರಡು ಸಂಸ್ಥೆಗಳು 24,000 ಟ್ರಕ್‌ಗಳನ್ನು ನಿರ್ವಹಿಸುತ್ತಿದ್ದರೂ ಕಡಿಮೆ ಅಪಘಾತದ ಪ್ರಮಾಣ ಹೊಂದಿವೆ. KSRTC ಪ್ರತಿ ದಿನ 8,000 ಕ್ಕೂ ಹೆಚ್ಚು ಬಸ್‌ಗಳನ್ನು ನಿರ್ವಹಿಸುತ್ತದೆ ಮತ್ತು ದಿನಕ್ಕೆ ಕನಿಷ್ಠ ಒಂದು ಅಪಘಾತವನ್ನು ಎದುರಿಸುತ್ತಿದೆ, ಅವುಗಳಲ್ಲಿ ಕೆಲವು ಮಾರಣಾಂತಿಕವಾಗಿವೆ ಎಂದು KSRTC MD ಅನ್ಬು ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಅಪಘಾತಗಳಿಂದಾಗಿ ಪ್ರತಿ ವರ್ಷ, KSRTC 100 ಕೋಟಿ ರೂ. ನಷ್ಟವಾಗುತ್ತಿದೆ. ಅಪಘಾತಗಳಿಗೆ ಸಂಬಂಧಿಸಿದ ವೆಚ್ಚಗಳು ಸಂತ್ರಸ್ತರಿಗೆ ಪರಿಹಾರ, ವೈದ್ಯಕೀಯ ವೆಚ್ಚಗಳು ಮತ್ತು ಹಾನಿಗೊಳಗಾದ ಬಸ್‌ಗಳ ದುರಸ್ತಿ ಇದರಲ್ಲಿ ಸೇರಿದೆ ಎದ ಅವರು ವಿವರಿಸಿದ್ದಾರೆ. ಇತ್ತೀಚೆಗೆ ಮುಂಬೈ ನ HPCL ಮತ್ತು BPCL ಗೆ ಭೇಟಿ ನೀಡಿದ್ದು ಅದರ ಅನುಭವಗಳನ್ನು ಅನ್ಬು ಕುಮಾರ್ ಹಂಚಿಕೊಂಡಿದ್ದಾರೆ, ನಮ್ಮಲ್ಲಿ ಅಪಘಾತ ತಡೆಗಟ್ಟುವ ಕಾರ್ಯವಿಧಾನಗಳಿವೆ ಆದರೆ ಅಪಾತ ಪ್ರಮಾಣವನ್ನು ಕಡಿಮೆ ಮಾಡಲು ಅವರಿಂದ ಕಲಿಯಲು ಬಯಸುತ್ತೇವೆ. ಮತ್ತು KSRTC ಯಲ್ಲಿ ಅದೇ ಕಾರ್ಯವನ್ನು ಜಾರಿಗೆ ತರಲು ಬಯಸುತ್ತೇವೆ ಎಂದಿದ್ದಾರೆ. 2022-2023 ರಲ್ಲಿ, KSRTC 770 ಅಪಘಾತಗಳನ್ನು ದಾಖಲಿಸಿದೆ ಅದರಲ್ಲಿ 231 ಮಾರಣಾಂತಿಕ ಅಪಾತಗಳು. 89 ದೊಡ್ಡ ಪ್ರಮಾಣದ ಅಪಘಾತ ಹಾಗೂ 450 ಸಣ್ಣ ಅಪಘಾತಗಳು ಸಂಭವಿಸಿವೆ, ಅದರಲ್ಲಿ 1,323 ಜನರು ಗಾಯಗೊಂಡಿದ್ದಾರೆ. 2021-2022ರಲ್ಲಿ 494 ಅಪಘಾತಗಳು ಸಂಭವಿಸಿದ್ದು, ಅವುಗಳಲ್ಲಿ 153 ಮಾರಣಾಂತಿಕ, 55 ಪ್ರಮುಖ, 286 ಸಣ್ಣ ಅಪಘಾತಗಳಾಗಿದ್ದು 656 ಮಂದಿ ಗಾಯಗೊಂಡಿದ್ದಾರೆ. ತಮ್ಮ ಅಪಘಾತ ತಡೆಗಟ್ಟುವ ಕಾರ್ಯವಿಧಾನವನ್ನು ಸುಧಾರಿಸಲು ಸಹಾಯ ಮಾಡಲು ತೈಲ ನಿಗಮಗಳಿಂದ ತಜ್ಞರನ್ನು ಆಹ್ವಾನಿಸಲು KSRTC ಯೋಜಿಸಿದೆ.
Advertisement